
ಬೆಂಗಳೂರು, ಮಾರ್ಚ್ 26: ದೇಶದಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಜನಗಣತಿ ನಡೆಯಲಿದೆ. ಅದರಂತಯೇ ಕರ್ನಾಟಕದಲ್ಲಿ 2027ರ ಜನಗಣತಿಯ (Self-Enumeration) ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ಮನೆ ಗಣತಿಯ ಸ್ವಯಂ ಗಣತಿಯನ್ನು ಏಪ್ರಿಲ್ 1ರಿಂದ 15ರವರೆಗೆ ಅಂದರೆ 15 ದಿನ ನಡೆಸಲು ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
2027ರ ಭಾರತದ ಜನಗಣತಿಯ ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ಮನೆ ಗಣತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸ್ವಯಂ-ಗಣತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರ ಭಾಗವಹಿಸುವಿಕೆಯನ್ನು ಸುಗಮಗೊಳಿಸಲು ಭಾರತ ಸರ್ಕಾರವು se.census.gov.in ಎಂಬ ವೆಬ್ ಪೋರ್ಟಲ್ನ್ನು ಅಭಿವೃದ್ಧಿ ಪಡಿಸಿದೆ.
ಇದನ್ನೂ ಓದಿ: ಜಾತಿ ಗಣತಿ: ಮನೆ ಮನೆ ಸರ್ವೇ ಅಂತ್ಯ, ಒಟ್ಟು 6.13 ಕೋಟಿ ಜನರ ಸಮೀಕ್ಷೆ
ಪ್ರಚುರ ಪಡಿಸಲಾದ ಬಳಕೆದಾರರ ಮಾರ್ಗದರ್ಶಿಯ ಬಗ್ಗೆ ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ಸರ್ಕಾರದ ಅಧೀನಕ್ಕೆ ಒಳಪಡುವ ಎಲ್ಲಾ ನಿಗಮ, ಮಂಡಳಿ ಇತ್ಯಾದಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ಸೇರಿದಂತೆ ನಾಗರಿಕರು, ಗಣತಿದಾರರಿಗೆ ಅರಿವು ಮೂಡಿಸುವಂತೆ ನಾಗರಿಕರು, ಉದ್ಯೋಗಿಗಳು, ಗಣತಿದಾರರಿಗೆ ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಏಪ್ರಿಲ್ 1ರಿಂದ 15ರವರೆಗೆ ಒಟ್ಟು 15 ದಿನಗಳ ಕಾಲ ಕರ್ನಾಟಕದ ರಾಜ್ಯದಲ್ಲಿ ನಡೆಯಲಿರುವ ಮನೆಗಳ ಪಟ್ಟಿ ಮತ್ತು ಮನೆ ಗಣತಿಯ ಸ್ವಯಂ-ಗಣತಿಯನ್ನು ಯಶಸ್ವಿಗೊಳಿಸಲು ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯ 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲು ಉದ್ದೇಶಿಸಿದೆ. ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ಮನೆ ಗಣತಿಯಲ್ಲಿ ಮೊದಲ 15 ದಿನ se.census.gov.in ವೆಬ್ ಸೈಟ್ ಮೂಲಕ ಸ್ವಯಂ-ಗಣತಿಗೆ ಅವಕಾಶವಿರುತ್ತದೆ.
ಇದನ್ನೂ ಓದಿ: ಅ. 31ರವರೆಗೆ ಜಾತಿ ಗಣತಿ ಅವಧಿ ವಿಸ್ತರಣೆ: ಸಮೀಕ್ಷೆ ಕಾರ್ಯದಿಂದ ಶಿಕ್ಷಕರ ಕೈಬಿಟ್ಟ ಸರ್ಕಾರ
ಅದರಂತೆ ಮನೆಯ ಯಾವುದೇ ಒಬ್ಬ ಸದಸ್ಯರು ಸುಮಾರು 15 ರಿಂದ 20 ನಿಮಿಷಗಳ ಅವಧಿಯಲ್ಲಿ ಸ್ವಯಂ-ಗಣತಿ ಮಾಡಿ ಮನೆಯ ವಿವರಗಳನ್ನು ಒದಗಿಸಬಹುದು ಮತ್ತು ಮೊಬೈಲ್, ಇಮೇಲ್‌ನಲ್ಲಿ ಸ್ವಯಂ-ಗಣತಿ ಐಡಿ ಪಡೆಯಬಹುದಾಗಿದೆ. ಗಣತಿದಾರರು ಮನೆಗೆ ಭೇಟಿ ನೀಡಿದಾಗ, ದೃಢೀಕರಿಸಲು ಮತ್ತು ಸ್ವಯಂ ಗಣತಿ ದಂತ್ತಾಂಶದ ಅಂತಿಮ ಸಲ್ಲಿಕೆಗಾಗಿ ಗಣತಿ ಐಡಿಯನ್ನು ಅವರೊಂದಿಗೆ ಹಂಚಿಕೊಳ್ಳಬೇಕು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:37 pm, Thu, 26 March 26