ಚಿಕ್ಕಬಳ್ಳಾಪುರದಲ್ಲಿ ರಸ್ತೆ ದಾಟುತ್ತಿದ್ದ ಹಾವಿನ ಮೇಲೆ ಹರಿದ ಸ್ಕೂಟಿ..! ಆಮೇಲೇನಾಯ್ತು?
ಚಿಕ್ಕಬಳ್ಳಾಪುರ: ರಸ್ತೆ ದಾಟುತ್ತಿದ್ದ ಭಾರೀ ಗಾತ್ರದ ನಾಗರಹಾವಿನ ಮೇಲೆ ಸ್ಕೂಟಿ ಹರಿದಿದ್ದು.. ಸ್ಕೂಟಿ ಚಕ್ರಕ್ಕೆ ಸಿಲುಕಿದ ನಾಗರಹಾವು ಬೈಕ್ ಸವಾರನ ಮೇಲೆ ಅಟ್ಯಾಕ್ ಮಾಡಿರೋ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ. ನಗರದ ಎಪಿಎಂಸಿ ಮಾರುಕಟ್ಟೆ ಬಳಿ ತನ್ನ ಸ್ಕೂಟಿಯಲ್ಲಿ ಸವಾರ ಮಹಮದ್ ಆಯಾತುಲ್ಲಾ ಎಂಬಾತ ತೆರಳುತ್ತಿದ್ದ ವೇಳೆ ನಾಗರಹಾವು ರಸ್ತೆ ದಾಟುತ್ತಿದ್ದು ಈ ವೇಳೆ ಸ್ಕೂಟಿ ನಾಗರಹಾವಿನ ಮೇಲೆ ಹರಿದಿದೆ. ಈ ವೇಳೆ ಚಕ್ರಕ್ಕೆ ಸಿಲುಕಿದ ಪರಿಣಾಮ ಸವಾರ ಬ್ಯಾಲೆನ್ಸ್ ತಪ್ಪಿ ಸ್ಕೂಟಿ ಸಮೇತ ಕೆಳಗೆ ಬಿದ್ದಿದ್ದಾನೆ. […]
ಚಿಕ್ಕಬಳ್ಳಾಪುರ: ರಸ್ತೆ ದಾಟುತ್ತಿದ್ದ ಭಾರೀ ಗಾತ್ರದ ನಾಗರಹಾವಿನ ಮೇಲೆ ಸ್ಕೂಟಿ ಹರಿದಿದ್ದು.. ಸ್ಕೂಟಿ ಚಕ್ರಕ್ಕೆ ಸಿಲುಕಿದ ನಾಗರಹಾವು ಬೈಕ್ ಸವಾರನ ಮೇಲೆ ಅಟ್ಯಾಕ್ ಮಾಡಿರೋ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.
ನಗರದ ಎಪಿಎಂಸಿ ಮಾರುಕಟ್ಟೆ ಬಳಿ ತನ್ನ ಸ್ಕೂಟಿಯಲ್ಲಿ ಸವಾರ ಮಹಮದ್ ಆಯಾತುಲ್ಲಾ ಎಂಬಾತ ತೆರಳುತ್ತಿದ್ದ ವೇಳೆ ನಾಗರಹಾವು ರಸ್ತೆ ದಾಟುತ್ತಿದ್ದು ಈ ವೇಳೆ ಸ್ಕೂಟಿ ನಾಗರಹಾವಿನ ಮೇಲೆ ಹರಿದಿದೆ. ಈ ವೇಳೆ ಚಕ್ರಕ್ಕೆ ಸಿಲುಕಿದ ಪರಿಣಾಮ ಸವಾರ ಬ್ಯಾಲೆನ್ಸ್ ತಪ್ಪಿ ಸ್ಕೂಟಿ ಸಮೇತ ಕೆಳಗೆ ಬಿದ್ದಿದ್ದಾನೆ. ಆಗ ನಾಗರಹಾವು ಆತನ ಕಾಲಿಗೆ ಅಟ್ಯಾಕ್ ಮಾಡಿದ್ದು ಕೂಡಲೇ ಬೆದರಿದ ಸವಾರ ಎದ್ನೋ ಬಿದ್ನೋ ಅಂತ ಓಡಿದ್ದಾನೆ.
ಆದ್ರೆ ಅಷ್ಟರಲ್ಲೇ ನಾಗರಹಾವು ಅದೇ ಸ್ಕೂಟಿ ಮುಂಭಾಗದ ಓಳಭಾಗದಲ್ಲಿ ಸೇರಿಕೊಂಡಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕ ಪ್ರಥ್ವಿರಾಜ್, ಸ್ಕೂಟಿಯಲ್ಲಿ ಸೇರಿಕೊಂಡಿದ್ದ ನಾಗರಹಾವನ್ನ ಸೆರೆ ಹಿಡಿದಿದ್ದಾರೆ. ಅದೃಷ್ಟವಶಾತ್ ಸಣ್ಣ ಪ್ರಮಾಣದ ಗಾಯವಾಗಿದ್ದ ಸವಾರ ಮಹಮದ್ ಅಯಾತುಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾನೆ.