FDA ಪ್ರಶ್ನೆ ಪತ್ರಿಕೆ ಸೋರಿಕೆ: ವಾಣಿಜ್ಯ ತೆರಿಗೆ ಇನ್ಸ್​ಪೆಕ್ಟರ್​ ಭಾಗಿ, ಪೇಪರ್ ಪಡೆಯಲು ಬಂದಿದ್ದ ಐವರು ಅರೆಸ್ಟ್

|

Updated on: Jan 24, 2021 | 8:18 AM

ಲೀಕ್​ ಪ್ರಕರಣದಲ್ಲಿ ವಾಣಿಜ್ಯ ತೆರಿಗೆ ಇನ್ಸ್​ಪೆಕ್ಟರ್​ ಕೂಡ ಭಾಗಿಯಾಗಿದ್ದಾರೆ ಎಂಬುವುದು ತಿಳಿದು ಬಂದಿದೆ. ವಾಣಿಜ್ಯ ತೆರಿಗೆ ವಿಚಕ್ಷಣಾ ಇನ್ಸ್​ಪೆಕ್ಟರ್ ಆಗಿರುವ ಚಂದ್ರು ಕೋರಮಂಗಲದ ಕಮರ್ಷಿಯಲ್ ಟ್ಯಾಕ್ಸ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆರೋಪಿ ಚಂದ್ರು ಪ್ರಶ್ನೆ ಪತ್ರಿಕೆ ಪಡೆದು ಸೇಲ್ ಮಾಡುತ್ತಿದ್ದ.

FDA ಪ್ರಶ್ನೆ ಪತ್ರಿಕೆ ಸೋರಿಕೆ: ವಾಣಿಜ್ಯ ತೆರಿಗೆ ಇನ್ಸ್​ಪೆಕ್ಟರ್​ ಭಾಗಿ, ಪೇಪರ್ ಪಡೆಯಲು ಬಂದಿದ್ದ ಐವರು ಅರೆಸ್ಟ್
ಸಿಸಿಬಿ ದಾಳಿ ನಡೆಸಿದ ಅಪಾರ್ಟ್‌ಮೆಂಟ್‌
Follow us on

ಬೆಂಗಳೂರು: ಜನವರಿ 24 ಭಾನುವಾರದಂದು ನಡೆಯಬೇಕಿದ್ದ ಎಫ್‌ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ತಡರಾತ್ರಿ 7 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇಂದು ನಡೀಬೇಕಿದ್ದ FDA ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಬೆಂಗಳೂರಿನ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿನ ಉಪಕಾರ್ ಲೇಔಟ್‌ನ ಅಪಾರ್ಟ್‌ಮೆಂಟ್‌ ಮೇಲೆ ಸಿಸಿಬಿ ದಾಳಿ ನಡೆಸಿತ್ತು.

ಸಿಸಿಬಿ ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ದಾಳಿ ವೇಳೆ 24 ಲಕ್ಷ ರೂಪಾಯಿ, 2 ವಾಹನ, ಪ್ರಶ್ನೆಪತ್ರಿಕೆ ಉತ್ತರಗಳ ಪ್ರತಿಯನ್ನೂ ಜಪ್ತಿ ಮಾಡಲಾಗಿದೆ. ಕಿಂಗ್‌ಪಿನ್ ಚಂದ್ರು, ರಾಚಪ್ಪ ಸೇರಿ 7 ಆರೋಪಿಗಳ ಬಂಧನವಾಗಿದೆ. ಈ ಗ್ಯಾಂಗ್ ಪ್ರಶ್ನೆ ಪತ್ರಿಕೆ ಪರೀಕ್ಷೆಯ ಬರೀ ಉತ್ತರಗಳನ್ನ ಮಾತ್ರ ಅಭ್ಯರ್ಥಿಗಳಿಗೆ ನೀಡಲು ಸಜ್ಜಾಗಿತ್ತು. ಪ್ರಾಥಮಿಕ ತನಿಖೆ ವೇಳೆ ಆ ಪ್ರತಿಗಳನ್ನು ಬೇರೆ ಬೇರೆ ಜಿಲ್ಲೆಗಳಲ್ಲಿರುವ ಸಹಚರರಿಗೆ ನೀಡಿರುವ ಮಾಹಿತಿ ಸಿಕ್ಕಿದೆ.

ಈಗಾಗಲೇ ಕೆಲ ಪರೀಕ್ಷಾ ಅಭ್ಯರ್ಥಿಗಳಿಗೂ ಉತ್ತರ ಪ್ರತಿಗಳನ್ನ ನೀಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಆರೋಪಿಗಳ ಸಹಚರರು ಸೇರಿದಂತೆ ಪರೀಕ್ಷಾ ಅಭ್ಯರ್ಥಿಗಳಿಗೂ ಕೂಡಾ ಸಿಸಿಬಿ ಅಧಿಕಾರಿಗಳು ಬಲೆ ಬೀಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾತ್ರಿ ಸಿಸಿಬಿ ಕಚೇರಿಯಲ್ಲಿ ಆರೋಪಿಗಳ ವಿಚಾರಣೆ ನಡೆಸಲಾಗಿದೆ. ಪ್ರಕರಣ ಕಿಂಗ್ ಪಿನ್ ಚಂದ್ರು ಜೊತೆ ಇಲಾಖಾ ಮಟ್ಟದಲ್ಲಿ ಯಾರೆಲ್ಲ ಸಂಪರ್ಕದಲ್ಲಿದ್ದಾರೆ ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗಿದೆ.

ಲೀಕ್​ ಪ್ರಕರಣದಲ್ಲಿ ವಾಣಿಜ್ಯ ತೆರಿಗೆ ಇನ್ಸ್​ಪೆಕ್ಟರ್​ ಕೂಡ ಭಾಗಿ
ಲೀಕ್​ ಪ್ರಕರಣದಲ್ಲಿ ವಾಣಿಜ್ಯ ತೆರಿಗೆ ಇನ್ಸ್​ಪೆಕ್ಟರ್​ ಕೂಡ ಭಾಗಿಯಾಗಿದ್ದಾರೆ ಎಂಬುವುದು ತಿಳಿದು ಬಂದಿದೆ. ವಾಣಿಜ್ಯ ತೆರಿಗೆ ವಿಚಕ್ಷಣಾ ಇನ್ಸ್​ಪೆಕ್ಟರ್ ಆಗಿರುವ ಚಂದ್ರು ಕೋರಮಂಗಲದ ಕಮರ್ಷಿಯಲ್ ಟ್ಯಾಕ್ಸ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆರೋಪಿ ಚಂದ್ರು ಪ್ರಶ್ನೆ ಪತ್ರಿಕೆ ಪಡೆದು ಸೇಲ್ ಮಾಡುತ್ತಿದ್ದ. ಸದ್ಯ ಈತ ಅರೆಸ್ಟ್ ಆಗಿದ್ದಾನೆ. ಇನ್ನು ಈತನ ಬಳಿ ಪೇಪರ್ ಪಡೆಯಲು ಬಂದಿದ್ದ 5 ಜನರನ್ನು ಬಂಧಿಸಲಾಗಿದೆ.

ನಾಳೆ ನಡೆಯಬೇಕಿದ್ದ FDA ಪರೀಕ್ಷೆ ಮುಂದೂಡಿಕೆ

Published On - 8:09 am, Sun, 24 January 21