AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾತಿ ಗಣತಿ: ಮನೆ ಮನೆ ಸರ್ವೇ ಅಂತ್ಯ, ಒಟ್ಟು 6.13 ಕೋಟಿ ಜನರ ಸಮೀಕ್ಷೆ

ಕರ್ನಾಟಕದಲ್ಲಿ ಸೆಪ್ಟೆಂಬರ್ 22ರಂದು ಆರಂಭವಾದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ಮನೆ ಮನೆ ಗಣತಿ ಇಂದು ಮುಕ್ತಾಯಗೊಂಡಿದೆ. ಈವರೆಗೆ ಶೇ.97.51ರಷ್ಟು (ಜಿಬಿಎ ಹೊರತುಪಡಿಸಿ) ಕಾರ್ಯ ಪೂರ್ಣಗೊಂಡಿದ್ದು, ಜಿಬಿಎ ವ್ಯಾಪ್ತಿಯಲ್ಲಿ 59 ಲಕ್ಷ ಜನರ ಸಮೀಕ್ಷೆ ಆಗಿರುವ ಸಾಧ್ಯತೆ ಇದೆ. ನವೆಂಬರ್ 10ರವರೆಗೆ ಆನ್‌ಲೈನ್ ಮೂಲಕ ಗಣತಿಯಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಹಿಂದುಳಿದ ವರ್ಗಗಳ ಆಯೋಗ ಮಾಹಿತಿ ನೀಡಿದೆ.

ಜಾತಿ ಗಣತಿ: ಮನೆ ಮನೆ ಸರ್ವೇ ಅಂತ್ಯ, ಒಟ್ಟು 6.13 ಕೋಟಿ ಜನರ ಸಮೀಕ್ಷೆ
ಜಾತಿ ಗಣತಿ
ಪ್ರಸನ್ನ ಹೆಗಡೆ
|

Updated on:Oct 31, 2025 | 7:53 PM

Share

ಬೆಂಗಳೂರು, ಅಕ್ಟೋಬರ್​ 31: ಸೆಪ್ಟೆಂಬರ್ 22ರಿಂದ ರಾಜ್ಯದಲ್ಲಿ ಆರಂಭವಾಗಿದ್ದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ (Caste Census) ಮನೆ ಮನೆ ಗಣತಿ ಕಾರ್ಯಕ್ಕೆ ತೆರೆ ಬಿದ್ದಿದೆ. ನ.10ರವರೆಗೂ ಆನ್‌ಲೈನ್ ಸಮೀಕ್ಷೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದ್ದು, ರಾಜ್ಯಾದ್ಯಂತ ಈವರೆಗೆ ಶೇ.97.51 (ಜಿಬಿಎ ಹೊರತುಪಡಿಸಿ)ರಷ್ಟು ಸಮೀಕ್ಷೆ ನಡೆದಿದೆ ಎಂದು ಹಿಂದುಳಿದ ವರ್ಗಗಳ ಆಯೋಗ ತಿಳಿಸಿದೆ.

ರಾಜ್ಯಾದ್ಯಂತ 6.13 ಕೋಟಿ ಜನರ ಸಮೀಕ್ಷೆ

ಜಿಬಿಎ ಹೊರತುಪಡಿಸಿ 1.48 ಕೋಟಿ ಕುಟುಂಬಗಳ ಪೈಕಿ 1.46 ಕೋಟಿ ಕುಟುಂಬಗಳ ಸಮೀಕ್ಷೆ ಕಾರ್ಯ ನಡೆದಿದೆ. 5.68 ಕೋಟಿ ಜನಸಂಖ್ಯೆ ಪೈಕಿ 5.54 ಕೋಟಿ ಜನರ ಗಣತಿ ಪೂರ್ಣಗೊಂಡಿದೆ. ಜಿಬಿಎ ವ್ಯಾಪ್ತಿಯಲ್ಲಿ 59 ಲಕ್ಷ ಜನರ ಸಮೀಕ್ಷೆ ಆಗಿರುವ ಸಾಧ್ಯತೆ ಇದ್ದು, ರಾಜ್ಯಾದ್ಯಂತ 6.13 ಕೋಟಿ ಜನರ ಸರ್ವೇ ಆಗಿರಬಹುದೆಂದು ತಿಳಿಸಲಾಗಿದೆ. 1.22 ಲಕ್ಷ ಸಿಬ್ಬಂದಿಯಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಕಾರ್ಯ ನಡೆದಿದೆ. ಸಮೀಕ್ಷೆಯಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳಲು ಇನ್ನೂ ಅವಕಾಶವಿದ್ದು, ವದಂತಿಗಳಿಗೆ ಕಿವಿಗೊಡದೆ ಗಣತಿಯಲ್ಲಿ ಭಾಗಿಯಾಗುವಂತೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: ಸುಧಾ ಮೂರ್ತಿ ದಂಪತಿ ಖಾಸಗಿ ಮಾಹಿತಿ ಬಹಿರಂಗ; ಶಾಸಕ ಸುರೇಶ್​ ಕುಮಾರ್​ ಕಿಡಿ

ಸೆಪ್ಟೆಂಬರ್ 22ರಿಂದ ಆರಂಭವಾಗಿದ್ದ ಜಾತಿಗಣತಿಯನ್ನು ಅಕ್ಟೋಬರ್ 7ರ ಒಳಗೆ ಮುಕ್ತಾಯಗೊಳಿಸಲು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಆದರೆ, ಗಣತಿ ಕಾರ್ಯ ಬಾಕಿ ಉಳಿದ ಹಿನ್ನಲೆ ಅಕ್ಟೋಬರ್​ 18ರ ವರೆಗೆ ವಿಸ್ತರಿಸಲಾಗಿತ್ತು. ಆದರೆ ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಸಮೀಕ್ಷೆ ಕಾರ್ಯ ಕುಂಟುತ್ತಾ ಸಾಗುತ್ತಿದ್ದ ಹಿನ್ನಲೆ ಈ ಬಗ್ಗೆ ಜಿಬಿಎ ಮುಖ್ಯ ಆಯುಕ್ತರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಪತ್ರ ಕೂಡ ಬರೆದಿದ್ದರು. ನಿಗದಿತ ಗುರಿ 16 ಮನೆಗಳ ಬದಲು ಸರಾಸರಿ 7-8 ಮನೆಗಳ ಸಮೀಕ್ಷೆ ಆಗುತ್ತಿರುವ ಬಗ್ಗೆ ಗಮನ ಸೆಳೆದಿದ್ದರು. ಅದಾಗಿಯೂ ಬಹುತೇಕ ಮನೆಗಳ ಸರ್ವೇ ಬಾಕಿ ಉಳಿದ ಹಿನ್ನಲೆ ಅವಧಿಯನ್ನ ಮತ್ತೆ ಹೆಚ್ಚಿಸಿ ಅಕ್ಟೋಬರ್ 31ಕ್ಕೆ ಡೆಡ್​ಲೈನ್​ ನೀಡಲಾಗಿತ್ತು. ಇಂದಿಗೆ ಆ ಅವಧಿ ಮುಗಿದ ಹಿನ್ನಲೆ, ಮನೆ ಮನೆಗೆ ತೆರಳಿ ಗಣತಿ ಮಾಡುವ ಕಾರ್ಯವನ್ನ ಅಂತ್ಯಗೊಳಿಸಲಾಗಿದೆ.

ವರದಿ: ಲಕ್ಷ್ಮೀನರಸಿಂಹ, Tv9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:51 pm, Fri, 31 October 25