AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಖಿಲ್​ ಹೊಸ ಸಿನಿಮಾ ಹೆಸರು ‘ಯದುವೀರ’; ