ಈ ಶಿಳ್ಳೆಕ್ಯಾತ ಕುಟುಂಬಕ್ಕೆ ಲಭಿಸಿತು ಎರಡನೆಯ ರಾಜ್ಯೋತ್ಸವ ಪ್ರಶಸ್ತಿ

ಕೊಪ್ಪಳ:ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಕೊಪ್ಪಳದ ತೊಗಲು ಗೊಂಬೆಯಾಟದ ಕೇಶಪ್ಪ ಶಿಳ್ಳೆಕ್ಯಾತರಿಗೆ ಪ್ರಶಸ್ತಿ ಸಂದಿದೆ. ತೊಗಲು ಗೊಂಬೆಯಾಟದಲ್ಲಿ ದೇಶ ವಿದೇಶದಲ್ಲಿ ಖ್ಯಾತಿ ಪಡೆದಿರುವ ಕುಟುಂಬದ ಎರಡನೆ ಪೀಳಿಗೆಗೆ ದೊರೆತ ರಾಜ್ಯೋತ್ಸವ ಪ್ರಶಸ್ತಿ ಇದಾಗಿದೆ. ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ‌ ಶಿಳ್ಳೆಕ್ಯಾತ‌ ಸಮುದಾಯದ ಕಲಾವಿದರಾದ ಕೇಶಪ್ಪ ಅವರಿಗೆ ಈ ಬಾರಿಯ 65ನೇ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಕಳೆದ ಬಾರಿ ತಾಯಿಗೆ, ಈ ಬಾರಿ ಮಗನಿಗೂ ಪುರಸ್ಕಾರ! ಈ‌ ಹಿಂದೆ 2014 ರಲ್ಲಿ ಇದೇ ಕುಟುಂಬದ ಭೀಮವ್ವ‌ ಶಿಳ್ಳೆಕ್ಯಾತ […]

ಈ ಶಿಳ್ಳೆಕ್ಯಾತ ಕುಟುಂಬಕ್ಕೆ ಲಭಿಸಿತು ಎರಡನೆಯ ರಾಜ್ಯೋತ್ಸವ ಪ್ರಶಸ್ತಿ
Edited By:

Updated on: Oct 28, 2020 | 4:06 PM

ಕೊಪ್ಪಳ:ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಕೊಪ್ಪಳದ ತೊಗಲು ಗೊಂಬೆಯಾಟದ ಕೇಶಪ್ಪ ಶಿಳ್ಳೆಕ್ಯಾತರಿಗೆ ಪ್ರಶಸ್ತಿ ಸಂದಿದೆ.

ತೊಗಲು ಗೊಂಬೆಯಾಟದಲ್ಲಿ ದೇಶ ವಿದೇಶದಲ್ಲಿ ಖ್ಯಾತಿ ಪಡೆದಿರುವ ಕುಟುಂಬದ ಎರಡನೆ ಪೀಳಿಗೆಗೆ ದೊರೆತ ರಾಜ್ಯೋತ್ಸವ ಪ್ರಶಸ್ತಿ ಇದಾಗಿದೆ. ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ‌ ಶಿಳ್ಳೆಕ್ಯಾತ‌ ಸಮುದಾಯದ ಕಲಾವಿದರಾದ ಕೇಶಪ್ಪ ಅವರಿಗೆ ಈ ಬಾರಿಯ 65ನೇ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.

ಕಳೆದ ಬಾರಿ ತಾಯಿಗೆ, ಈ ಬಾರಿ ಮಗನಿಗೂ ಪುರಸ್ಕಾರ!
ಈ‌ ಹಿಂದೆ 2014 ರಲ್ಲಿ ಇದೇ ಕುಟುಂಬದ ಭೀಮವ್ವ‌ ಶಿಳ್ಳೆಕ್ಯಾತ ಅವರೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದರು. ಭೀಮವ್ವ ಅವರ ಪುತ್ರರಾಗಿರುವ ಕೇಶಪ್ಪಗೆ ಇದೀಗ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ.

ಇದನ್ನೂ ಓದಿ: ಈ ಬಾರಿ 65 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, ಪುರಸ್ಕೃತರ ಪಟ್ಟಿ ಇಲ್ಲಿದೆ

Published On - 1:36 pm, Wed, 28 October 20