ಕಾಂಗ್ರೆಸ್ ಮುಖಂಡ, ಸಹಚರರಿಂದ ASP ಮೇಲೆ ಕಾರು ಚಲಾಯಿಸುವುದಕ್ಕೆ ಯತ್ನ.. ಐವರು ಅರೆಸ್ಟ್
ASP ಬದ್ರಿನಾಥ್ ಕಾರ್ ತಡೆದು ತಪಾಸಣೆಯ ಮಾಡಲು ಮುಂದಾಗಿದ್ದಾರೆ. ಆಗ ಕಾಂಗ್ರೆಸ್ ಮುಖಂಡ ಹಾಗೂ ಸಹಚರರು ASP ಮೇಲೆ ಕಾರನ್ನ ಹಾಯಿಸಲು ಪ್ರಯತ್ನಿಸಿದ್ದಾರೆ. ASP ಕಾಲಿಗೆ ಕಾರು ತಾಕಿದ್ದು ಅವರು ನೆಲಕ್ಕೆ ಬಿದ್ದಿದ್ದಾರೆ.
ಕಾರವಾರ: ಕಾಂಗ್ರೆಸ್ ಮುಖಂಡ ಹಾಗೂ ಸಹಚರರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಮೇಲೆ ಕಾರು ಚಲಾಯಿಸುವುದಕ್ಕೆ ಪ್ರಯತ್ನಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಹಟ್ಟಿಕೇರಿಯ ಐಆರ್‌ಬಿ ಟೋಲ್ ಬಳಿ ನಡೆದಿದೆ. ಈ ಸಂಬಂಧ ಸದ್ಯ ಐವರನ್ನು ವಶಕ್ಕೆ ಪಡೆಯಲಾಗಿದೆ.
ನಿನ್ನೆ ಮಧ್ಯಾಹ್ನ ಟೋಲ್ನಲ್ಲಿ ಗಲಾಟೆ ನಡೆಯುತ್ತಿತ್ತು. ಇದೇ ವೇಳೆ ಉತ್ತರ ಕನ್ನಡ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ್ ಕಾರಿನಲ್ಲಿ ಬಂದಿದ್ದರು. ಈ ವೇಳೆ ASP ಬದ್ರಿನಾಥ್ ಕಾರ್ ತಡೆದು ತಪಾಸಣೆಯ ಮಾಡಲು ಮುಂದಾಗಿದ್ದಾರೆ. ಆಗ ಕಾಂಗ್ರೆಸ್ ಮುಖಂಡ ಹಾಗೂ ಸಹಚರರು ASP ಮೇಲೆ ಕಾರನ್ನ ಹಾಯಿಸಲು ಪ್ರಯತ್ನಿಸಿದ್ದಾರೆ. ASP ಕಾಲಿಗೆ ಕಾರು ತಾಕಿದ್ದು ಅವರು ನೆಲಕ್ಕೆ ಬಿದ್ದಿದ್ದಾರೆ. ಸದ್ಯ ಅಲ್ಲೇ ಇದ್ದ ಸಿಬ್ಬಂದಿ ಅವರನ್ನು ಮೇಲಕ್ಕೆ ಎತ್ತಿದ್ದಾರೆ. ಈ ಎಲ್ಲಾ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸದ್ಯ ಟೋಲ್ ಸಿಬ್ಬಂದಿ ದೂರು ಆಧರಿಸಿ ಐವರನ್ನು ಬಂಧಿಸಲಾಗಿದೆ. ಸುರೇಶ್ ನಾಯಕ ಅಲಗೇರಿ, ಬೊಮ್ಮಯ್ಯ ನಾಯಕ, ಗೋಪಾಲ ನಾಯಕ, ಸುರೇಶ್ ಗಿರಿಯಣ್ಣ ನಾಯಕ, ಅಪ್ರಾಪ್ತ ಬಾಲಕ ಸೇರಿದಂತೆ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಯುವತಿ ಕೈ ಬರಹದಲ್ಲಿ.. ನನ್ನನ್ನು ಕೊಲೆ ಮಾಡುವುದಕ್ಕೆ ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ ಎಂದು ದೂರು