ಶಿವಮೊಗ್ಗ: ಮಲೆನಾಡಿನಲ್ಲಿ ಅಕ್ರಮ ಮರಳು ದಂಧೆ (Sand Mafia) ತಡೆಯಲು ಪ್ರತ್ಯೇಕ, ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ. ಕ್ವಾರಿ ಗುತ್ತಿಗೆ ಪಡೆದ ವ್ಯಕ್ತಿ ಡಬ್ಲಿಂಗ್ ಮಾಡಿದರೆ ಪೋಲಿಸರು ಅದನ್ನು ಪತ್ತೆ ಮಾಡಿ ಕ್ರಮಕೈಗೊಳ್ಳುತ್ತಾರೆ. ಮರಳು ತಿನ್ನುವ ವಸ್ತು ಅಲ್ಲ. ಅದು ಬಳಿಕೆದಾರರಿಗೆ ಸುಲಭವಾಗಿ ಸಿಗಬೇಕು ಅಂತ ಶಿವಮೊಗ್ಗದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿಕೆ ನೀಡಿದ್ದಾರೆ. ಮುಂದುವರಿದು ಮಾತನಾಡಿದ ಸಚಿವರು, ಕಾಂಗ್ರೆಸ್ ಪಾದಯಾತ್ರೆ ಭದ್ರತೆಗೆ ತೆರಳಿದ್ದ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಶೇ.60ರಷ್ಟು ಪೊಲೀಸರು, ಕುಟುಂಬಸ್ಥರಿಗೆ ಕೊರೊನಾ ಸೋಂಕು ತಗುಲಿದೆ ಅಂತ ತಿಳಿಸಿರು.
ಪಾದಯಾತ್ರೆಯಿಂದ ಕೋಲಾರ, ಹಾಸನ, ತುಮಕೂರು ಮಂಡ್ಯ, ರಾಮನಗರ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳವಾಗಿದೆ. ಡಿಕೆ ಶಿವಕುಮಾರ್ ಕೊರೊನಾ ಅಂಕಿ ಅಂಶ ಸುಳ್ಳು ಎಂದು ಹೇಳುತ್ತಾರೆ. ಡಿಕೆಶಿ ಬಳಿ ಯಾವುದೇ ದಾಖಲೆಗಳಿದ್ದರೆ ದೂರು ನೀಡಲಿ ಅಂತ ಗೃಹಸಚಿವ ಆರಗ ಜ್ಞಾನೇಂದ್ರ ಸವಾಲ್ ಹಾಕಿದ್ದಾರೆ.
ರಾಜ್ಯದಲ್ಲಿ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಶೇ.5ರಷ್ಟಿದೆ. ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹೆಚ್ಚಾದರೆ ಕಠಿಣ ನಿಯಮ ಜಾರಿಯಾಗುತ್ತದೆ ಎಂದು ಮಾತನಾಡಿದ ಆರಗ ಜ್ಞಾನೇಂದ್ರ, ನಾವು ರಾಜಕೀಯವಾಗಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದರು. ಜನರ ಅನುಕೂಲಕ್ಕಾಗಿ ವೀಕೆಂಡ್ ಕರ್ಫ್ಯೂ ತೆರವುಗೊಳಿಸಲಾಗಿದೆ. ಕೊರೊನಾ ಸೋಂಕು ಹೆಚ್ಚಳ ಆದ್ರೂ ಅದರ ತೀವ್ರತೆ ಕಡಿಮೆ ಇದೆ. ಕೊರೊನಾ ಮತ್ತೆ ವೇಗವಾಗಿ ಹರಡಿದರೆ ಕಠಿಣ ಕ್ರಮ ಅನಿವಾರ್ಯ ಅಂತ ಅಭಿಪ್ರಾಯಪಟ್ಟರು.
ನಿನ್ನೆ ಮೂರು ಘಂಟೆ ಸುದೀರ್ಘ ಸಭೆ ಆಗಿದೆ. ಕೊರೊನಾದಿಂದ ಬೆಂಗಳೂರು ಹೊತ್ತಿ ಉರಿಯುತ್ತಿದೆ. ಪ್ರತಿ ನಿತ್ಯ ಅನ್ನಕ್ಕಾಗಿ ಬಡವರ ಪರದಾಡುತ್ತಿದ್ದಾರೆ. ಬಡ ಕೊಲಿ ಕಾರ್ಮಿಕರಿಗೆ ದೊಡ್ಡ ಹೊಡೆತ ಬೀಳುತ್ತಿದೆ. ಹೀಗಾಗಿ ವಿಕೇಂಡ್ ಕರ್ಫ್ಯೂ ತೆರವುಗೊಳಿಸಲಾಗಿದೆ. ಇಲ್ಲಿ ಸಾಮಾನ್ಯ ಜನರ ಹೊಣೆಗಾರಿಕೆ ಜಾಸ್ತಿ ಇದೆ. ಎಲ್ಲರೂ ಕೊರೊನಾ ನಿಯಮ ಕಟ್ಟು ನಿಟ್ಟಾಗಿ ಪಾಲಿಸಿ. ನಮ್ಮ ಪ್ರಾಣ, ನಮ್ಮ ಆರೋಗ್ಯ, ನಮ್ಮ ಕೈಯಲ್ಲಿ ಇದೆ ಎನ್ನುವ ಹೊಣೆಗಾರಿಕೆ ಎಲ್ಲರಿಗೂ ಬೇಕು ಅಂತ ಸಚಿವರು ತಿಳಿಸಿದರು.
ಇದನ್ನೂ ಓದಿ
ನಿಖಿಲ್ ಹೊಸ ಸಿನಿಮಾ ಹೆಸರು ‘ಯದುವೀರ’; ಖಡಕ್ ಲುಕ್ ಮೂಲಕ ಹುಟ್ಟುಹಬ್ಬದ ಗಿಫ್ಟ್
ಸಿನಿಮೀಯ ಶೈಲಿಯಲ್ಲಿ ಭೀಕರ ರಸ್ತೆ ಅಪಘಾತ; ಖ್ಯಾತ ನಟ ಬಚಾವ್, ವೈರಲ್ ಆಯ್ತು ಫೋಟೋ
Published On - 3:04 pm, Sat, 22 January 22