ಶಿಕಾರಿಪುರ ಕಾಳೇನಹಳ್ಳಿ ಶಿವಯೋಗ ಮಂದಿರದ ಶ್ರೀ ರೇವಣಸಿದ್ಧ ಸ್ವಾಮೀಜಿ ನಿಧನ

|

Updated on: Mar 16, 2021 | 12:06 PM

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕಾಳೇನಹಳ್ಳಿ ಶಿವಯೋಗ ಮಂದಿರದ ಶ್ರೀ ರೇವಣಸಿದ್ಧ ಸ್ವಾಮೀಜಿ ಇಂದು ಬೆಳಗಿನಜಾವ ಲಿಂಗೈಕ್ಯರಾಗಿದ್ದಾರೆ.

ಶಿಕಾರಿಪುರ ಕಾಳೇನಹಳ್ಳಿ ಶಿವಯೋಗ ಮಂದಿರದ ಶ್ರೀ ರೇವಣಸಿದ್ಧ ಸ್ವಾಮೀಜಿ ನಿಧನ
ಶಿವಯೋಗ ಮಂದಿರದ ಶ್ರೀ ರೇವಣಸಿದ್ಧ ಸ್ವಾಮೀಜಿ
Follow us on

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಶಿವಯೋಗ ಮಂದಿರದ ಶ್ರೀ ರೇವಣಸಿದ್ಧ ಮಹಾಸ್ವಾಮಿಗಳು ಇಂದು ಮಂಗಳವಾರ ಬೆಳಗಿನಜಾವ ಲಿಂಗೈಕ್ಯರಾಗಿದ್ದಾರೆ. ಇವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದು, ಅಂತಿಮ ದರ್ಶನಕ್ಕಾಗಿ ಶಿಕಾರಿಪುರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.

ಸ್ವಾಮೀಜಿ, ಸಮಾಜಮುಖಿ ಚಿಂತನೆಗಳಿಂದ ಮಾರ್ಗದರ್ಶಕರಾಗಿದ್ದರು. ಇಂದು ಹಿರಿಯ ಆಧ್ಯಾತ್ಮಿಕ ಚೇತನವನ್ನು ಕಳೆದುಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ. ಮಧ್ಯಾಹ್ನದ ಬಳಿಕ ಮುಖ್ಯಂತ್ರಿ ಬಿ.ಎಸ್​.ಯಡಿಯೂರಪ್ಪ ಶಿಕಾರಿಪುರಕ್ಕೆ ತೆರಳಿ ಸ್ವಾಮೀಜಿ ಅಂತಿಮ ದರ್ಶನ ಪಡೆದು ನಾಳೆ ಬೆಂಗಳೂರಿಗೆ ವಾಪಸ್ ಆಗುವ ಸಾಧ್ಯತೆ ಇದೆ. ಶ್ರೀ ರೇವಣಸಿದ್ಧ ಮಹಾಸ್ವಾಮಿಗಳು ಮೂಲತಃ ಬಿಜಾಪುರ ಜಿಲ್ಲೆಯ ಬಾಗೇನವಾಡಿಯವರಾಗಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಸನ್ಯಾಸ ಸ್ವೀಕರಿಸಿದ್ದರು. ತಮ್ಮ ಸಮಾಜ ಸೇವೆಯ ಮೂಲಕ ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಎಲ್ಲಾ ಧರ್ಮದವರೊಂದಿಗೆ ಒಳ್ಳೆಯ ಭಾಂದವ್ಯ ಹೊಂದಿದ್ದರು. ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದರು.

ಇದನ್ನೂ ಓದಿ: ಸ್ವಾಮಿ ಹರ್ಷಾನಂದರ ಸ್ಮರಣೆ | ಮಗುವಿನಂತೆ ಕರೆಯುತ್ತಿದ್ದ ಮಹಾನ್​ ವ್ಯಕ್ತಿ, ಸಕಲರನ್ನೂ ಗೌರವಿಸುತ್ತಿದ್ದ ಸ್ವಾಮೀಜಿ

ಇದನ್ನೂ ಓದಿ: ಕೊರೊನಾ ಸೋಂಕಿಗೆ ಸ್ವಾಮೀಜಿ ಬಲಿ, ಶಾಕ್‌ನಲ್ಲಿ ಭಕ್ತ ಗಣ