AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramesh Jarkiholi CD case: ವಸಂತನಗರದ ಕೋರ್ಟ್​ಗೆ ತೆರಳಿ ಹೇಳಿಕೆ ಪಡೆಯುತ್ತಿರುವ ನ್ಯಾಯಾಧೀಶರು

ನ್ಯಾಯಾಧೀಶರ ಜತೆ ಮಹಿಳಾ ಟೈಪಿಸ್ಟ್, ಯುವತಿ ಮಾತ್ರ ಉಪಸ್ಥಿತರಿದ್ದಾರೆ. CRPC ಸೆಕ್ಷನ್ 164ರಡಿ ಯುವತಿಯ ಹೇಳಿಕೆ ದಾಖಲು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.

Ramesh Jarkiholi CD case: ವಸಂತನಗರದ ಕೋರ್ಟ್​ಗೆ ತೆರಳಿ ಹೇಳಿಕೆ ಪಡೆಯುತ್ತಿರುವ ನ್ಯಾಯಾಧೀಶರು
ವಕೀಲ ಜಗದೀಶ್
guruganesh bhat
|

Updated on:Mar 30, 2021 | 3:58 PM

Share

ಬೆಂಗಳೂರು: ಬೆಂಗಳೂರಿನ ವಸಂತನಗರದಲ್ಲಿರುವ ಗುರುನಾನಕ್ ಭವನದಲ್ಲಿರುವ ವಿಶೇಷ ಕೋರ್ಟ್ ಹಾಲ್​​ನಲ್ಲಿ ಯುವತಿಯ ಹೇಳಿಕೆ ದಾಖಲು ಮಾಡಿಕೊಳ್ಳಲು ಮಹಿಳಾ ಟೈಪಿಸ್ಟ್ ಜತೆ ಎಸಿಎಂಎಂ ನ್ಯಾಯಾಧೀಶರು ತೆರಳಿದ್ದಾರೆ. ಯುವತಿ ಮೂರು ಗಂಟೆಯ ಹೊತ್ತಿಗೆ ಗುರುನಾನಕ್ ಭವನದಲ್ಲಿರುವ ವಿಶೇಷ ಕೋರ್ಟ್ ಹಾಲ್​ನಲ್ಲಿ ಉಪಸ್ಥಿತರಿದ್ದು,  ಮಧ್ಯಾಹ್ನ 3 ಗಂಟೆಗೆ ಕಾರಿನಲ್ಲಿ ಸ್ಥಳಕ್ಕೆ ನ್ಯಾಯಾಧೀಶರು ತೆರಳಿದ್ದಾರೆ ಎಂದು ತಿಳಿದುಬಂದಿದೆ. ಕೊವಿಡ್ ಹಿನ್ನೆಲೆಯಲ್ಲಿ ಗುರುನಾನಕ್ ಭವನದಲ್ಲಿ ವಿಶೇಷ ನ್ಯಾಯಾಲಯ ‌ನಿರ್ಮಾಣವಾಗಿತ್ತು. ಈ ಸ್ಥಳಕ್ಕೆ ಹೇಳಿಕೆ ಪಡೆಯಲು ನ್ಯಾಯಾಧೀಶರು ತೆರಳಿದ್ದಾರೆ. ನ್ಯಾಯಾಧೀಶರ ಜತೆ ಮಹಿಳಾ ಟೈಪಿಸ್ಟ್, ಯುವತಿ ಮಾತ್ರ ಉಪಸ್ಥಿತರಿದ್ದಾರೆ. CRPC ಸೆಕ್ಷನ್ 164ರಡಿ ಯುವತಿಯ ಹೇಳಿಕೆ ದಾಖಲು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ. ಯುವತಿಯಿರುವ ಸ್ಥಳಕ್ಕೇ ತೆರಳಿ ಹೇಳಿಕೆ ಪಡೆಯಲು 24ನೇ ಎಸಿಎಂಎಂ ನ್ಯಾಯಾಧೀಶರು ನಿಶ್ಚಯಿಸಿದ್ದಾರೆ.  ಎಸಿಎಂಎಂ ನ್ಯಾಯಾಲಯಕ್ಕೆ ಯುವತಿ ಆಗಮಿಸುತ್ತಾಳೆ ಎಂಬ ನಿರೀಕ್ಷೆ ಮೀರಿ ಕ್ಷಣ ಕ್ಷಣಕ್ಕೂ ಈ ಪ್ರಕರಣ ತಿರುಚು ಪಡೆಯುತ್ತಿದೆ. 

