Seva Sindhu E Pass: ಲಾಕ್​ಡೌನ್​ ಅವಧಿಯಲ್ಲಿ ಅವಶ್ಯ ಓಡಾಟಕ್ಕೆ ಪಾಸ್ ಪಡೆಯುವುದು ಹೇಗೆ? ಮಾಹಿತಿ ಇಲ್ಲಿದೆ

| Updated By: Digi Tech Desk

Updated on: Apr 28, 2021 | 2:17 PM

ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾದ ಕಾರಣ ಸದ್ಯ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ ಸೇರಿದಂತೆ ಬೇರೆ ರಾಜ್ಯಗಳಿಗೆ ಪ್ರಯಾಣಿಸುವ ಪರಿಸ್ಥಿತಿಯಿಲ್ಲ. ಆದರೆ ಸೇವಾ ಸಿಂಧು ಕರ್ನಾಟಕ ಇ ಪಾಸ್ ಅಂತರರಾಜ್ಯ ಪ್ರಯಾಣಕ್ಕಾಗಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಅವಕಾಶ ಪಡೆಯಬಹುದು.

Seva Sindhu E Pass: ಲಾಕ್​ಡೌನ್​ ಅವಧಿಯಲ್ಲಿ ಅವಶ್ಯ ಓಡಾಟಕ್ಕೆ ಪಾಸ್ ಪಡೆಯುವುದು ಹೇಗೆ? ಮಾಹಿತಿ ಇಲ್ಲಿದೆ
ಕೆಎಸ್​ಪಿ ಕ್ಲಿಯರ್ ಪಾಸ್
Follow us on

ಬೆಂಗಳೂರು: ಕೊರೊನಾ ಹೆಚ್ಚಾದ ಹಿನ್ನೆಲೆ ರಾಜ್ಯದಲ್ಲಿ ಸರ್ಕಾರ 14 ದಿನಗಳ ಕಾಲ ಕೊರೊನಾ ಕರ್ಫ್ಯೂ ಜಾರಿಗೊಳಿಸಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆವರೆಗೆ ಅವಕಾಶ ನೀಡಿದೆ.  ಕಳೆದ ಬಾರಿ ಲಾಕ್​ಡೌನ್​ ಆದಾಗ ಅಗತ್ಯ ಸರಕುಗಳ ಸಾಗಾಟಕ್ಕೆ ಮತ್ತು ಅಗತ್ಯ ಸೇವೆಗಳನ್ನು ನೀಡಲು ‘ಕೆಎಸ್​ಪಿ ಕ್ಲಿಯರ್ ಪಾಸ್’ ಕ್ರಮವನ್ನು ತೆಗೆದುಕೊಳ್ಳಲಾಗಿತ್ತು. ಅದರಂತೆ ಈ ಬಾರಿಯು ಇ ಪಾಸ್​ನ ಪಡೆಯುವ ಮೂಲಕ ತೀರಾ ಅಗತ್ಯವಿರುವ ಸಂಸ್ಥೆಗಳ ವ್ಯಕ್ತಿ ಹಾಗೂ ವಾಹನಗಳಲ್ಲಿ ಸಂಚರಿಸಲು ಸಾಧ್ಯವಿದೆ. ಕ್ಲಿಯರ್ ಪಾಸನ್ನು ಆನ್​ಲೈನ್​ ಮೂಲಕ ಇ ಪಾಸ್ ಕರ್ನಾಟಕ ಪೊಲೀಸರಿಗೆ ಅರ್ಜಿ ಸಲ್ಲಿಸುವ ಮೂಲಕ ಪ್ರಯಾಣಕ್ಕೆ ಅನುಮತಿ ಪಡೆಯಬಹುದಾಗಿದೆ.

