ಬೆಂಬಲ ಬೆಲೆಗೆ ಕಾದು ಕಾದು ರೈತ ಹೈರಾಣ, ಕಲ್ಬುರ್ಗಿಯಲ್ಲಿನ್ನೂ ತೆರೆಯದ ಖರೀದಿ ಕೇಂದ್ರ
ಕಲಬುರಗಿ: ಸರ್ಕಾರ ಈವರೆಗೆ ರೈತರಿಂದ ತೊಗರಿ ಖರೀದಿಸಲು ಮುಂದಾಗಿಲ್ಲ ಈ ಹಿನ್ನೆಲೆ ಹಣದ ಸಮಸ್ಯೆಯಿಂದ ರೈತರು ಕಡಿಮೆ ಬೆಲೆಗೆ ತೊಗರಿ ಮಾರಾಟ ಮಾಡಲು ಮುಂದಾಗಿದ್ದಾರೆ. ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬೇಸತ್ತು ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ತೊಗರಿ ಮಾರುತ್ತಿದ್ದಾರೆ. ಕ್ವಿಂಟಾಲ್ ತೊಗರಿ 4ರಿಂದ 5 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಜನವರಿ ತಿಂಗಳಲ್ಲಿ ರೈತರ ಬಳಿ ₹6,100 ಬೆಂಬಲ ಬೆಲೆ ನೀಡಿ ತೊಗರಿ ಖರೀದಿ ಮಾಡುವುದಾಗಿ ಹೇಳಿತ್ತು. ಆದರೆ ಈಗ ರೈತರ ನೋಂದಣಿಗೇ ಜನವರಿ 31ರವರೆಗೆ […]
ಕಲಬುರಗಿ: ಸರ್ಕಾರ ಈವರೆಗೆ ರೈತರಿಂದ ತೊಗರಿ ಖರೀದಿಸಲು ಮುಂದಾಗಿಲ್ಲ ಈ ಹಿನ್ನೆಲೆ ಹಣದ ಸಮಸ್ಯೆಯಿಂದ ರೈತರು ಕಡಿಮೆ ಬೆಲೆಗೆ ತೊಗರಿ ಮಾರಾಟ ಮಾಡಲು ಮುಂದಾಗಿದ್ದಾರೆ. ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬೇಸತ್ತು ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ತೊಗರಿ ಮಾರುತ್ತಿದ್ದಾರೆ. ಕ್ವಿಂಟಾಲ್ ತೊಗರಿ 4ರಿಂದ 5 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ರಾಜ್ಯ ಸರ್ಕಾರ ಜನವರಿ ತಿಂಗಳಲ್ಲಿ ರೈತರ ಬಳಿ ₹6,100 ಬೆಂಬಲ ಬೆಲೆ ನೀಡಿ ತೊಗರಿ ಖರೀದಿ ಮಾಡುವುದಾಗಿ ಹೇಳಿತ್ತು. ಆದರೆ ಈಗ ರೈತರ ನೋಂದಣಿಗೇ ಜನವರಿ 31ರವರೆಗೆ ಸಮಯ ಬೇಕು ಜನವರಿ 31ರ ಬಳಿಕ ತೊಗರಿ ಖರೀದಿ ಮಾಡುತ್ತೇವೆ ಎಂದಿದೆ. ಇದರ ಜತೆಗೆ ತೊಗರಿ ಖರೀದಿಗೂ ಮಿತಿ ಹೇರಲಾಗಿದ್ದು, ಓರ್ವ ರೈತನಿಂದ ಕೇವಲ 10 ಕ್ವಿಂಟಾಲ್ ಮಾತ್ರ ಖರೀದಿ ಮಾಡುವುದಾಗಿ ತಿಳಿಸಿದೆ.
ಸರ್ಕಾರದ ನಿರ್ಧಾರಕ್ಕೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ 5 ಲಕ್ಷ ಟನ್‌ಗೂ ಹೆಚ್ಚು ತೊಗರಿ ಇದೆ. ಇದರ ನಡುವೆ ತೊಗರಿ ಖರೀದಿಗೆ ಮಿತಿ ಹೇರಿದ್ರೆ ಕಷ್ಟವಾಗುತ್ತೆ ಎಂಬುವುದು ಇಲ್ಲಿನ ರೈತರ ಅಳಲಾಗಿದೆ. ಸರ್ಕಾರ ತೊಗರಿ ಖರೀದಿ ವಿಳಂಬ ಮಾಡ್ತಿರುವ ಹಿನ್ನೆಲೆ ರೈತರ ಪರದಾಡುವಂತ ಪರಿಸ್ಥತಿ ನಿರ್ಮಾಣವಾಗಿದೆ. ಮುಂದಿನ ಬೆಳೆಗೆ ಆರ್ಥಿಕ ಸಮಸ್ಯೆ ಉಂಟಾಗಲಿದೆ. ಹೀಗಾಗಿ ರೈತರು ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ತೊಗರಿ ಮಾರಾಟ ಮಾಡುತ್ತಿದ್ದು, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಜಿಲ್ಲೆಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.