ಅಂಕಲ್-ಆಂಟಿ ಪ್ರೀತಿ ಗುಟ್ಟು ರಟ್ಟು: ಬೆಂಗಳೂರಿನಲ್ಲಿ ಆಂಧ್ರದ ಮಹಿಳೆ,-ತಮಿಳುನಾಡಿನ ವ್ಯಕ್ತಿ ಆತ್ಮಹತ್ಯೆ
ಅಂಕಲ್-ಆಂಟಿ ಪ್ರೀತಿ ಗುಟ್ಟು ರಟ್ಟಾಗಿದ್ದರಿಂದ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಪರಿಚಯವಾಗಿದ್ದ ಆಂಧ್ರದ ಮಹಿಳೆ,-ತಮಿಳುನಾಡಿನ ವ್ಯಕ್ತಿ ನಡುವೆ ಪ್ರೇಮಾಂಕುರವಾಗಿದ್ದು, ಬಳಿಕ ಇಬ್ಬರು ಸಲುಗೆಯಿಂದ ಇದ್ದರು. ಆದ್ರೆ, ತಮ್ಮಿಬ್ಬರ ನಡುವಿನ ಸಂಬಂಧದ ಕುಟುಂಬಸ್ಥರಿಗೆ ಗೊತ್ತಾಯ್ತು ಎಂದು ಒಟ್ಟಿಗೆ ವಿಷ ಸೇವಿಸಿ ಪ್ರಾಣ ಬಿಟ್ಟಿದ್ದಾರೆ. ಇಬ್ಬರಿಗೂ ಈಗಾಗಲೇ ಬೇರೆ ಬೇರೆಯವರೊಂದಿಗೆ ಮದ್ವೆಯಾಗಿತ್ತು. ಆದ್ರೆ, ಈಗ ದುರಂತ ಅಂತ್ಯ ಕಂಡಿದ್ದಾರೆ.
ತುಮಕೂರು, (ಡಿಸೆಂಬರ್ 21): ಓರ್ವ ಮಹಿಳೆ ಹಾಗೂ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಚಳ್ಳಕೆರೆ ರಸ್ತೆಯ ಜಮೀನೊಂದರಲ್ಲಿ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗೋವಿಂದರೆಡ್ಡಿ(40), ಭಾಗ್ಯ(38) ಆತ್ಮಹತ್ಯೆ ಮಾಡಿಕೊಂಡವರು. ತಮ್ಮ ಅನೈತಿಕ ಸಂಬಂಧ ಕುಟುಂಬಸ್ಥರಿಗೆ ಗೊತ್ತಾಗಿದ್ದರಿಂದ ಮದ್ಯದಲ್ಲಿ ವಿಷ ಮಿಶ್ರಣ ಮಾಡಿಕೊಂಡು ಸೇವಿಸಿದ್ದಾರೆ. ವಿಷ ಸೇವಿಸಿದವರನ್ನ ಪಾವಗಡ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ ಇಬ್ಬರೂ ಸಾವನ್ನಪ್ಪಿದ್ದಾರೆ.
ಆಂಧ್ರ ಪ್ರದೇಶ ಮೂಲದ ಗೋವಿಂದರೆಡ್ಡಿಗೆ ಈಗಾಗಲೇ ಎರಡು ಮದುವೆಯಾಗಿದ್ದು, ಬೆಂಗಳೂರಿನಲ್ಲಿ ಎಳನೀರು ವ್ಯಾಪಾರ ಮಾಡಿಕೊಂಡಿದ್ದ. ಇನ್ನು ತಮಿಳುನಾಡು ಮೂಲದ ಭಾಗ್ಯಳಿಗೂ ಸಹ ಬೇರೆಯವರೊಂದಿಗೆ ಮದುವೆಯಾಗಿತ್ತು. ಆದರೂ ಸಹ ಬೆಂಗಳೂರಿನ ಕೃಷ್ಣಗಿರಿಯಲ್ಲಿ ಗೋವಿಂದರೆಡ್ಡಿ ಹಾಗೂ ಭಾಗ್ಯ ಪರಿಚಯವಾಗಿ ಬಳಿಕ ಅದು ಪ್ರೀತಿಗೆ ತಿರುಗಿದೆ. ಆದ್ರೆ, ಇಬ್ಬರ ನಡುವಿನ ಸಂಬಂಧ ಮನೆಯವರಿಗೆ ಗೊತ್ತಾಗಿದ್ದರಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಪ್ರೀತಿಗಾಗಿ ಪ್ರಾಣಕೊಟ್ಟ ವಿವಾಹಿತರು: ಪ್ರೇಮಿಗಳ ಲವ್ ಕಹಾನಿ ಸಾವಿನಲ್ಲಿ ಅಂತ್ಯ
ಮಹಿಳೆ ನಿಗೂಢ ಸಾವು
ತುಮಕೂರು: ಇನ್ನೊಂದೆಡೆ ಮಹಿಳೆಯೋರ್ವಳು ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಸೆಬ್ಬೇನಹಳ್ಳಿಯ ಗ್ರಾಮದ ಹೊಂಡದಲ್ಲಿ ಪೂಜಾ (25) ಶವ ಪತ್ತೆಯಾಗಿದ್ದು, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗಂಡನ ಮನೆಯವರು ಕಿರುಕುಳ ಕೊಟ್ಟು ಕೊಲೆ ಮಾಡಿದ್ದಾರೆಂದು ಪೂಜಾ ಪೋಷಕರು ಆರೋಪಿಸಿದ್ದಾರೆ. ಪತಿ ಓಂಕಾರ್, ಆತನ ಅಣ್ಣ ರಾಜಣ್ಣ ಮೇಲೆ ಆರೋಪ ಮಾಡಲಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ರಾಜಣ್ಣ, ಪೂಜಾಳನ್ನ ಗಂಡನ ಮನೆಗೆ ಕರೆದೊಯ್ದಿದ್ದ. ಆದ್ರೆ, ಎರಡು ದಿನಗಳಿಂದ ನಾಪತ್ತೆಯಾಗಿದ್ದ ಪೂಜಾ, ಇಂದು ಸೆಬ್ಬೇನಹಳ್ಳಿಯ ಹೊಂಡದಲ್ಲಿ ಪೂಜ ಶವ ಪತ್ತೆಯಾಗಿದೆ. ಸ್ಥಳಕ್ಕೆ ಹಂದನಕೆರೆ ಪೊಲೀಸರು ಭೇಟಿ ತನಿಖೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