ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ಗೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ಮುಗಿಸಿ ಹೊರ ಬಂದ ಪ್ರಕರಣದ A1 ಆರೋಪಿ ಶಿವಪ್ರಕಾಶ್ ಚಿಪ್ಪಿ ನನ್ನನ್ನು ಏಕೆ ಈ ಕೇಸ್ನಲ್ಲಿ ಸಿಲುಕಿಸಿದ್ದಾರೆ ಎಂದು ಗೊತ್ತಿಲ್ಲ ಎಂದು ಹೇಳಿದರು.
ನನ್ನನ್ನು ಏಕೆ ಈ ಕೇಸ್ನಲ್ಲಿ ಸಿಲುಕಿಸಿದ್ದಾರೆ ಎಂದು ಗೊತ್ತಿಲ್ಲ ಎಂದು ಚಿಪ್ಪಿ ಹೇಳಿದರು.
‘ನಾನು ರಾಗಿಣಿಯನ್ನು ಇಷ್ಟಪಟ್ಟಿದ್ದು ನಿಜ, ಪ್ರಪೋಸ್ ಮಾಡಿದ್ದು ನಿಜ’
ರಾಗಿಣಿ, ನನ್ನ ಸಂಬಂಧ ಮುಗಿದು ಮೂರು ವರ್ಷ ಆಗಿದೆ. ನಾನು ರಾಗಿಣಿಯನ್ನು ಇಷ್ಟಪಟ್ಟಿದ್ದು ನಿಜ, ಪ್ರಪೋಸ್ ಮಾಡಿದ್ದು ನಿಜ. ನಟಿ ರಾಗಿಣಿಯನ್ನು ಮದುವೆ ಆಗಬೇಕು ಎಂದು ನಿರ್ಧರಿಸಿದ್ದೆ. 2017ರಲ್ಲಿ ಮದುವೆಯ ಪ್ರಸ್ತಾಪ ಮಾಡಿದಾಗ ಬೇಡ ಅಂದಳು. ಕೆರಿಯರ್ ಬಗ್ಗೆ ಯೋಚನೆ ಮಾಡುತ್ತಿದ್ದೇನೆ, ಬೇಡ ಅಂದಿದ್ದಳು ಎಂದು ಶಿವಪ್ರಕಾಶ್ ಹೇಳಿದರು.
ಆಗ ಇಬ್ಬರು ಒಪ್ಪಂದದ ಮೇಲೆಯೇ ದೂರವಾದೆವು. ಅಂದಿನಿಂದ ನನ್ನ ಸಂಪರ್ಕದಲ್ಲಿ ರಾಗಿಣಿ ಇಲ್ಲ. ಖಾಸಗಿ ಹೋಟೆಲ್ನಲ್ಲಿ ನಡೆದ ಗಲಾಟೆಯಲ್ಲಿಯೂ ನಮ್ಮ ಮೇಲೆ ರವಿಶಂಕರ್ ಸುಳ್ಳು ಕೇಸ್ ನೀಡಿದ್ದ. ಪೊಲೀಸರ ವಿಚಾರಣೆಯಲ್ಲಿ ನಮ್ಮ ಮೇಲಿನ ಆರೋಪ ಸುಳ್ಳು ಅಂತಾ ತೀರ್ಮಾನ ಆಯ್ತು. ಈಗ ಮತ್ತೆ ರವಿಶಂಕರ್ ಬೇಕು ಬೇಕು ಅಂತಾನೆ ಡ್ರಗ್ ಕೇಸ್ನಲ್ಲಿ ನನ್ನನ್ನು ಸಿಲುಕಿಸಿದ್ದಾನೆ ಎಂದು ಹೇಳಿದರು.
ನನಗೂ ಡ್ರಗ್ಸ್ಗೂ ದೂರದ ಮಾತು, ನಾನು ಡ್ರಗ್ಸ್ ಸೇವಿಸಿಲ್ಲ. ತನಿಖಾಧಿಕಾರಿಗಳ ಎಲ್ಲಾ ಪ್ರಶ್ನೆಗೂ ನಾನು ಉತ್ತರ ನೀಡಿದ್ದೇನೆ. ಇಷ್ಟು ದಿನ ನಾನು ಎಲ್ಲಿಯೂ ನಾಪತ್ತೆಯಾಗಿಲ್ಲ. ನಿರೀಕ್ಷಣಾ ಜಾಮೀನಿಗಾಗಿ ಕಾಯುತ್ತಿದ್ದೆ. ನಿರೀಕ್ಷಣಾ ಜಾಮೀನು ಪಡೆಯುವುದು ನನ್ನ ಮೂಲಭೂತ ಹಕ್ಕು. ಪ್ರಕರಣ ಕೋರ್ಟ್ನಲ್ಲಿ ಇರೋದ್ರಿಂದ ಹೆಚ್ಚಿಗೆ ನಾನು ಮಾತನಾಡಲ್ಲ. ನಾಳೆಯೂ ತನಿಖಾಧಿಕಾರಿಗಳು ವಿಚಾರಣೆಗೆ ಬರಲು ಹೇಳಿದ್ದಾರೆ, ಬರ್ತೀನಿ ಎಂದು ಸಿಸಿಬಿ ಕಚೇರಿ ಬಳಿ ಶಿವಪ್ರಕಾಶ್ ಚಿಪ್ಪಿ ಹೇಳಿ ಹೊರಟು ಹೋದರು.
ಸ್ಯಾಂಡಲ್ವುಡ್ ಡ್ರಗ್ ಕೇಸ್ ಪ್ರಕರಣ: CCB ವಿಚಾರಣೆಗೆ ಹಾಜರಾದ A1 ಆರೋಪಿ ಶಿವಪ್ರಕಾಶ್ ಚಿಪ್ಪಿ
Published On - 8:01 pm, Thu, 7 January 21