ಮಾದಕ ದ್ರವ್ಯ ನಿಯಂತ್ರಣಕ್ಕೆ ಪ್ರತ್ಯೇಕ ಡಿಸಿಗಳನ್ನು ನೇಮಿಸಲಾಗುವುದು -ಅಬಕಾರಿ ಸಚಿವ ಗೋಪಾಲಯ್ಯ

|

Updated on: Mar 30, 2021 | 4:20 PM

ಸರ್ಕಾರ ಕೊಟ್ಟ ಟಾರ್ಗೆಟ್​ಅನ್ನು ಈಗಾಗಲೇ ಮುಟ್ಟಿದ್ದೇವೆ. ಇನ್ನು, ತಿಂಗಳ ಅಂತ್ಯದಲ್ಲಿ ಇನ್ನೂ ಹೆಚ್ಚಿನ ಆದಾಯ ಬರುವ ಸಾಧ್ಯತೆ ಇದೆ.

ಮಾದಕ ದ್ರವ್ಯ ನಿಯಂತ್ರಣಕ್ಕೆ ಪ್ರತ್ಯೇಕ ಡಿಸಿಗಳನ್ನು ನೇಮಿಸಲಾಗುವುದು -ಅಬಕಾರಿ ಸಚಿವ ಗೋಪಾಲಯ್ಯ
ಅಬಕಾರಿ ಸಚಿವ ಗೋಪಾಲಯ್ಯ
Follow us on

ಬೆಂಗಳೂರು: ಸರ್ಕಾರ ಕೊಟ್ಟ ಟಾರ್ಗೆಟ್​ಅನ್ನು ಈಗಾಗಲೇ ಮುಟ್ಟಿದ್ದೇವೆ. ಇನ್ನು, ತಿಂಗಳ ಅಂತ್ಯದಲ್ಲಿ ಇನ್ನೂ ಹೆಚ್ಚಿನ ಆದಾಯ ಬರುವ ಸಾಧ್ಯತೆ ಇದೆ. 2020-21ನೇ ಸಾಲಿನ 22700 ಕೋಟಿ ಆದಾಯ ತಲುಪಿದ್ದು, ಮಾರ್ಚ್ 31ರವರೆಗೆ 200 ಕೋಟಿ ಹೆಚ್ಚುವರಿಯಾಗಿ ಸಂಗ್ರಹವಾಗಲಿದೆ ಎಂದು ವಿಧಾನಸೌಧದಲ್ಲಿ ಅಬಕಾರಿ ಸಚಿವ ಗೋಪಾಲಯ್ಯ ಮಾತನಾಡಿದ್ದಾರೆ.

ಸಿಎಲ್ 7, ಎಂಎಸ್‌ಐಎಲ್ ಪರವಾನಗಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. 60 ಜೀಪ್ ಖರೀದಿಸಲು ಅನುಮತಿ ಸಿಕ್ಕಿದೆ. 300 ಬೈಕ್, ಡಿಸಿ ಕಚೇರಿಗೆ 4 ರಿವಾಲ್ವರ್ ನೀಡಲು ನಿರ್ಧಾರ ಮಾಡಲಾಗಿದೆ. ಗಾಂಜಾ, ಮಾದಕ ದ್ರವ್ಯ ನಿಯಂತ್ರಣಕ್ಕೆ ಪ್ರತ್ಯೇಕ ಡಿಸಿ ನೇಮಕಾತಿ ಮಾಡಲಾಗುತ್ತದೆ. ಈ ಮೂಲಕ ಮಾದಕ ವಸ್ತುಗಳ ಸಾಗಣೆ ತಡೆಯಲು ಚಿಂತನೆ ನಡೆಸಲಾಗಿದೆ. ಈ ಕುರಿತಂತೆ ಕಾನೂನು ಮತ್ತು ಗೃಹ ಸಚಿವರ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗವುದು ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಸ್ವತಃ ಆಸ್ಪತ್ರೆಗೆ ದಾಖಲಿಸಿದ ಸಚಿವ ಗೋಪಾಲಯ್ಯ

Published On - 2:11 pm, Tue, 30 March 21