ಸಪ್ನ ಬುಕ್ ಹೌಸ್ ಸಂಸ್ಥಾಪಕ ಸುರೇಶ್ ಶಾ ನಿಧನ

|

Updated on: May 25, 2021 | 7:12 PM

Sapna Book House Suresh Shah: 1966ರಲ್ಲಿ ಸಪ್ನ ಬುಕ್ ಹೌಸ್ ಮಳಿಗೆಯನ್ನು ಪುಟ್ಟದಾಗಿ ಆರಂಭಿಸಿದ್ದ ಸುರೇಶ್ ಸಿ. ಷಾ ಅವರು ನಂತರ ದಿನಗಳಲ್ಲಿ ಸಪ್ನ ಬುಕ್ ಹೌಸ್ ಸಂಸ್ಥೆಯನ್ನು ದೇಶದ ಅತ್ಯಂತ ಪ್ರಮುಖ ಮತ್ತು ಬೃಹತ್ ಪುಸ್ತಕ ಮಳಿಗೆಯನ್ನಾಗಿ ಬೆಳೆಸಿದರು. ಈಗ ಅದು ಭಾರತದ ಅತಿದೊಡ್ಡ ಪುಸ್ತಕ ಮಳಿಗೆ ಎಂದೇ ಹೆಸರಾಗಿದೆ.

ಸಪ್ನ ಬುಕ್ ಹೌಸ್ ಸಂಸ್ಥಾಪಕ ಸುರೇಶ್ ಶಾ ನಿಧನ
ಸುರೇಶ್ ಶಾ
Follow us on

ಬೆಂಗಳೂರು: ಭಾರತದ ಅತಿದೊಡ್ಡ ಪುಸ್ತಕ ಮಳಿಗೆ ಎಂದು ಖ್ಯಾತಿ ಪಡೆದ ಸಪ್ನ ಬುಕ್ ಹೌಸ್ ಸಂಸ್ಥಾಪಕ ಸುರೇಶ್ ಸಿ ಶಾ ಅವರು ಇಂದು ಮಧ್ಯಾಹ್ನ 2.15ಕ್ಕೆ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರರಿಗೆ 94 ವರ್ಷ ವಯಸ್ಸಾಗಿತ್ತು. ಸುರೇಶ್ ಸಿ ಶಾ ಅವರು ಬೆಂಗಳೂರಿನ ಶೇಷಾದ್ರಿಪುರದ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ತಮ್ಮ ಕೊನೆಯುಸಿರೆಳೆದರು.

1966ರಲ್ಲಿ ಸಪ್ನ ಬುಕ್ ಹೌಸ್ ಮಳಿಗೆಯನ್ನು ಪುಟ್ಟದಾಗಿ ಆರಂಭಿಸಿದ್ದ ಸುರೇಶ್ ಸಿ. ಷಾ ಅವರು ನಂತರ ದಿನಗಳಲ್ಲಿ ಸಪ್ನ ಬುಕ್ ಹೌಸ್ ಸಂಸ್ಥೆಯನ್ನು ದೇಶದ ಅತ್ಯಂತ ಪ್ರಮುಖ ಮತ್ತು ಬೃಹತ್ ಪುಸ್ತಕ ಮಳಿಗೆಯನ್ನಾಗಿ ಬೆಳೆಸಿದರು. ಈಗ ಅದು ಭಾರತದ ಅತಿದೊಡ್ಡ ಪುಸ್ತಕ ಮಳಿಗೆ ಎಂದೇ ಹೆಸರಾಗಿದೆ. ಒಟ್ಟು 19 ಶಾಖೆಗಳನ್ನು ಹೊಂದಿರುವ ಸಪ್ನ ಬುಕ್ ಹೌಸ್ ಕನ್ನಡ ಪುಸ್ತಕಗಳನ್ನು ಓದುಗರಿಗೆ ಹೆಚ್ಚಿನ ಪ್ರಮಾಣದಲ್ಲಿ ತಲುಪಿಸುವ ಕೆಲಸವನ್ನು ಸತತವಾಗಿ ಮಾಡಿಕೊಂಡು ಬರುತ್ತಿದೆ.

ಸಪ್ನ ಬುಕ್ ಹೌಸ್​ನ ಮುಖ್ಯಸ್ಥರಾಗಿದ್ದ ಸುರೇಶ್ ಸಿ ಶಾ ಅವರು ಮೂವರು ಪುತ್ರರಾದ ನಿತಿನ್ ಶಾ, ದೀಪಕ್ ಶಾ ಮತ್ತು ಪರೇಶ್ ಶಾ ಅವರನ್ನು ಅಗಲಿದ್ದಾರೆ. ಬುಧವಾರ ಬೆಳಗ್ಗೆ ಹರಿಶ್ಚಂದ್ರ ಘಾಟ್ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಸಪ್ನದ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಲೋಕ ಕಲ್ಯಾಣಕ್ಕೆ ಶಾಸಕರು ಮನೆಯಲ್ಲಿ ಹೋಮ ಮಾಡಲಿ, ಆದರೆ ಜನರ ಬಳಿಯೂ ಮಾಡಿಸೋದು ಸರಿಯಲ್ಲ: ಕೊವಿಡ್ ಟಾಸ್ಕ್​ಫೋರ್ಸ್ ಅಧ್ಯಕ್ಷ ಡಾ ಅಶ್ವತ್ಥ ನಾರಾಯಣ

ಕೊವಿಡ್​ ನಿಯಮ ಉಲ್ಲಂಘನೆ: ಅಧಿಕಾರಿಗಳನ್ನು ನೋಡುತ್ತಲೇ ವಧುವನ್ನೇ ಬಿಟ್ಟು ವರ ಪರಾರಿ!
(Sapna Book House founder Suresh Shah died)

Published On - 6:41 pm, Tue, 25 May 21