ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಗ್ಯಾಂಗ್ ಪೊಲೀಸರ ಬಲೆಗೆ
ಸಾರ್ವಜನಿಕರಿಗೆ ತಾವು ಚಿನ್ನದ ವ್ಯಾಪಾರಿ ಹಾಗೂ ಆರ್ಬಿಐ ಡೀಲರ್ಗಳೆಂದು ಪರಿಚಯಿಸಿಕೊಳ್ಳುತ್ತಿದ್ದ ಬಂಧಿತರು 2 ಪ್ರತ್ಯೇಕ ಪ್ರಕರಣಗಳಲ್ಲಿ ವಂಚನೆ ಮಾಡಿದ್ದರು.

ಮೈಸೂರು: ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡುತ್ತಿದ್ದ ಗ್ಯಾಂಗ್ನನ್ನು ನರಸಿಂಹರಾಜ ಮತ್ತು ವಿ.ವಿ. ಪುರಂ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿಲಾಗಿದೆ.
ಮುಸ್ತಫಾ ಅಲಿಯಾಸ್ ಯೂಸುಫ್ ಹಾಜಿ (57) , ಕುನ್ಹಿರಾಮನ್ (59), ಅಬ್ದುಲ್ ಹಕೀಂ ಅಲಿಯಾಸ್ ಮೊಹಮ್ಮದ್ (44), ಮೊಹಮ್ಮದ್ ಶಫಿ (42), ಗುರುಚರಣ್ ಬಿ.ಪಿ (34), ಕಾರ್ತಿಕ್ ಕೆ.ವಿ. (29), ಸಮೀವುಲ್ಲಾ ಅಲಿಯಾಸ್ ಸಮೀರ್ (47) ಎಂಬ ಆರೋಪಿಗಳನ್ನು ಡಿಸಿಪಿ ಗೀತಾ ಪ್ರಸನ್ನ ನೇತೃತ್ವದಲ್ಲಿ ಬಂಧಿಸಿದ್ದು, ಬಂಧಿತರಿಂದ ಸುಮಾರು 15 ಲಕ್ಷ ನಗದು, ಚಿನ್ನದ ಬಿಸ್ಕೆಟ್, ಎರಡು ಕಾರು, ಒಂದು ದ್ವಿಚಕ್ರ ವಾಹನ ಹಾಗೂ 5 ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಾರ್ವಜನಿಕರಿಗೆ ತಾವು ಚಿನ್ನದ ವ್ಯಾಪಾರಿ ಹಾಗೂ ಆರ್ಬಿಐ ಡೀಲರ್ಗಳೆಂದು ಪರಿಚಯಿಸಿಕೊಳ್ಳುತ್ತಿದ್ದ ಬಂಧಿತರು 2 ಪ್ರತ್ಯೇಕ ಪ್ರಕರಣಗಳಲ್ಲಿ ವಂಚನೆ ಮಾಡಿದ್ದರು. ಏಳು ಜನರ ಪೈಕಿ ಮೂವರು ಕೊಡಗಿನವರಾಗಿದ್ದಾರೆ. ಒಬ್ಬ ಮೈಸೂರು ಮತ್ತು ಇನ್ನುಳಿದ ಮೂವರು ಕೇರಳದವರಾಗಿದ್ದಾರೆ.

ಅಬ್ದುಲ್ ಹಕೀಂ ಅಲಿಯಾಸ್ ಮೊಹಮ್ಮದ್

ಕಾರ್ತಿಕ್ ಕೆ.ವಿ.

ಕುನ್ಹಿರಾಮನ್

ಮೊಹಮ್ಮದ್ ಶಫಿ

ಮುಸ್ತಫಾ ಅಲಿಯಾಸ್ ಯೂಸುಫ್ ಹಾಜಿ

ಸಮೀವುಲ್ಲಾ ಅಲಿಯಾಸ್ ಸಮೀರ್
ಅಡವಿಟ್ಟಿದ್ದ ಚಿನ್ನ ಬಿಡಿಸಿಕೊಳ್ಳಲು ಗೋಲ್ಡ್ ಕಂಪನಿಗೆ ದೋಖಾ: ಸೂಟು ಬೂಟು ಧರಿಸಿ ಬಂದ ‘ನರಿ’ ಖಾಕಿ ಬಲೆಗೆ!