ಕರ್ನಾಟಕ ಸರ್ಕಾರವು 14 ದಿನಗಳ ಕಾಲ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದ ಜೊತೆಗೆ ಕೆಎಸ್​ಪಿ ಕ್ಲಿಯರ್ ಇ ಪಾಸ್ ಆನ್​ಲೈನ್​ ಅರ್ಜಿ ಸಾಲಭ್ಯವನ್ನು ನೀಡಿದೆ. ಕೆಎಸ್​ಪಿ ಕ್ಲಿಯರ್ ಇ ಪಾಸ್ ಅರ್ಜಿಯನ್ನು sevasindhu.karnataka.gov.in ಅಥವಾ http://kspclearpass.mygate.com ನಲ್ಲಿ ನೋಂದಾಯಿಸಬಹುದು.

http://kspclearpass.mygate.com ವೆಬ್​ಸೈಟ್​ ಬಗ್ಗೆ ಈ ಹಿಂದೆ ಗಮನಿಸಿರಬಹುದು. ಉತ್ಪಾದನೆ, ಅಗತ್ಯ ವಸ್ತುಗಳು, ವಿತಾರಣ ಉದ್ಯಮದಿಂದ ಬಂದಿದ್ದರೆ ಮಾತ್ರ ಸೇವಾ ಸಿಂಧು ಕರ್ನಾಟಕ ಇ ಪಾಸ್ ನೋಂದಣಿ ಅವಶ್ಯಕವಾಗಿರುತ್ತದೆ. ವೈದ್ಯಕೀಯ ಕ್ಷೇತ್ರಕ್ಕೆ ಸೇರಿದವರಾಗಿದ್ದರೆ ಮತ್ತು ಕೊವಿಡ್ ವಾರಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರೆ ಇ ಪಾಸ್ ಅಗತ್ಯವಿಲ್ಲ. ಐಡಿಯಿಂದ ಪ್ರಯಾಣಿಸಲು ಸಾಧ್ಯವಿದೆ.

ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾದ ಕಾರಣ ಸದ್ಯ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ ಸೇರಿದಂತೆ ಬೇರೆ ರಾಜ್ಯಗಳಿಗೆ ಪ್ರಯಾಣಿಸುವ ಪರಿಸ್ಥಿತಿಯಿಲ್ಲ. ಆದರೆ ಸೇವಾ ಸಿಂಧು ಕರ್ನಾಟಕ ಇ ಪಾಸ್ ಅಂತರರಾಜ್ಯ ಪ್ರಯಾಣಕ್ಕಾಗಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಅವಕಾಶ ಪಡೆಯಬಹುದು.

ಕರ್ನಾಟಕ ಇ ಪಾಸ್ ನೋಂದಣಿಯ ಆನ್​ಲೈನ್​ನಲ್ಲಿ ಫಾರ್ಮ್​ ಭರ್ತಿ ಮಾಡುವುದು ಹೇಗೆ?
ಲಾಕ್​ಡೌನ್​ ಕಾರಣ ಅಂತರರಾಜ್ಯ ಪ್ರಯಾಣಕ್ಕೆ ಇ ಪಾಸ್ ಅಗತ್ಯವಾಗಿದೆ. ಆನ್​ಲೈನ್ ಅರ್ಜಿಯನ್ನು ಭರ್ತಿಮಾಡುವ ಹಂತವನ್ನು ಈ ಕೆಳಗಂಡಂತೆ ತಿಳಿಸಲಾಗಿದೆ.

• ಮೊದಲಿಗೆ ಸೇವಾ ಸಿಂಧು ಅಧಿಕೃತ ವೆಬ್​ಸೈಟ್​ ಪೋರ್ಟಲ್​ಗೆ ಹೋಗಬೇಕು. ಇ ಪಾಸ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಕ್ಲಿಕ್ ಮಾಡಿದ ಬಳಿಕ ಹೊಸ ಪುಟ ತೆರೆಯುತ್ತದೆ. ಕೇಳಿದ ಎಲ್ಲಾ ಮಾಹಿತಿಯನ್ನು ಫಾರ್ಮ್ನಲ್ಲಿ ಭರ್ತಿ ಮಾಡಬೇಕು. ಪ್ರಯಾಣದ ವಿವರಗಳು, ಅರ್ಜಿದಾರರ ವಿವರಗಳು, ವಾಹನದ ವಿವರಗಳು ಪ್ರಯಾಣದ ಉದ್ದೇಶ ಸೇರಿದಂತೆ ಇತರೆ ವಿವರಗಳನ್ನು ಭರ್ತಿ ಮಾಡಬೇಕು. ದಾಖಲೆಗಳನ್ನು ಎಚ್ಚರಿಕೆಯಿಂದ ಲಗತ್ತಿಸಿ ಅರ್ಜಿಯನ್ನು ಪರಿಶೀಲಿಸಿದ ನಂತರ ಸಲ್ಲಿಸಬೇಕು.