ಈ ಮೊದಲು ಬೆಳಗ್ಗೆ ಕೋರ್ಟ್​ಗೆ ಆಗಮಿಸಿದ್ದ ಯುವತಿಪರ ವಕೀಲ ಜಗದೀಶ್, ‘ನ್ಯಾಯಾಲಯ ಯಾವಾಗ ಹೇಳುತ್ತೋ ಆವಾಗ ಯುವತಿಯನ್ನು ಕರೆದುಕೊಂಡು ಬರುತ್ತೇವೆ. ನ್ಯಾಯಾಲಯ ಕರೆತನ್ನಿ ಅಂದ್ರೆ ಕರೆದುಕೊಂಡು ಬರ್ತಿನಿ. ಸೆಕ್ಯೂರಿಟಿ ಸಿದ್ದತೆಯಾದ ತಕ್ಷಣ ಅನುಮತಿ ಕೊಡಬಹುದು. ಯುವತಿ ಇರೋ ಜಾಗದಲ್ಲಿ ಈಗಾಗಲೇ ಭದ್ರತೆ ಒದಗಿಸಲಾಗಿದೆ. ನ್ಯಾಯಾಲಯ ಅನುಮತಿ ಕೊಟ್ಟ ತಕ್ಷಣ ಕರೆದುಕೊಂಡು ಬರ್ತೀನಿ. ಕಳೆದ 28 ದಿನಗಳಿಂದ ಆಕೆ ಒತ್ತಡದಲ್ಲಿದ್ದರು. ಅವರ ಆರೋಗ್ಯ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದರು. ವಕೀಲರ ಹೇಳಿಕೆ ಪ್ರಕಾರ ಯುವತಿ 24ನೇ ಎಸಿಎಂಎಂ ಕೋರ್ಟ್​ಗೆ ಯುವತಿ ಇಂದೇ ಹಾಜರಾಗುತ್ತಾಳೆ ಎಂದು ಹೇಳಲಾಗಿತ್ತು.

ಮೊದಲು ಕೋರ್ಟ್​ನಲ್ಲೇ ಹೇಳಿಕೆ ದಾಖಲು ಮೊದಲು ಸಿಆರ್‌ಪಿಸಿ 164 ಪ್ರಕಾರ ಹೇಳಿಕೆ ದಾಖಲು ಮಾಡುತ್ತೇವೆ. ನಂತರ ಯುವತಿಯ ಹೇಳಿಕೆ ಪಡೆಯುತ್ತೇವೆ. ಹೇಳಿಕೆ ಪಡೆದ ಬಳಿಕ ತನಿಖಾಧಿಕಾರಿಗೆ ಒಪ್ಪಿಸುತ್ತೇವೆ ಎಂದು ಸಿಡಿ ಪ್ರಕರಣದ ವಿಚಾರಣೆ ವೇಳೆ 24ನೇ ಎಸಿಎಂಎಂ ನ್ಯಾಯಾಧೀಶರು ಸೂಚಿಸಿದ್ದರು. ಈ ವೇಳೆ ಕೋರ್ಟ್​ನಲ್ಲಿ ಯುವತಿ ಹೇಳಿಕೆ ದಾಖಲಿಸಲು ಯಾವುದೇ ರೀತಿಯ ಆಕ್ಷೇಪ ವ್ಯಕ್ತವಾಗಿರಲಿಲ್ಲ.

ಎಸ್ಐಟಿ ಹಾಗೂ ತನಿಖಾಧಿಕಾರಿ ಮೇಲೆ ಸಂತ್ರಸ್ಥೆಗೆ ನಂಬಿಕೆ ಇಲ್ಲ ಎಂದು ವಕೀಲ ಜಗದೀಶ್ ವಾದಿಸಿದ್ದರು. ಇದೇ ವೇಳೆ ತನಿಖಾಧಿಕಾರಿ ಕವಿತಾ ಅವರು, ‘ನಾವು ಇದುವರೆಗೂ ಯುವತಿಯ ಮುಖ ನೋಡಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.  ಈ ವೇಳೆ ಮೊದಲು ಯುವತಿಯ ಹೇಳಿಕೆ ಪಡೆಯುತ್ತೇವೆ, ನಂತರ ತನಿಖಾಧಿಕಾರಿಗಳು ಮುಂದಿನ ಹೇಳಿಕೆ ಪಡೆಯಲಿ ಎಂದು ನ್ಯಾಯಾಧೀಶರು ಆದೇಶಿಸಿದ್ದರು.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? 

ಯಾವುದೇ ಪ್ರಭಾವಕ್ಕೆ ಒಳಗಾಗದೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ: ಬಸವರಾಜ ಬೊಮ್ಮಾಯಿ ಸ್ಪಷ್ಟನೆ

Published On - 3:40 pm, Tue, 30 March 21

ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು