ಕೊರೊನಾದಿಂದ ಮುಂದೂಡಲಾಗಿದ್ದ ಸಪ್ತಪದಿ ವಿವಾಹ ಯೋಜನೆಗೆ ಮರುಚಾಲನೆ

| Updated By: ಸಾಧು ಶ್ರೀನಾಥ್​

Updated on: Nov 07, 2020 | 5:43 PM

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಸಪ್ತಪದಿ ಸಾಮೂಹಿಕ ವಿವಾಹ ಯೋಜನೆಗೆ ಸರ್ಕಾರ ಮರುಚಾಲನೆ ನೀಡಿದೆ. ನವೆಂಬರ್ ತಿಂಗಳಲ್ಲಿ 19 ಮತ್ತು 27 ಹಾಗೂ ಡಿಸೆಂಬರ್​ ತಿಂಗಳಲ್ಲಿ 2, 7  ಮತ್ತು  10ರಂದು ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂಬ ಮಾಹಿತಿ ಸಿಕ್ಕಿದೆ. ಧಾರ್ಮಿಕ ದತ್ತಿ‌ ಇಲಾಖೆಯ A ದರ್ಜೆಯ ದೇವಸ್ಥಾನಗಳಲ್ಲಿ ಸಪ್ತಪದಿ ಯೋಜನೆಯಡಿ ಸಾಮೂಹಿಕ ವಿವಾಹ ನಡೆಯಲಿದೆ. ಅರ್ಜಿ ಸಲ್ಲಿಸುವ ವಧು-ವರರು ಮೂರು ದಿನಗಳಲ್ಲಿ ಅವಿವಾಹಿತ ದೃಢೀಕರಣ ಪತ್ರವನ್ನು ನೀಡಬೇಕು ಎಂದು ರಾಜ್ಯದ ಎಲ್ಲಾ ಗ್ರಾಮ […]

ಕೊರೊನಾದಿಂದ ಮುಂದೂಡಲಾಗಿದ್ದ ಸಪ್ತಪದಿ ವಿವಾಹ ಯೋಜನೆಗೆ ಮರುಚಾಲನೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಸಪ್ತಪದಿ ಸಾಮೂಹಿಕ ವಿವಾಹ ಯೋಜನೆಗೆ ಸರ್ಕಾರ ಮರುಚಾಲನೆ ನೀಡಿದೆ. ನವೆಂಬರ್ ತಿಂಗಳಲ್ಲಿ 19 ಮತ್ತು 27 ಹಾಗೂ ಡಿಸೆಂಬರ್​ ತಿಂಗಳಲ್ಲಿ 2, 7  ಮತ್ತು  10ರಂದು ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂಬ ಮಾಹಿತಿ ಸಿಕ್ಕಿದೆ.

ಧಾರ್ಮಿಕ ದತ್ತಿ‌ ಇಲಾಖೆಯ A ದರ್ಜೆಯ ದೇವಸ್ಥಾನಗಳಲ್ಲಿ ಸಪ್ತಪದಿ ಯೋಜನೆಯಡಿ ಸಾಮೂಹಿಕ ವಿವಾಹ ನಡೆಯಲಿದೆ. ಅರ್ಜಿ ಸಲ್ಲಿಸುವ ವಧು-ವರರು ಮೂರು ದಿನಗಳಲ್ಲಿ ಅವಿವಾಹಿತ ದೃಢೀಕರಣ ಪತ್ರವನ್ನು ನೀಡಬೇಕು ಎಂದು ರಾಜ್ಯದ ಎಲ್ಲಾ ಗ್ರಾಮ ಲೆಕ್ಕಿಗರಿಗೆ ಕಂದಾಯ ಇಲಾಖೆ ಸೂಚನೆ ನೀಡಿದೆ.