ನೆಲಮಂಗಲ: KSRTC ಬಸ್, ಎರಡು ಲಾರಿಗಳ ನಡುವೆ ಸರಣಿ ಅಪಘಾತ

|

Updated on: Jan 22, 2020 | 6:59 AM

ನೆಲಮಂಗಲ: KSRTC ಬಸ್ ಮತ್ತು ಎರಡು ಲಾರಿಗಳ ನಡುವೆ ಸರಣಿ ಅಪಘಾತವಾಗಿರುವ ಭೀಕರ ಘಟನೆ ಮಾದವಾರ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ಪೆಟ್ರೋಲ್ ಟ್ಯಾಂಕರ್ ಲಾರಿಯನ್ನು ಓವರ್‌ಟೇಕ್ ಮಾಡುವ ವೇಳೆ ಬಸ್ ಡಿಕ್ಕಿಯಾಗಿದೆ. ಇದೇ ವೇಳೆ ಹಿಂದೆಯಿಂದ ಬಂದ ಕಟ್ಟಿಗೆ ತುಂಬಿದ್ದ ಲಾರಿ ಡಿಕ್ಕಿಯಾಗಿದೆ. ಟ್ಯಾಂಕರ್‌ನಿಂದ ಪೆಟ್ರೋಲ್ ಸುರಿಯುತ್ತಿರುವ ಹಿನ್ನೆಲೆ ಅಪಘಾತ ಸಂಭವಿಸಿದ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ವಾಹನಗಳು ಬೆಂಗಳೂರು-ತುಮಕೂರು ಮಾರ್ಗವಾಗಿ ಚಲಿಸುತ್ತಿದ್ದವು. ಕೆಎಸ್​ಆರ್​ಟಿಸಿ ಬಸ್ ಬೆಂಗಳೂರಿನ ಶಾಂತಿನಗರದಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ವೇಳೆ ಈ […]

ನೆಲಮಂಗಲ: KSRTC ಬಸ್, ಎರಡು ಲಾರಿಗಳ ನಡುವೆ ಸರಣಿ ಅಪಘಾತ
Follow us on

ನೆಲಮಂಗಲ: KSRTC ಬಸ್ ಮತ್ತು ಎರಡು ಲಾರಿಗಳ ನಡುವೆ ಸರಣಿ ಅಪಘಾತವಾಗಿರುವ ಭೀಕರ ಘಟನೆ ಮಾದವಾರ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ಪೆಟ್ರೋಲ್ ಟ್ಯಾಂಕರ್ ಲಾರಿಯನ್ನು ಓವರ್‌ಟೇಕ್ ಮಾಡುವ ವೇಳೆ ಬಸ್ ಡಿಕ್ಕಿಯಾಗಿದೆ. ಇದೇ ವೇಳೆ ಹಿಂದೆಯಿಂದ ಬಂದ ಕಟ್ಟಿಗೆ ತುಂಬಿದ್ದ ಲಾರಿ ಡಿಕ್ಕಿಯಾಗಿದೆ. ಟ್ಯಾಂಕರ್‌ನಿಂದ ಪೆಟ್ರೋಲ್ ಸುರಿಯುತ್ತಿರುವ ಹಿನ್ನೆಲೆ ಅಪಘಾತ ಸಂಭವಿಸಿದ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

ವಾಹನಗಳು ಬೆಂಗಳೂರು-ತುಮಕೂರು ಮಾರ್ಗವಾಗಿ ಚಲಿಸುತ್ತಿದ್ದವು. ಕೆಎಸ್​ಆರ್​ಟಿಸಿ ಬಸ್ ಬೆಂಗಳೂರಿನ ಶಾಂತಿನಗರದಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ 4ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೆಟ್ರೋಲ್ ತುಂಬಿದ್ದ ಲಾರಿಯಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಕಟ್ಟಿಗೆ ತುಂಬಿದ್ದ ಲಾರಿ ಚಾಲಕ ಲಾರಿಯಲ್ಲಿ ಸಿಕ್ಕು 2ಗಂಟೆಗಳ ಕಾಲ ನರಳಾಡಿದ್ದಾನೆ. ಪೀಣ್ಯ, ರಾಜಾಜಿನಗರ ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ನೆರವಿನಿಂದ ಚಾಲಕನ ರಕ್ಷಣೆ ಮಾಡಲಾಗಿದೆ.

ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತ ಸ್ಥಳದಲ್ಲಿ ಜನ ಜಮಾವಣೆಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ4ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಟೋಲ್ ಸಿಬ್ಬಂದಿ ಹಾಗೂ ಸಂಚಾರಿ ಪೋಲಿಸರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನಗಳ ಸುಗಮ ಸಂಚಾರಕ್ಕೆ ಹರಸಾಹಸ ಮಾಡಲಾಗುತ್ತಿದೆ.