ಮೈಸೂರಿನಲ್ಲಿ ಬೋನಿಗೆ ಬಿತ್ತು 6 ವರ್ಷದ ಗಂಡು ಚಿರತೆ: ಅರಣ್ಯ ಇಲಾಖೆ ಕಾರ್ಯಾಚರಣೆ ಯಶಸ್ವಿ
25 ದಿನದ ಹಿಂದೆ ಜಮೀನಿನಲ್ಲಿ ಹುಲ್ಲು ತರಲು ಹೋಗಿದ್ದ ಸಂದರ್ಭದಲ್ಲಿ ಬಾಲಕನ ಮೇಲೆ ಏಕಾಏಕಿ ದಾಳಿ ಮಾಡಿದ್ದ ಚಿರತೆ ಸದ್ಯ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.
ಮೈಸೂರು: ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ 6 ವರ್ಷದ ಗಂಡು ಚಿರತೆ ಬಿದ್ದಿರುವ ಘಟನೆ ಮೈಸೂರು ಜಿಲ್ಲೆಯ ಕಡಕೊಳದ ಬೀರೇಗೌಡನ ಹುಂಡಿಯ ಬಳಿ ನಡೆದಿದೆ. 25 ದಿನದ ಹಿಂದೆ ಜಮೀನಿನಲ್ಲಿ ಹುಲ್ಲು ತರಲು ಹೋಗಿದ್ದ ಸಂದರ್ಭದಲ್ಲಿ ಬಾಲಕನ ಮೇಲೆ ಏಕಾಏಕಿ ದಾಳಿ ಮಾಡಿದ್ದ ಚಿರತೆ ಸದ್ಯ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ. ಅಂದಿನಿಂದ ಜಮೀನಿನಲ್ಲಿ ಎರಡು ಬೋನನ್ನು ಇರಿಸಲಾಗಿತ್ತು. ಕಳೆದ 25 ದಿನಗಳಿಂದ ಬೋನಿಗೆ ಬೀಳದೆ ಓಡಾಡುತಿದ್ದ ಚಿರತೆ. ಸದ್ಯ ಬೋನಿಗೆ ಬಿದ್ದಿದ್ದು ಗ್ರಾಮಸ್ಥರ ನೆಮ್ಮದಿಗೆ ಕಾರಣವಾಗಿದೆ.
ಕೊಡಗಿನಲ್ಲಿ ಹುಲಿ ದಾಳಿಗೆ ಹಸು ಬಲಿ: ಕೊಡಗು ಜಿಲ್ಲೆಯಲ್ಲಿ ಹುಲಿಯ ಅಟ್ಟಹಾಸ ಮುಂದುವರಿದ್ದು, ಪೊನ್ನಂಪೇಟೆ ತಾಲೂಕಿನ ಕೊಟ್ಟಗೇರಿ ಗ್ರಾಮದಲ್ಲಿ ಹಸುವನ್ನು ಹುಲಿ ಬಲಿ ತೆಗೆದುಕೊಂಡಿದೆ. ಕಳೆದ ರಾತ್ರಿ ಮೋಹನ್ ದಾಸ್ ಮೊಣ್ಣಪ್ಪ ಅವರ ಕೊಟ್ಟಿಗೆ ಮೇಲೆ ದಾಳಿ ಮಾಡಿದ ಹುಲಿ ಗಬ್ಬದ ಹಸುವನ್ನು ಬಲಿ ತೆಗೆದುಕೊಂಡಿದೆ. ಈ ಸಂಬಂಧ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಮೈಸೂರಿನಲ್ಲಿ 8 ವರ್ಷದ ಹೆಣ್ಣು ಹುಲಿ ಬೋನಿಗೆ: ಮಾರ್ಚ್ 1 ರಂದು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಬೇಗೂರು ಅರಣ್ಯ ಪ್ರದೇಶದಲ್ಲಿ, ಕಾಲಿಗೆ ಗಾಯಗೊಂಡಿದ್ದ 8 ವರ್ಷದ ಹೆಣ್ಣು ಹುಲಿಯೊಂದು ಬೋನಿಗೆ ಬಿದ್ದಿತ್ತು. ಗಾಯಗೊಂಡ ಹುಲಿಯನ್ನು ಚಿಕಿತ್ಸೆಗಾಗಿ ಮೈಸೂರು ಮೃಗಾಲಯದ ಚಾಮುಂಡಿ ಪ್ರಾಣಿ ಪುನರ್ವಸತಿ ಕೇಂದ್ರಕ್ಕೆ ರವಾನೆ ಮಾಡಲಾಗಿದೆ. ಕೇರಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಹುಲಿ ದಾಳಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಬಾಣೂರು ಗ್ರಾಮದಲ್ಲಿ ಅದೇ ಹುಲಿಯನ್ನು ಸೆರೆಹಿಡಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಬೇಗೂರು ಕಾಡಿನ ಸಿಸಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿದ್ದ ಹುಲಿಗಾಗಿ ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಸಿದ್ದು, ನಂತರ ಹುಲಿ ಸೆರೆಗೆ ಅರಣ್ಯ ಇಲಾಖೆ ಬೋನು ಇಟ್ಟಿದ್ದಾರೆ. ಸುಮಾರು 8 ವರ್ಷದ ಹೆಣ್ಣು ಹುಲಿ ಬೋನಿನಲ್ಲಿ ಬಂಧಿಯಾಗಿತ್ತು.
ಇದನ್ನೂ ಓದಿ:
ಚಿರತೆ ದಾಳಿಗೆ ಮೂರು ಕರುಗಳ ಬಲಿ: ದಾವಣಗೆರೆ ಅರಣ್ಯ ಅಧಿಕಾರಿಗಳ ಮೊರೆ ಹೋದ ಗ್ರಾಮಸ್ಥರು
ಹುಲಿಯೇ ಹೆಬ್ಬಾವನ್ನು ಬೇಟೆಯಾಡಿತು! ಅಪರೂಪದ ದೃಶ್ಯಾವಳಿ ವಿಡಿಯೋದಲ್ಲಿ ದಾಖಲಾಯಿತು..