ನಿಮ್ಮ ಮನೆಯಲ್ಲಿಯೇ ತುರ್ತು ನಿಗಾ ಘಟಕ ಅಂದ್ರೆ ICU ಸ್ಥಾಪಿಸಿಕೊಳ್ಳುವುದು ಹೇಗೆ? ಅದರ ಪಾಲನೆ ಹೇಗೆ?

ಮನೆಯ ಅನುಕೂಲತೆಯಲ್ಲಿಯೇ ICU ಘಟಕ ಸ್ಥಾಪಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಅನೇಕರು ನೆರವು ನೀಡುತ್ತಾರೆ. ICU ಉಪಕರಣ, ಬೆಡ್​, ನೋಡಿಕೊಳ್ಳಲು ನರ್ಸ್​ ಮತ್ತಿತರ ಸಿಬ್ಬಂದಿ ತುರ್ತು ಅಗತ್ಯವಿರುವ ಕೊರೊನಾ ಪೇಷಂಟ್​ಗಳಿಗಾಗಿ ಲಭ್ಯವಿದ್ದಾರೆ.

ನಿಮ್ಮ ಮನೆಯಲ್ಲಿಯೇ ತುರ್ತು ನಿಗಾ ಘಟಕ ಅಂದ್ರೆ  ICU ಸ್ಥಾಪಿಸಿಕೊಳ್ಳುವುದು ಹೇಗೆ? ಅದರ ಪಾಲನೆ ಹೇಗೆ?
ಮನೆಯಲ್ಲಿಯೇ ICU ಸ್ಥಾಪಿಸಿಕೊಳ್ಳಲು ಹಲವರು ಪ್ರಯತ್ನಿಸುತ್ತಿದ್ದಾರೆ.
sadhu srinath

|

Apr 28, 2021 | 11:52 AM

ಕೊರೊನಾ ಸೋಂಕು ಎಷ್ಟೆಲ್ಲಾ ಕಾಟ ಕೊಡುತ್ತಿದೆ ಅಂದ್ರೆ ಜನ ಹೇಗಾದ್ರು ಮಾಡಿ ನಮ್ಮ ಜೀವ ಉಳಿಸಪ್ಪಾ ಎಂದು ಕಂಡಕಂಡವರಲ್ಲಿ ಮೊರೆಯಿಡುವಂತಾಗಿದೆ. ಇನ್ನು ICU ಜನಸಾಮಾನ್ಯನಿಗೆ ಕೈಗೆಟುಕುತ್ತಿಲ್ಲ. ಪರಿಸ್ಥಿತಿ ಇಷ್ಟು ದುರ್ಭರವಾಗಿರುವಾಗ ನಮ್ಮ ಮನೆಯ ವಾತಾವರಣದಲ್ಲಿಯೇ ತೀರಾ ಅತ್ಯಗತ್ಯವಾಗಿ ಬೇಕಾದ ತುರ್ತು ನಿಗಾ ಘಟಕ ಅಂದ್ರೆ ICU ಸ್ಥಾಪಿಸಿಕೊಳ್ಳುವುದು ಹೇಗೆ? ಎಂಬುದರ ಬಗ್ಗೆ ನಿಮಗಾಗಿ ಇಲ್ಲಿ ಮಾಹಿತಿ ನೀಡಲಾಗಿದೆ.

ಮನೆಯಲ್ಲಿಯೇ ICU ಘಟಕ ಸ್ಥಾಪಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಅನೇಕರು ನೆರವು ನೀಡುತ್ತಾರೆ. ICU ಉಪಕರಣ, ಬೆಡ್​, ನೋಡಿಕೊಳ್ಳಲು ನರ್ಸ್​ ಮತ್ತಿತರ ಸಿಬ್ಬಂದಿ ತುರ್ತು ಅಗತ್ಯವಿರುವ ಕೊರೊನಾ ಪೇಷಂಟ್​ಗಳಿಗಾಗಿ ಲಭ್ಯವಿದ್ದಾರೆ.

ICU ವೈದ್ಯಕೀಯ ಉಪಕರಣ: ಇದು ಆಧುನಿಕ ತಂತ್ರಜ್ಞಾನದ ಕೊಡುಗೆಯಾಗಿದೆ. IV stand, para monitor ಮತ್ತು ಆಕ್ಸಿಜನ್ ಸಿಲಿಂಡರ್, ಹೀರಿಕೊಳ್ಳುವ ಯಂತ್ರ, ಆಲ್ಫಾ ಹೊದಿಕೆ, ನೆಬುಲೈಝರ್, ಡಿವಿಟಿ ಪಂಪ್ ಮತ್ತಿತರ ವೈದ್ಯಕೀಯ ಉಪಕರಣಗಳು ಅಗತ್ಯವಿರುತ್ತವೆ.

