Shivamogga: ಪ್ರೇಯಸಿಯೊಂದಿಗೆ ಲಾಡ್ಜ್​ನಲ್ಲಿ ತಂಗಿದ್ದ ಪ್ರಿಯಕರ ಬೆಳಗ್ಗೆ ಶವವಾಗಿ ಪತ್ತೆ

ಶಿವಮೊಗ್ಗದ ಭದ್ರಾವತಿ ನಗರದ ಲಾಡ್ಜ್ ಒಂದರಲ್ಲಿ ವ್ಯಕ್ತಿಯೊಬ್ಬನ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ವ್ಯಕ್ತಿ ಜೊತೆಗೆ ಲಾಡ್ಜ್ ಗೆ ಬಂದಿದ್ದ ಮಹಿಳೆ ಪೊಲೀಸರ ಮುಂದೆ ಶರಣಾಗಿದ್ದಾಳೆ.

Shivamogga: ಪ್ರೇಯಸಿಯೊಂದಿಗೆ ಲಾಡ್ಜ್​ನಲ್ಲಿ ತಂಗಿದ್ದ ಪ್ರಿಯಕರ ಬೆಳಗ್ಗೆ ಶವವಾಗಿ ಪತ್ತೆ
ಲಾಡ್ಜ್​
Edited By:

Updated on: Jan 13, 2023 | 8:47 PM

ಶಿವಮೊಗ್ಗ: ಪ್ರೇಯಸಿಯಿಂದಲೇ ಪ್ರಿಯಕರ ಹತ್ಯೆಯಾಗಿರುವ ಘಟನೆ ಶಿವಮೊಗ್ಗ(Shivamogga) ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ಮಹಿಳೆಯೊಂದಿಗೆ ಲಾಡ್ಜ್​ನಲ್ಲಿ (Lodge) ತಂಗಿದ್ದ ವ್ಯಕ್ತಿ ಇಂದು(ಜನವರಿ 13) ಬೆಳಗ್ಗೆ ಕೊಲೆಯಾಗಿದ್ದಾನೆ. ಆಯೇಶಾ ಎನ್ನುವ ಮಹಿಳೆ ಈ ಕೃತ್ಯ ಎಸಗಿದ್ದು, ಬಳಿಕ ಪೊಲೀಸ್ ಮುಂದೆ ಶರಣಾಗಿದ್ದಾಳೆ. ಮೃತನನ್ನು ಪರ್ವೇಜ್ (38) ಎಂದು ಗುರುತಿಸಲಾಗಿದೆ.

ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದ ಪರ್ವೇಜ್, ಗುರುವಾರ ಆಯೇಶಾ ಜೊತೆಗೆ ಬಿ.ಹೆಚ್.ರಸ್ತೆಯಲ್ಲಿರುವ ಲಾಡ್ಜ್ ಒಂದರಲ್ಲಿ ಕೊಠಡಿಗೆ ಬಾಡಿಗೆಗೆ ಪಡೆದು ತಂಗಿದ್ದರು. ಆದ್ರೆ, ಇಬ್ಬರ ನಡುವೆ ಜಗಳವಾಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಶ್ವಾನ ದಳ, ಭದ್ರಾವತಿ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಹಾಗೂ ಪಿಎಸ್ ಐ ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾಸನದ ಚನ್ನರಾಯಪಟ್ಟಣ ಮೂಲದ ಆಯೇಶಾ ಎಂಬಾಕಿ ಮತ್ತು ಜಾವಗಲ್ ಮೂಲದ ಫರ್ವೇಜ್​  ಮಧ್ಯೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಅಕ್ರಮ ಸಂಬಂಧ ಇತ್ತು ಎನ್ನಲಾಗಿದ್ದು, ಈ ವಿಚಾರ ಗಂಡನಿಗೆ ತಿಳಿದಿದೆ. ಬಳಿಕ ಆತ ಆಯೇಶಾಳಿಂದ ದೂರವಾಗಿದ್ದಾನೆ. ಇದರಿಂದ ಫರ್ವೇಜ್ ಹಾಗೂ ಆಯೇಶಾ ನಡುವೆ ಅಕ್ರಮ ಸಂಬಂಧ ಮುಂದುವರಿದಿತ್ತು.

ನಿನ್ನೆ ಇಬ್ಬರು ಭದ್ರಾವತಿಗೆ ಬಂದು ಬಿ.ಹೆಚ್.ರಸ್ತೆಯಲ್ಲಿರುವ ಲಾಡ್ಜ್ ಒಂದರಲ್ಲಿ ತಂಗಿದ್ದಾರೆ. ಲಾಡ್ಜ್ ನಲ್ಲಿಯೇ ಅಯೇಶಾ ಮತ್ತು ಫರ್ವೇಜ್ ನಡುವೆ ಜಗಳವಾಗಿದ್ದು, ಫರ್ವೇಜ್ ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾನೆ. ದಾವಣಗೆರೆಯ ಎಫ್ಎಸ್ ಎಲ್ ತಂಡದಿಂದ ಸ್ಥಳ ಪರಿಶೀಲನೆಯಾಗಿದ್ದು, ಈ ಬಗ್ಗೆ ಓಲ್ಡ್ ಟೌನ್ ಪೂಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದ್ರೆ, ಈ ಕೊಲೆಯನ್ನು ಆಯೇಶಾ ಮಾಡಿದ್ದಾಳೋ ಅಥವಾ ಬೇರೆಯವರ ಕಡೆಯಿಂದ ಮಾಡಿಸಿದ್ದಾಳೆ ಎನ್ನುವುದು ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸ್ ತನಿಖೆ ವೇಳೆ ಕೊಲೆಗೆ ಕಾರಣ ತಿಳಿಯಲಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 8:46 pm, Fri, 13 January 23