ಹಿರಿಯ ಪತ್ರಕರ್ತ ನಾಗರಾಜ ದೀಕ್ಷಿತ್ ಇನ್ನಿಲ್ಲ

| Updated By: ಸಾಧು ಶ್ರೀನಾಥ್​

Updated on: Sep 18, 2020 | 2:32 PM

[lazy-load-videos-and-sticky-control id=”i31nfnn5H8A”] ಬೆಂಗಳೂರು: ಹಿರಿಯ ಪತ್ರಕರ್ತ ನಾಗರಾಜ ದೀಕ್ಷಿತ್ ಹೆಚ್.ಬಿ. ಇಂದು ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ. ಅನೇಕ ಟಿವಿ ಮಾಧ್ಯಮಗಳಲ್ಲಿ ಹಾಗೂ ವಿವಿಧ ಪತ್ರಿಕೆಗಳಲ್ಲಿ 25 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಹಿರಿಯ ಪತ್ರಕರ್ತ ನಾಗರಾಜ ದೀಕ್ಷಿತ್ ಅನಾರೋಗ್ಯ ಸಮಸ್ಯೆಯಿಂದ ಪತ್ರಿಕೋದ್ಯಮವನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ. ರಾಜ್ಯದ ಅನೇಕ ಟಿವಿ ವಾಹಿನಿಗಳಲ್ಲಿ ಕೆಲಸ ಮಾಡಿದ್ದ ದೀಕ್ಷಿತ್ ಟಿವಿ9ನಲ್ಲಿ ಇನ್ ಪುಟ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕೆಲ ತಿಂಗಳಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ […]

ಹಿರಿಯ ಪತ್ರಕರ್ತ ನಾಗರಾಜ ದೀಕ್ಷಿತ್ ಇನ್ನಿಲ್ಲ
Follow us on

[lazy-load-videos-and-sticky-control id=”i31nfnn5H8A”]

ಬೆಂಗಳೂರು: ಹಿರಿಯ ಪತ್ರಕರ್ತ ನಾಗರಾಜ ದೀಕ್ಷಿತ್ ಹೆಚ್.ಬಿ. ಇಂದು ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ.

ಅನೇಕ ಟಿವಿ ಮಾಧ್ಯಮಗಳಲ್ಲಿ ಹಾಗೂ ವಿವಿಧ ಪತ್ರಿಕೆಗಳಲ್ಲಿ 25 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಹಿರಿಯ ಪತ್ರಕರ್ತ ನಾಗರಾಜ ದೀಕ್ಷಿತ್ ಅನಾರೋಗ್ಯ ಸಮಸ್ಯೆಯಿಂದ ಪತ್ರಿಕೋದ್ಯಮವನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ. ರಾಜ್ಯದ ಅನೇಕ ಟಿವಿ ವಾಹಿನಿಗಳಲ್ಲಿ ಕೆಲಸ ಮಾಡಿದ್ದ ದೀಕ್ಷಿತ್ ಟಿವಿ9ನಲ್ಲಿ ಇನ್ ಪುಟ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಕೆಲ ತಿಂಗಳಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದರು. ಆದರೆ ಗುರುವಾರ ತಡರಾತ್ರಿ ತೀವ್ರ ಅನಾರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದಾರೆ.

ದೀಕ್ಷಿತ್ ಕೇವಲ ಪತ್ರಿಕೋದ್ಯಮದಲಷ್ಟೇ ಅಲ್ಲದೆ ರಂಗಭೂಮಿಯಲ್ಲೂ ತಮ್ಮ ಕಲೆಯನ್ನು ಪ್ರದರ್ಶಿಸಿದ್ದರು. ಹಲವು ನಾಟಕ ತಂಡಗಳಲ್ಲಿ ಸಕ್ರಿಯ ಸದಸ್ಯರಾಗಿದ್ರು. ಅನೇಕ ಪಾತ್ರಗಳಿಗೆ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ.. ದೇವರು, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಟಿವಿ9 ಸಂತಾಪ ಸೂಚಿಸುತ್ತಿದೆ.

ನಾಗರಾಜ ದೀಕ್ಷಿತ್ ನಿಧನಕ್ಕೆ ಸಿಎಂ ಬಿಎಸ್‌ವೈ ಸಂತಾಪ:
ಹಿರಿಯ ಪತ್ರಕರ್ತ ನಾಗರಾಜ ದೀಕ್ಷಿತ್ ಹೆಚ್.ಬಿ. ನಿಧನಕ್ಕೆ ಸಿಎಂ ಬಿಎಸ್‌ವೈ ಸಂತಾಪ ಸೂಚಿಸಿದ್ದಾರೆ. ಜನವಾಹಿನಿ ದಿನಪತ್ರಿಕೆ, ಜನಶ್ರೀ ಹಾಗೂ ಟಿವಿ9 ವಾಹಿನಿಗಳಲ್ಲಿ ಕಾರ್ಯನಿರ್ವಹಿಸಿದ್ದ ನಾಗರಾಜ ದೀಕ್ಷಿತ್ ಅವರದ್ದು ಬಹುಮುಖ ಪ್ರತಿಭೆ. ಮಾಧ್ಯಮರಂಗ ಪ್ರತಿಭಾವಂತರೊಬ್ಬರನ್ನ ಕಳೆದುಕೊಂಡಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಮೃತರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೆಹಲಿಯಲ್ಲಿ ಸಿಎಂ ಬಿ.ಎಸ್​.ಯಡಿಯೂರಪ್ಪ ಸಂತಾಪ ಸೂಚಿಸಿದ್ರು.

ಬಹುಮುಖ ಪ್ರತಿಭೆ ಸರಳ ಸಜ್ಜನ ಪತ್ರಕರ್ತರಾಗಿದ್ದ ದೀಕ್ಷಿತ್:
ಹಿರಿಯ ಪತ್ರಕರ್ತ ನಾಗರಾಜ ದೀಕ್ಷಿತ್ ನಿಧನಕ್ಕೆ H.D.ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ. ಬಹುಮುಖ ಪ್ರತಿಭೆ ಸರಳ ಸಜ್ಜನ ಪತ್ರಕರ್ತರಾಗಿದ್ದ ದೀಕ್ಷಿತ್ ಅವರ ಅಗಲಿಕೆ ನೋವನ್ನು ತಂದಿದೆ. ನೋವು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಲಿ ಎಂದು H.D.ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.

Published On - 10:36 am, Fri, 18 September 20