Shivamogga Blast ಆರೋಪಿಗಿತ್ತು ಗಣಿ ಅಧಿಕಾರಿಗಳ ಜತೆ ಭಾರೀ ನಿಕಟ ಸಂಪರ್ಕ, ಟಿವಿ9ಗೆ ಫೋಟೋಗಳು ಲಭ್ಯ

ಆರೋಪಿ ನರಸಿಂಹ ಅಧಿಕಾರಿಗಳ ಜೊತೆ ಕಚೇರಿಯಲ್ಲಿ ಬರ್ತಡೇ ಸೆಲೆಬ್ರೇಷನ್ ಮಾಡುತ್ತಿರುವ ಫೋಟೋಗಳು ಟಿವಿ9 ಗೆ ಲಭ್ಯವಾಗಿದೆ. ನರಸಿಂಹ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎಂಬುವುದು ಈ ಫೋಟೋಗಳ ಮೂಲಕ ತಿಳಿಯುತ್ತಿದೆ.

Shivamogga Blast ಆರೋಪಿಗಿತ್ತು ಗಣಿ ಅಧಿಕಾರಿಗಳ ಜತೆ ಭಾರೀ ನಿಕಟ ಸಂಪರ್ಕ, ಟಿವಿ9ಗೆ ಫೋಟೋಗಳು ಲಭ್ಯ
ಅಧಿಕಾರಿಗಳ ಜತೆ ಆರೋಪಿ ನರಸಿಂಹ ಬರ್ತಡೇ ಸೆಲೆಬ್ರೇಷನ್ ಮಾಡುತ್ತಿರುವುದು
Edited By:

Updated on: Jan 27, 2021 | 11:51 AM

ಶಿವಮೊಗ್ಗ: ಹುಣಸೋಡು ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ನರಸಿಂಹ ಗಣಿ ಇಲಾಖೆ ಅಧಿಕಾರಿಗಳ ಜತೆ ನಿಕಟ ಸಂಪರ್ಕ ಹೊಂದಿದ್ದ ಎಂಬುದರ ಬಗ್ಗೆ ಬಲವಾದ ಸಾಕ್ಷ್ಯ ಸಿಕ್ಕಿದೆ. ಅಧಿಕಾರಿಗಳ ಜೊತೆ ನಿಕಟ ಸಂಪರ್ಕದ ಹಿನ್ನೆಲೆಯಲ್ಲಿ ಆತನ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬವಾಗಿದೆ ಎಂದೂ ಹೇಳಲಾಗುತ್ತಿದೆ.

ಆರೋಪಿ ನರಸಿಂಹ ಅಧಿಕಾರಿಗಳ ಜೊತೆ ಕಚೇರಿಯಲ್ಲಿ ಬರ್ತಡೇ ಸೆಲೆಬ್ರೇಷನ್ ಮಾಡುತ್ತಿರುವ ಫೋಟೋಗಳು ಟಿವಿ9 ಗೆ ಲಭ್ಯವಾಗಿವೆ. ನರಸಿಂಹ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎಂಬುವುದು ಈ ಫೋಟೋಗಳ ಮೂಲಕ ತಿಳಿಯುತ್ತದೆ. ಸದ್ಯ, ನಿನ್ನೆ ನರಸಿಂಹ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನವಾಗಿದ್ದು ನಾಲ್ವರೂ ಆರೋಪಿಗಳು ಜೈಲು ಸೇರಿದ್ದಾರೆ.

ಅಕ್ರಮ ಗಣಿಗಾರಿಕೆ ಮತ್ತು ಸ್ಫೋಟ ವಸ್ತುಗಳ ಸಾಗಾಟ ಸೇರಿದಂತೆ ಇತರ ಚಟುವಟಿಕೆಗಳಿಂದ ಸಮಸ್ಯೆ ಆಗದಂತೆ ನರಸಿಂಹ ನೋಡಿಕೊಳ್ಳುತ್ತಿದ್ದ. ಸ್ಫೋಟ ಪ್ರಕರಣ ನಡೆದು ಒಂದು ವಾರವಾಗಿದ್ದರೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಇನ್ನೂ ಕೂಡ ಯಾವುದೇ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿಲ್ಲ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Shivamogga Blast ಗಣಿ ಸ್ಫೋಟ ಪ್ರಕರಣಕ್ಕೆ ಸಿಕ್ಕಿದೆ ಬಿಗ್ ಟ್ವಿಸ್ಟ್.. ಎಸ್ಕೇಪ್ ಆಗಿದ್ದಾನಾ ಸ್ಫೋಟ ಪ್ರಕರಣದ ಕಿಂಗ್​ಪಿನ್?