ಕ್ರಿಟಿಕಲ್​ ಕೇರ್​ ನರ್ಸ್​: ಸೋಂಕಿತ ವ್ಯಕ್ತಿಯ ದೈಹಿಕ ಕ್ಷಮತೆ ತುಂಬಾ ಹದಗೆಟ್ಟಿದ್ದರೆ ಪರಿಣತ ನರ್ಸ್ ಶುಶ್ರೂಷೆ ಅತ್ಯಗತ್ಯವಾಗಿರುತ್ತದೆ. ಔಷಧೋಪಚಾರ, ವೈದ್ಯರ ಸಲಹೆ ಪಡೆದುಕೊಳ್ಳುವುದು, ಕಾಲಕಾಲಕ್ಕೆ ಇಂಜಕ್ಷನ್ ನೀಡುವುದು, ಕಾಲಕಾಲಕ್ಕೆ ರೋಗಿಯ ಪ್ರಗತಿ ನೋಡಿಕೊಳ್ಳುವುದು ಮತ್ತು ICU ವೈದ್ಯಕೀಯ ಉಪಕರಣಗಳ ಮೇಲೆ ನಿಗಾ ಇಡುವುದು ನುರಿತ ನರ್ಸ್​ನಿಂದ ಮಾತ್ರವೇ ಸಾಧ್ಯವಾದೀತು. ಹಾಗಾಗಿ ಒಳ್ಳೆಯ ನರ್ಸ್ ಅಗತ್ಯವಿರುತ್ತಾರೆ.

ICU ಬೆಡ್​​ ಮತ್ತು ಹಾಸಿಗೆ ಹುಣ್ಣು ಮ್ಯಾನೇಜ್​ ಮಾಡುವುದು: ಇದು ತುಂಬಾತುಂಬಾ ಪ್ರಧಾನವಾಗಿರುತ್ತದೆ. ಇರುವ ಸಂಕಷ್ಟಗಳ ಮಧ್ಯೆ ಸಾಮಾನ್ಯವಾಗಿ ಕಾಡುವ ಹಾಸಿಗೆ ಹುಣ್ಣನ್ನು ಮ್ಯಾನೇಜ್​ ಮಾಡುವುದು ತುಂಬಾ ಅಗತ್ಯವಾಗಿರುತ್ತದೆ. ಇಲ್ಲವಾದಲ್ಲಿ ಸೋಂಕಿತರು ಗುಣಮುಖರಾಗುವುದು ಕಷ್ಟಕಷ್ಟವಾಗಲಿದೆ.

ಫಿಸಿಯೋಥೆರಪಿ: Physiotherapy ಎಂಬುದು ಸೋಂಕಿತ ವ್ಯಕ್ತಿಯ ದೇಹವನ್ನು ಜಡ್ಡುಗಟ್ಟುವುದಕ್ಕೆ ಅವಕಾಶ ನೀಡದೆ ದೇಹದ ಅವಯವಗಳು ಕಾರ್ಯನಿರತವಾಗಿರುವಂತೆ ಮಾಡುವುದು Physiotherapy ಮುಖ್ಯ ಕೆಲಸವಾದೀತು.

ನಿರಂತರ ವಿದ್ಯುತ್ ಪಾಲನೆ ಮಾಡುವುದು: ಎಲ್ಲ ಇದ್ದು ಅದೇ ಇಲ್ಲದೇ ಹೋದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಯಿರುತ್ತದೆ. ಅಂದರೆ ಇಡೀ ICU ಘಟಕವನ್ನು ಸುಸ್ಥಿತಿಯಲ್ಲಿ ಜಾರಿಯಲ್ಲಿರುವಂತೆ ನೋಡಿಕೊಳ್ಳಲು ನಿರಂತರ ವಿದ್ಯುತ್ ಸರಬರಾಜು ಪಾಲನೆ ಮಾಡುವುದು ಮುಖ್ಯವಾದೀತು.

ಕೊನೆಯ ಆದರೆ ಅತ್ಯಗತ್ಯ ಕ್ರಮವೆಂದರೆ ಸೋಂಕಿತ ವ್ಯಕ್ತಿಯಿರುವ ಸ್ಥಳವನ್ನು ಶುಚಿಯಾಗಿಡುವುದು. ಸ್ವಚ್ಛತೆ ಕಾಪಾಡುವುದು. ದಿನಕ್ಕೆ ಎರಡು ಬಾರಿಯಾದರೂ ಕ್ಲೀನಿಂಗ್​ ಇಟ್ಟುಕೊಂಡು, ಕಾಲಕಾಲಕ್ಕೆ ಸ್ವಚ್ಛತೆ (Hygiene) ಕಾಪಾಡುವುದು ಆದ್ಯತೆಯ ವಿಷಯವಾಗಬೇಕು. (How to set-up ICU at your home convenience for Covid-19 positive patient important factors to maintain icu)

ಇದನ್ನೂ ಓದಿ: ಕೊವಿಡ್​-19 ರೋಗಿಗಳು ತಮ್ಮ ದೇಹದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸುಲಭ ಉಪಾಯ

ಇದನ್ನೂ ಓದಿ: ಲಾಕ್​ಡೌನ್​ ಮಧ್ಯೆಯೂ ಮುಂದುವರಿದ ಹೊಸ ಸಂಸತ್ ಭವನ ನಿರ್ಮಾಣ ಕಾಮಗಾರಿ; ಕಾರ್ಮಿಕರ ಅನುಕೂಲಕ್ಕಾಗಿ ಪೊಲೀಸರಿಗೆ ಪತ್ರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada