ಕುಸಿದು ಬೀಳುವ ಸ್ಥಿತಿಗೆ ತಲುಪಿದ ಕೃಷ್ಣಾ ಸೇತುವೆ.. ಕರ್ನಾಟಕ-ತೆಲಂಗಾಣ ಸಂಪರ್ಕ ಕಡಿತದ ಭೀತಿ
ಆ ಸೇತುವೆ ಕರ್ನಾಟಕ ತೆಲಂಗಾಣಕ್ಕೆ ಸಂಪರ್ಕದ ಕೊಂಡಿ. ಸದ್ಯ ಆ ಬೃಹತ್ ಸೇತುವೆ ಅದ್ಯಾವ ಘಳಿಗೆಯಲ್ಲಾದ್ರೂ ಕುಸಿದು ಬೀಳಬಹುದು. ಆ ಬ್ರಿಡ್ಜ್ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಸೇತುವೆಯ ಸುತ್ತಲೂ ಬಿರುಕು ಬಿಟ್ಟಿದೆ. ಹೀಗಾಗಿ ಕುಸಿದು ಬೀಳೋ ಸ್ಥಿತಿಯಲ್ಲಿರೋ ಸೇತುವೆ ಮೇಲೆ ಲಘು ಹಾಗೂ ಭಾರಿ ವಾಹನಗಳು ಸಂಚರಿಸುತ್ತಿದ್ದು, ಜೀವ ಕೈಯಲ್ಲಿ ಹಿಡಿದೇ ತೆರಳುವಂತಾಗಿದೆ.
ರಾಯಚೂರು: ರಾಯಚೂರು ತಾಲೂಕಿನ ಶಕ್ತಿನಗರ ಬಳಿ ಕೃಷ್ಣ ನದಿ ಮೇಲೆ ನಿರ್ಮಿಸಲಾದ 50 ವರ್ಷದ ಹಳೆಯ ಬೃಹತ್ ಸೇತುವೆ ಸದ್ಯ ಈಗ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದೆ. ಅದ್ಯಾವ ಘಳಿಕೆಯಲ್ಲಾದ್ರೂ ಈ ಸೇತುವೆ ಕುಸಿದು ಬೀಳೋ ಹಂತಕ್ಕೆ ತಲುಪಿದೆ. ಈ ಬೃಹತ್ ಸೇತುವೆ ಮೇಲೆ ಭಾರಿ ಗಾತ್ರದ ವಾಹನಗಳ ಓಡಾಟದಿಂದ ಸೇತುವೆಯ ಕೆಳಭಾಗದಲ್ಲಿ ಮಣ್ಣು ಸಹ ಉದುರಿ ಬೀಳ್ತಿದೆ.
ಇತ್ತೀಚೆಗೆ ಬಂದ ಕೃಷ್ಣ ನದಿಯ ಪ್ರವಾಹದ ಹೊಡೆತಕ್ಕೂ ಈ ಸೇತುವೆ ನಲುಗಿ ಹೋಗಿದೆ. ಹಲವಾರು ಕಡೆ ಬಿರುಕುಬಿಟ್ಟಿದ್ದು, ಕಾಂಕ್ರೀಟ್ ಮಣ್ಣು ಸಹ ಉದುರಿ ಬೀಳ್ತಿದೆ. ಕರ್ನಾಟಕ ಮತ್ತು ತೆಲಂಗಾಣಕ್ಕೆ ಸಂಪರ್ಕಿಸೋ ಈ ಬೃಹತ್ ಸೇತುವೆ ಸದ್ಯ ಕುಸಿದು ಬೀಳೋ ಸ್ಥಿತಿಯಲ್ಲಿದ್ದು, ಆದಷ್ಟು ಬೇಗ ನೂತನ ಸೇತುವೆ ನಿರ್ಮಾಣ ಮಾಡದಿದ್ರೆ, ಅನಾಹತ ತಪ್ಪಿದ್ದಲ್ಲ.
ಕುಸಿದು ಬೀಳುವ ಸ್ಥಿತಿಗೆ ತಲುಪಿದ ಕೃಷ್ಣಾ ಸೇತುವೆ ಇನ್ನು, ಕೃಷ್ಣ ನದಿಯ ಮೇಲೆ ನಿಜಾಮನ ಕಾಲದಲ್ಲಿ ನಿರ್ಮಿಸಲಾದ ಈ ಬೃಹತ್ ಸೇತುವೆಯ ಸ್ಥಿತಿಯನ್ನ ಗಮನಿಸಿ ರಾಯಚೂರು ಜಿಲ್ಲಾಡಳಿತ ನೂತನ ಸೇತುವೆ ನಿರ್ಮಾಣ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಸೇತುವೆ ಕುಸಿದುಬಿದ್ರೆ ತೆಲಂಗಾಣ-ಹೈದರಾಬಾದ್ ಸಂಪರ್ಕ ಕಡಿತಗೊಳ್ಳಲಿದೆ.
ಸರ್ಕಾರ ಆದಷ್ಟು ಬೇಗ ನೂತನ ಸೇತುವೆ ನಿರ್ಮಾಣ ಮಾಡಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಅಷ್ಟೇ ಅಲ್ಲ, ಸೇತುವೆ ನಿರ್ಮಾಣಕ್ಕೆ 157 ಕೋಟಿ ಹಣವೂ ಬಿಡುಗಡೆಯಾಗಿದೆ. ಆದ್ರೆ ಯಾವೊಬ್ಬ ಗುತ್ತಿಗೆದಾರನೂ ಇಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಮುಂದೆ ಬರ್ತಿಲ್ಲ. ಹೀಗಾಗಿ ಹೊಸ ಸೇತುವೆ ನಿರ್ಮಾಣಕ್ಕೆ ಭಾರಿ ಹಿನ್ನಡೆಯಾಗ್ತಿದೆ. ಈ ಬಗ್ಗೆ ಸಂಸದರನ್ನ ಕೇಳಿದ್ರೆ ಟೆಂಡರ್ ಫೈನಲೈಸ್ ಆಗಿದೆ. ಶೀಘ್ರದಲ್ಲೇ ಕೆಲಸ ಆರಂಭವಾಗುತ್ತೆ ಅಂತಾರೆ.
ಒಟ್ನಲ್ಲಿ ಅಪಾಯದ ಅಂಚಿನಲ್ಲಿರೋ ಕೃಷ್ಣಾ ಸೇತುವೆಯನ್ನ ಆದಷ್ಟು ಬೇಗ ತೆರವುಗೊಳಿಸಿ ಹೊಸ ಸೇತುವೆ ನಿರ್ಮಾಣಕ್ಕೆ ಸರ್ಕಾರ ತ್ವರಿತ ಕ್ರಮಕೈಗೊಳ್ಳಬೇಕು. ಇಲ್ಲದೆ ಹೋದ್ರೆ ಮುಂದಾಗೋ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಮುರಿದ ಸೇತುವೆ, ಮರದ ತುಂಡಿಟ್ಟು ಗ್ರಾಮಸ್ಥರೇ ಪರಿಹರಿಸಿಕೊಂಡ್ರು.. ಹಾಗಾದ್ರೆ ಜನಪ್ರತಿನಿಧಿಗಳು ಯಾಕ್ ಬೇಕು?