ಶಿವಮೊಗ್ಗ: ರಾಜ್ಯದಲ್ಲಿ ಶಂಕಿತರ ಉಗ್ರರು ಬಾಲಬಿಚ್ಚಿದ್ದು, ಕುಕೃತ್ಯ ಎಸಗಲು ಸಜ್ಜಾಗುತ್ತಿದ್ದಾರೆ. ಇತ್ತಿಚೆಗೆ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್ ನಂತರ ದೇಶಾದ್ಯಂತ ಉಗ್ರ ಚಟುವಟಿಕೆಗಳ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ದೇಶದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗಲು ಒಂದು ರೀತಿಯಲ್ಲಿ ತಂತ್ರಜ್ಞಾನವೇ ವರದಾನವಾದಂತಿದೆ. ಶಂಕಿತ ಉಗ್ರರು ಹಾಗೂ ಉಗ್ರರು ದೇಶದ ಯಾವುದೇ ಮೂಲೆಯಲ್ಲಿ ಕುಳಿತು ವಿವಿಧ ದೇಶದ ಉಗ್ರರೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ. ಮಲೆನಾಡಿನ ಶಂಕಿತರ ಉಗ್ರರ ಬಂಧನದ ವೇಳೆ ವಶಕ್ಕೆ ಪಡೆದಿದ್ದ ಮೊಬೈಲ್ ಪರಿಶೀಲನೆ ವೇಳೆ ಸ್ಫೋಟಕ ಮಾಹಿತಿ ಪೊಲೀಸರಿಗೆ ತಿಳಿದುಬಂದಿದೆ. ಹೊರದೇಶದ ಉಗ್ರರೊಂದಿಗೆ ವಿವಿಧ ಆ್ಯಪ್ ಹಾಗೂ ಕೋಡ್ವರ್ಡ್ ಮೂಲಕ ಚಾಟಿಂಗ್ ಮಾಡುತ್ತಿದ್ದ ಮಾಹಿತಿ ಹಾಗೂ ಮೊಬೈಲ್ನಲ್ಲಿ ಪ್ರಚೋದನಕಾರಿ ವಿಡಿಯೋಗಳು ಲಭ್ಯವಗಿದೆ.
ಮೊಬೈಲ್ ಪರಿಶೀಲನೆ ವೇಳೆ ಶಂಕಿತರ ಉಗ್ರರು ಮತ್ತು ಉಗ್ರರ ಜೊತೆ ಸಿಗ್ನಲ್ ಮತ್ತು ವಯರ್ ಮಂತಾದ ಆ್ಯಪ್ಗಳ ಮೂಲಕ ರೋಸ್, ಡಾಲಿ, ಪಿಂಕ್ ಇಂತಹ ಬೇರೆ ಕೋಡ್ಗಳಲ್ಲಿ ಚಾಟಿಂಗ್ ಮಾಡಿಕೊಳ್ಳುತ್ತಿದ್ದರು. ಪ್ರತಿ ಬಾರಿ ಚಾಟಿಂಗ್ ಸಮಯದಲ್ಲಿ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿ ಫೇಕ್ ವರ್ಚೂಲ್ ಐಡಿಗಳನ್ನು ತೆರೆಯುತ್ತಿದ್ದರು. ಚಾಟಿಂಗ್ ಮಾಡಿದ ನಂತರ ಇನ್ಸ್ಟಾಲ್ ಮಾಡಿದ ಆ್ಯಪ್ಗಳನ್ನು ಅನ್ಇನ್ಸ್ಟಾಲ್ ಮಾಡುತ್ತಿದ್ದರು. ಈ ರೀತಿ ಮಾಡುವುದರಿಂದ ಅವರ ಮಾಹಿತಿ ಲಭ್ಯವಾಗುವುದಿಲ್ಲ.
ವಾಯರ್, ಸಿಗ್ನಲ್ ಆ್ಯಪ್ಗಳ ಸರ್ವರ್ಗಳು ವಿದೇಶದಲ್ಲಿರುವುದರಿಂದ ಮಾಹಿತಿ ತಿಳಿಯುವುದು ಕಷ್ಟಕರವಾಗಿದೆ. ರಾಜ್ಯ ಮತ್ತು ದೇಶದ ತನಿಖಾ ದಳಗಳಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ ಚಾಲಾಕಿ ಉಗ್ರ ಸಂಘಟನೆಗಳು ತಂತ್ರಜ್ಞಾನ ಬಳಕೆ ಮಾಡಿಕೊಂಡು ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿವೆ.
ಪ್ರಚೋದನಕಾರಿ ವಿಡಿಯೋ ಟಿವಿ9ಗೆ ಲಭ್ಯ
ಶಂಕಿತ ಉಗ್ರ ಮೊಬೈಲ್ಗಳನ್ನು ಪರಿಶೀಲನೆ ನಡೆಸಿದ ವೇಳೆ ವಿದೇಶದಲ್ಲಿರುವ ಉಗ್ರರ ವಿಡಿಯೋಗಳು ಪತ್ತೆಯಾಗಿವೆ. ಇದರಲ್ಲಿ ಪ್ರಚೋದನಕಾರಿ ವಿಡಿಯೋಗಳು ಕೂಡ ಒಳಗೊಂಡಿವೆ. ಜಬೀವುಲ್ಲಾ ಎಂಬಾತನ ಮೊಬೈನ್ನಲ್ಲಿ 1000 ಕ್ಕೂ ಅಧಿಕ ಇಂತಹ ಪ್ರಚೋದನಕಾರಿ ವಿಡಿಯೋಗಳಿದ್ದವು. ಈ ವಿಡಿಯೋಗಳನ್ನು ನೋಡಿದ ನಂತರ ಪ್ರಭಾವಿತರಾಗುತ್ತಿದ್ದರು.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:03 pm, Fri, 25 November 22