ಟಿವಿ ರಿಮೋರ್ಟ್ ಕೊಡಲಿಲ್ಲ ಎಂದು ಅಜ್ಜಿ ಬೈದಿದ್ದಕ್ಕೆ ಬಾಲಕಿ ಆತ್ಮಹತ್ಯೆ!
ಪ್ರಸ್ತುತ ದಿನಮಾನಗಳಲ್ಲಿ ಟೀಚರ್ ಹಾಗೂ ಪೋಷಕರು ಮಕ್ಕಳಿಗೆ ಬೈಯುವಂತಿಲ್ಲ. ಬುದ್ಧಿ ಮಾತಿಗೋ, ಇಲ್ಲ ಯಾವುದೋ ಕಾರಣ ದೊಡ್ಡವರು ಸ್ವಲ್ಪ ಬೈದರೆ ಸಾಕು ಮಕ್ಕಳು, ಅಷ್ಟಕ್ಕೆ ಮನನೊಂದುಕೊಂಡುಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಇದರಿಂದ ಶಾಲಾ-ಕಾಲೇಜುಗಳಲ್ಲಿ ಟೀಚರ್ಸ್ ಹಾಗೂ ಮನೆಯಲ್ಲಿ ಪೋಷಕರು , ಮಕ್ಕಳು ತಪ್ಪು ಮಾಡಿದರೂ ಏನು ಮಾಡದ ಸ್ಥಿತಿಯಲ್ಲಿದ್ದಾರೆ. ಅದರಂತೆ ಶಿವಮೊಗ್ಗದಲ್ಲಿ ಟಿವಿ ರಿಮೋಟ್ ವಿಚಾರಕ್ಕೆ ಅಜ್ಜಿ ಬೈದಿದ್ದಕ್ಕೆ ಮೊಮ್ಮಗಳು ಪ್ರಾಣ ಕಳೆದುಕೊಂಡಿದ್ದಾಳೆ.
ಶಿವಮೊಗ್ಗ, (ಡಿಸೆಂಬರ್ 21): ಟಿವಿ ರಿಮೋರ್ಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಅಜ್ಜಿ ಬೈದಿದ್ದರಿಂದ ಮನನೊಂದು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ನಗರದ ಸೂಳೆಬೈಲಿನಲ್ಲಿ ನಡೆದಿದೆ. ಅಜ್ಜಿ ಬೈದಿದ್ದಕ್ಕೆ ಮನನೊಂದು ಸಹನಾ(16) ಆತ್ಮಹತ್ಯೆಗೆ ಶರಣಾದ ಬಾಲಕಿ. ಮೊದಲು ಟಿವಿ ರಿಮೋರ್ಟ್ಗಾಗಿ ಇಬ್ಬರು ಮಕ್ಕಳಿಂದ ಗಲಾಟೆ ಶುರುವಾಗಿದೆ. ಇದರಿಂದ ಅಜ್ಜಿ ಬಂದು ಮೊಮ್ಮಗಳಿಗೆ ಬೈದಿದ್ದಾರೆ. ಇದರಿಂದ ಮನನೊಂದ ಮೊಮ್ಮಗಳು ಸಹನಾ ಇಲಿ ಪಾಷಾಣ ಸೇವಿಸಿ ಪ್ರಾಣ ಬಿಟ್ಟಿದ್ದಾಳೆ. ಭದ್ರಾವತಿ ತಾಲೂಕಿನ ಕಲ್ಲಿಹಾಳ್ ನಿವಾಸಿಯಾದ ಮೃತ ಬಾಲಕಿ ಸಹನಾ, ಅಜ್ಜಿ ಮನೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಂಕಲ್-ಆಂಟಿ ಪ್ರೀತಿ ಗುಟ್ಟು ರಟ್ಟು: ಬೆಂಗಳೂರಿನಲ್ಲಿ ಆಂಧ್ರದ ಮಹಿಳೆ,-ತಮಿಳುನಾಡಿನ ವ್ಯಕ್ತಿ ಆತ್ಮಹತ್ಯೆ
ಡೆತ್ ನೋಟ್ ಬರೆದಿಟ್ಟಯ ಯುವಕ ಆತ್ಮಹತ್ಯೆ
ಬೆಂಗಳೂರು: ಮಾನಸಿಕ ಖಿನ್ನತೆಗೆ ಒಳಗಾಗಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮ ಮಧುರೆ ಗ್ರಾಮದಲ್ಲಿ ನಡೆದಿದೆ. ಖಿನ್ನತೆಗೊಳಗಾಗಿ ಕೆರೆಗೆ ಹಾರಿ ಯುವಕ ನವೀನ್ ಕುಮಾರ್(31) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ನೋಟ್ ಬರೆದಿಟ್ಟು ಯುವಕ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ತಿರುಪತಿಗೆ ಹೋಗುತ್ತಿದ್ದ ಇಬ್ಬರು ಮಹಿಳೆಯರು ದುರ್ಮರಣ
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮಹದೇಶ್ವರಪುರ ಬಳಿ ಲಾರಿ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ನಡೆದಿದೆ. ನೀಲನಹಳ್ಳಿ ಗ್ರಾಮದ ಶಿಲ್ಪಾ(35), ಸಂಧ್ಯಾ(19) ಮೃತ ದುರ್ದೈವಿಗಳು. ಮತ್ತೋರ್ವ ಮಹಿಳೆ ಸ್ಥಿತಿ ಗಂಭೀರ, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಶಿಲ್ಪಾ ಹಾಗೂ ಸಂಧ್ಯಾ ಆಂಧ್ರಪ್ರದೇಶದ ತಿರುಪತಿಗೆ ತೆರಳುತ್ತಿದ್ರು. ಬಸ್ ನಿಲ್ದಾಣವರೆಗೆ ಗೆಳತಿ ಶೈಲಜಾ ಬೈಕ್ನಲ್ಲಿ ಡ್ರಾಪ್ ಕೊಡಲು ಬರುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಇನ್ನು ಅಪಘಾತದ ಬಳಿಕ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ. ಈ ಸಂಬಂಧ ಮೇಲುಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:26 pm, Sat, 21 December 24