ಶಿವಮೊಗ್ಗ, (ಡಿಸೆಂಬರ್ 26): ಮೊಬೈಲ್ (Mobile) ಹೆಚ್ಚು ನೋಡಬೇಡ ಎಂದು ಪೋಷಕರು ಬುದ್ಧಿ ಹೇಳಿದ್ದಕ್ಕೆ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ನಡೆದಿದೆ. ವಿಷ ಸೇವಿಸಿದ್ದ ಧನುಶ್ರೀ(20) ಚಿಕಿತ್ಸೆ ಫಲಲಿಸದೇ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಶಿವಮೊಗ್ಗದ ಸರ್ಕಾರಿ ಪದವಿ ಕಾಲೇಜಿನಲ್ಲಿ ಓದುತಿದ್ದ ಧನುಶ್ರೀಗೆ ಹೆಚ್ಚು ಮೊಬೈಲ್ ನೋಡಬೇಡ ಎಂದು ಪೋಷಕರು ಬುದ್ಧಿ ಮಾತಿಗೆ ಬೈದಿದ್ದಾರೆ. ಇಷ್ಟಕ್ಕೆ ನೊಂದ ಧನುಶ್ರೀ ಮೂರು ದಿನದ ಹಿಂದೆ ವಿಷ ಸೇವಿಸಿದ್ದಾಳೆ. ಕೂಡಲೇ ಧನುಶ್ರೀಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಇದೀಗ ಚಿಕಿತ್ಸೆ ಫಲಕಾರಿಯಾಗಿಲ್ಲ.
ಶಿವಮೊಗ್ಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಳು. ಇದನ್ನು ಗಮನಿಸಿದ್ದ ಪೋಷಕರು ಮೊಬೈಲ್ ಹೆಚ್ಚು ಬಳಸಬೇಡ, ಓದಿನ ಕಡೆ ಗಮನ ಕೊಡು ಎಂದು ಬುದ್ಧಿ ಹೇಳಿದ್ದರು. ಇದೇ ವಿಚಾರಕ್ಕೆ ಮನನೊಂದ ಯುವತಿ ಕಳೆದ 3 ದಿನದ ಹಿಂದೆ ಮನೆಯಲ್ಲಿ ವಿಷ ಸೇವಿಸಿದ್ದಳು. ವಿಷ ಸೇವಿಸಿದ್ದ ಯುವತಿಯನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು (ಗುರುವಾರ) ಯುವತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಇದನ್ನೂ ಓದಿ: ಟಿವಿ ರಿಮೋರ್ಟ್ ಕೊಡಲಿಲ್ಲ ಎಂದು ಅಜ್ಜಿ ಬೈದಿದ್ದಕ್ಕೆ ಬಾಲಕಿ ಆತ್ಮಹತ್ಯೆ!
ಮೊನ್ನೆ ಅಷ್ಟೇ ಟಿವಿ ರಿಮೋಟ್ ಕೊಡಲಿಲ್ಲವೆಂದು ಅಜ್ಜಿ ಬೈದಿದ್ದಕ್ಕೆ ಬೇಸರಗೊಂಡು 16 ವರ್ಷದ ಸಹನಾ ಮೊಮ್ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಶಿವಮೊಗ್ಗ ನಗರದ ಸೂಳೆಬೈಲಿನಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಭದ್ರಾವತಿ ತಾಲೂಕಿನ ಕಲ್ಲಿಹಾಳ್ ನಿವಾಸಿಯಾಗಿದ್ದ ಸಹನಾ, ಅಜ್ಜಿ ಮನೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆದ್ರೆ, ಅಜ್ಜಿ ಬೈದಿದ್ದಕ್ಕೆ ಇಲಿ ಪಾಷಾಣ ಸೇವಿಸಿ ಪ್ರಾಣ ಬಿಟ್ಟಿದ್ದಾಳು. ಇದರ ಬೆನ್ನಲ್ಲೇ ಇದೀಗ ಮೊಬೈಲ್ ವಿಚಾರಕ್ಕೆ ಮತ್ತೋರ್ವ ಬಾಲಕಿ ಕೆಟ್ಟ ನಿರ್ಧಾರ ಕೈಗೊಂಡಿದ್ದಾಳೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.