sevasindhu.karnataka.gov.in ನಲ್ಲಿ ಕರ್ನಾಟಕ ಆನ್​ಲೈನ್​ ಅರ್ಜಿಯನ್ನು ಭರ್ತಿ ಮಾಡಿದ ಬಳಿಕ ಅನುಮೋದನೆಗಾಗಿ ಕಾಯಬೇಕು. ಅರ್ಜಿ ಅನುಮೋದನೆಯಾಗಿದ್ದರೆ ನಿಮ್ಮ ಮೊಬೈಲ್ ಸಂಖ್ಯೆಗೆ ಮೆಸೇಜ್ ಅಥವಾ ಎಸ್ಎಂಎಸ್ ಬರುತ್ತದೆ.

ಇತರೆ ಮಾಹಿತಿ
• ಕರ್ನಾಟಕದಲ್ಲಿ ವಲಸೆ ಕಾರ್ಮಿಕರು ಸಿಲುಕಿದ್ದರೆ ಕರ್ನಾಟಕ ಇ ಪಾಸ್ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಿದೆಯಾ ಎಂಬ ಪ್ರಶ್ನೆ ಮೂಡಿದ್ದರೆ, ಅಧಿಕೃತ ವೆಬ್ ಪೋರ್ಟಲ್​ನಿಂದ ಅರ್ಜಿ ಸಲ್ಲಿಸಬಹುದು. ಕರ್ನಾಟಕದಿಂದ ಅಥವಾ ಕರ್ನಾಟಕಕ್ಕೆ ಅಂತರರಾಜ್ಯ ಅಥವಾ ವಿದೇಶ ಪ್ರಯಾಣ ಬೆಳೆಸಿದರೆ ಇ ಪಾಸ್ ಅಗತ್ಯವಿರುತ್ತದೆ.
• ಅರ್ಜಿಯನ್ನು ಅನುಮೋದನೆ ಮಾಡಲು ಕನಿಷ್ಠ 12 ಗಂಟೆ ಸಮಯಬೇಕು.
• ಅರ್ಜಿದಾರರು ಒದಗಿಸಿದ ಮಾಹಿತಿ ಮೇಲೆ ಇ ಪಾಸ್ ನೀಡಲಾಗುತ್ತದೆ. ಇದರಿಂದ ಅರ್ಜಿದಾರರ ಕುಟುಂಬದವರು ಇದನ್ನು ಬಳಸುವಂತಿಲ್ಲ. ಕೇಲವ ಅರ್ಜಿದಾರನಿಗೆ ಮಾತ್ರ ಸೀಮಿತವಾಗಿರುತ್ತದೆ.

ಇದನ್ನೂ ಓದಿ

ಚುನಾವಣಾ ಕೆಲಸಕ್ಕೆ ಹಾಜರಾಗಿದ್ದ ನೂರಾರು ಶಿಕ್ಷಕರ ಸಾವು, ಚುನಾವಣಾ ಆಯೋಗಕ್ಕೆ ಅಲಹಾಬಾದ್ ಹೈಕೋರ್ಟ್ ನೋಟಿಸ್

ಅಸ್ಸಾಂನಲ್ಲಿ 6.4 ತೀವ್ರತೆಯ ಭಾರೀ ಭೂಕಂಪನ, ಹಲವು ಕಟ್ಟಡಗಳು ಬಿರುಕು

(Iformation about how to getting a KSP Clear Pass)

Published On - 10:41 am, Wed, 28 April 21