ಚುನಾವಣಾ ಬಹಿಷ್ಕಾರ ಹೋರಾಟ: ಕೆಂಚಿಕೊಪ್ಪ ಗ್ರಾಮಸ್ಥರಿಂದ ದಾಖಲೆ ಪತ್ರ ಮಾಡಿಸಿಕೊಡುವಂತೆ ಒತ್ತಾಯ

ಭದ್ರಾ ಡ್ಯಾಂಗೆ ಭೂಮಿ ನೀಡಿದ್ದಕ್ಕೆ ಗ್ರಾಮಗಳು ಮುಳುಗಡೆಯಾಗಿವೆ. ಪ್ರತಿ ಚುನಾವಣೆ ವೇಳೆ ಚಿಕ್ಕಮಗಳೂರು ಜಿಲ್ಲಾಡಳಿತ ಭರವಸೆ ಕೊಟ್ಟು ಸುಮ್ಮನಾಗುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಬಹಿಷ್ಕಾರ ಹೋರಾಟ: ಕೆಂಚಿಕೊಪ್ಪ ಗ್ರಾಮಸ್ಥರಿಂದ ದಾಖಲೆ ಪತ್ರ ಮಾಡಿಸಿಕೊಡುವಂತೆ ಒತ್ತಾಯ
ಇಂದಿನಿಂದ 4 ದಿನಗಳ ಕಾಲ ಚುನಾವಣಾ ಬಹಿಷ್ಕಾರ ಹೋರಾಟ
preethi shettigar

| Edited By: sadhu srinath

Mar 16, 2021 | 12:33 PM


ಚಿಕ್ಕಮಗಳೂರು: ಇಂದಿನಿಂದ 4 ದಿನಗಳ ಕಾಲ ಚುನಾವಣಾ ಬಹಿಷ್ಕಾರ ಹೋರಾಟ ನಡೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕೆಂಚಿಕೊಪ್ಪ ಪಂಚಾಯತಿಯ ಕೆಂಚಿಕೊಪ್ಪ, ದೊಡ್ಡಕುಂದೂರು, ಮಾಳಿಕೊಪ್ಪ, ಮಠದಹಳ್ಳಿ, ಮಂಡರವಳ್ಳಿಯ ಗ್ರಾಮಸ್ಥರಿಂದ ಬಹಿಷ್ಕಾರದ ಹೋರಾಟ ನಡೆಯುತ್ತಿದ್ದು, ಕೆಂಚಿಕೊಪ್ಪ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರಕ್ಕೆ ಹೋರಾಟಕ್ಕೆ ಮುಂದಾಗಿದ್ದಾರೆ.

ಜನರ ಸಮಸ್ಯೆಗೆ ಸ್ಪಂದಿಸದ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಹೋರಾಟ ನಡೆಸುತ್ತಿದ್ದು, ಮನೆ, ಜಮೀನು ದಾಖಲೆ ಪತ್ರ ಮಾಡಿಸಿಕೊಡುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ. ಆದರೆ ಈ ಗ್ರಾಮಗಳು ಇ-ಸ್ವತ್ತು ವ್ಯಾಪ್ತಿಗೆ ಬರುವುದಿಲ್ಲ ಎಂದು ಅಧಿಕಾರಿಗಳು ಹಿಂಬರಹ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಮನೆ, ಜಮೀನುಗಳ ದಾಖಲೆಗಾಗಿ ಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧಾರ ಮಾಡಿದ್ದಾರೆ.

2020ರ ಡಿಸೆಂಬರ್​ನಲ್ಲಿ ನಡೆದ ಚುನಾವಣೆಯನ್ನೂ ಕೂಡ ಈ ಭಾಗದ ಜನರು ಬಹಿಷ್ಕರಿಸಿದ್ದರು. ಭದ್ರಾ ಡ್ಯಾಂಗೆ ಭೂಮಿ ನೀಡಿದ್ದಕ್ಕೆ ಗ್ರಾಮಗಳು ಮುಳುಗಡೆಯಾಗಿವೆ. ಪ್ರತಿ ಚುನಾವಣೆ ವೇಳೆ ಚಿಕ್ಕಮಗಳೂರು ಜಿಲ್ಲಾಡಳಿತ ಭರವಸೆ ಕೊಟ್ಟು ಸುಮ್ಮನಾಗುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಜಿಲ್ಲಾಡಳಿತದ ಕ್ರಮಕ್ಕೆ ಬೇಸರಗೊಂಡ ಗ್ರಾಮಸ್ಥರು ಸಭೆ ನಡೆಸಿ ಚುನಾವಣೆ ಬಹಿಷ್ಕರಿಸಲು ತೀರ್ಮಾನ ಮಾಡಿದ್ದಾರೆ.

boycott election

ಕೆಂಚಿಕೊಪ್ಪ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರಕ್ಕೆ ಹೋರಾಟ

ಮಾರ್ಚ್ 29 ರ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧಾರ:
ತರೀಕೆರೆ ತಾಲೂಕಿನ ಕೆಂಚಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿವೆ. ಮನೆ, ಜಮೀನು ದಾಖಲೆ ಪತ್ರ ಮಾಡಿಸಿಕೊಳ್ಳಲು ಗ್ರಾಮಸ್ಥರು ಹಲವು ದಶಕಗಳಿಂದ ಹೋರಾಟ ಮಾಡುತ್ತಿದ್ದು. ಪ್ರತಿ ಚುನಾವಣೆ ವೇಳೆ ಜಿಲ್ಲಾಡಳಿತ ಭರವಸೆ ಕೊಟ್ಟು ಕೈ ಚೆಲ್ಲಿ ಕೂರುತ್ತಿದೆ ಎಂಬ ಕಾರಣಕ್ಕೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಐದು ವರ್ಷದ ಹಿಂದೆಯೂ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾಗ, ಜಿಲ್ಲಾಡಳಿತ ದಾಖಲಾತಿ ನೀಡುವ ಭರವಸೆ ನೀಡಿತ್ತು. ಆದರೆ, ಈವರೆಗೂ ದಾಖಲಾತಿ ನೀಡಲು ಕ್ರಮ ಕೈಗೊಂಡಿಲ್ಲ. ಮತ್ತೊಮ್ಮೆ ಚುನಾವಣೆ ಬಂದರೂ ಸಮಸ್ಯೆ ಬಗೆಹರಿಸಿಲ್ಲ ಎಂದು ಚಿಕ್ಕಮಗಳೂರು ಜಿಲ್ಲಾಡಳಿತದ ವಿರುದ್ಧ ಗ್ರಾಮಸ್ಥರು ಸಿಟ್ಟಿಗೆದ್ದಿದ್ದಾರೆ.

ಇದನ್ನೂ ಓದಿ:

ಚಿಕ್ಕಮಗಳೂರು: ಕೆಂಚಿಕೊಪ್ಪ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಲು ಮುಂದಾದ ಗ್ರಾಮಸ್ಥರು

ಚಿಕ್ಕಮಗಳೂರು: ಚುನಾವಣೆಗೆ ಬಹಿಷ್ಕಾರ ಹಾಕಿದ ನಾಲ್ಕು ಗ್ರಾಮ ಪಂಚಾಯಿತಿಗಳು


ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada