ಗೋಪೂಜೆ ವೇಳೆ ಪೂಜೆಗಿಟ್ಟಿದ್ದ ಬಂಗಾರದ ಸರ ನುಂಗಿದ ಹಸು! ಮುಂದೇನಾಯ್ತು?

| Updated By: ಸಾಧು ಶ್ರೀನಾಥ್​

Updated on: Nov 28, 2023 | 2:46 PM

ಮನೆಯ ಹಸುವೊಂದು ಗೋಪೂಜೆ ವೇಳೆ ಪೂಜೆಗಿಟ್ಟಿದ್ದ ಬಂಗಾರದ ಸರ ನುಂಗಿತ್ತು. ಆತಂಕಕಾರಿ ಬೆಳವಣಿಗೆಯಲ್ಲಿ ಬಂಗಾರದ ಸರ ನುಂಗಿದ್ದ ಹಸು ಮೇವು ತಿನ್ನುವುದನ್ನು ಕಡಿಮೆ ಮಾಡಿತ್ತು. ಮುಂದೆ ಅದು ಹಸುವಿನ ಪ್ರಾಣಕ್ಕೆ ಕುತ್ತು ತರಬಹುದು ಎಂಬ ಆತಂಕ ಕುಟುಂಬಸ್ಥರಲ್ಲಿ ಮಡುವುಗಟ್ಟಿದೆ.

ಗೋಪೂಜೆ ವೇಳೆ ಪೂಜೆಗಿಟ್ಟಿದ್ದ ಬಂಗಾರದ ಸರ ನುಂಗಿದ ಹಸು! ಮುಂದೇನಾಯ್ತು?
ಪೂಜೆಗಿಟ್ಟಿದ್ದ ಬಂಗಾರದ ಸರವನ್ನು ಮನೆಯ ಹಸು ನುಂಗಿದ ಪ್ರಸಂಗ
Follow us on

ಶಿವಮೊಗ್ಗ: ಗೋಪೂಜೆ (Gopuja) ವೇಳೆ ಪೂಜೆಗಿಟ್ಟಿದ್ದ ಬಂಗಾರದ ಸರವನ್ನು ಮನೆಯ ಹಸು (cow) ನುಂಗಿದ ಪ್ರಸಂಗ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ (hosnagar) ತಾಲೂಕಿನ ಮತ್ತಿಮನೆ ಗ್ರಾಮದಲ್ಲಿ ಘಟನೆ ನಡೆದಿದೆ. ಶ್ಯಾಮ ಉಡುಪ ಎಂಬುವವರಿಗೆ ಸೇರಿದ ಹಸು ಆ ಬಂಗಾರದ ಸರವನ್ನು (gold chain) ನುಂಗಿತ್ತು, ಕೊನೆಗೆ ಪಶು ವೈದ್ಯರು ಬಂಗಾರದ ಸರವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಗೋಪೂಜೆಗೆಂದು ತೆಗೆದಿಟ್ಟಿದ್ದ ಸರ ಇದ್ದಕ್ಕಿದ್ದಂತೆ ಮಾಯವಾಗಿತ್ತು. ಶ್ಯಾಮ ಉಡುಪ ಕುಟುಂಬಸ್ಥರು ಎಲ್ಲಡೆ ಹುಡುಕಾಟ ನಡೆಸಿದ್ದರು. ಆದರೆ ಎಲ್ಲೂ ಸಿಗದಿದ್ದಾಗ, ಪ್ರಸಾದದ ಜೊತೆ ಬಂಗಾರದ ಸರವನ್ನೂ ಹಸು ನುಂಗಿರಬಹುದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅಲ್ಲಿಗೂ ಕುಟುಂಬಸ್ಥರು ಬಂಗಾರದ ಸರ ಹೋದರೆ ಹೋಗಲಿ, ನಮ್ಮ ಹಸು ತಣ್ಣಗಿರಲಿ ಎಂದು ಸುಮ್ಮನಾಗಿದ್ಧರು.

ಆದರೆ ಇತ್ತ ಆತಂಕಕಾರಿ ಬೆಳವಣಿಗೆಯಲ್ಲಿ ಬಂಗಾರದ ಸರ ನುಂಗಿದ್ದ ಹಸು ಮೇವು ತಿನ್ನುವುದನ್ನು ಕಡಿಮೆ ಮಾಡಿತ್ತು. ಮುಂದೆ ಅದು ಹಸುವಿನ ಪ್ರಾಣಕ್ಕೆ ಕುತ್ತು ತರಬಹುದು ಎಂಬ ಆತಂಕ ಅವರಲ್ಲಿ ಮಡುವುಗಟ್ಟಿದೆ.

ಇದನ್ನೂ ಓದಿ: ಉತ್ತರ ಕರ್ನಾಟಕ ಭಾಗದಲ್ಲಿ ಸೋದರತ್ತೆಯರು ತಮ್ಮ ಸೊಸೆಗೆ ಸೀರೆ ಉಡಿಸಬೇಕು ಅನ್ನೋ ಸುದ್ದಿ ಹರಿದಾಡುತ್ತಿದೆ! ಏನಿದರ ಒಳಗುಟ್ಟು?

ಕೊನೆಗೆ ಗತ್ಯಂತರವಿಲ್ಲದೆ ಶ್ಯಾಮ ಉಡುಪ ಕುಟುಂಬಸ್ಥರು ಹಸುವಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಪಶು ವೈದ್ಯ ಡಾ. ಆನಂದ ಅವರು ಆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಹಸುವಿನ ಹೊಟ್ಟೆಯೊಳಗಿಂದ ಚಿನ್ನದ ಸರವನ್ನು ಹೊರ ತೆಗೆಯುವಲ್ಲಿ ವೈದ್ಯರು ಸಫಲರಾಗಿದ್ದಾರೆ. ಸಮಾಧಾನಕರ ಸಂಗತಿಯೆಂದರೆ ಶಸ್ತ್ರಚಿಕಿತ್ಸೆ ಬಳಿಕ ಹಸು ಆರೋಗ್ಯದಿಂದ ಇದೆ, ಜೊತೆಗೆ ಶ್ಯಾಮ ಉಡುಪ ಅವರ ಮನೆಯವರಿಗೆ ಚಿನ್ನದ ಸರ ಮತ್ತೆ ಸಿಕ್ಕಿದ ಸಮಾಧಾನವೂ ಮನೆ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:46 pm, Tue, 28 November 23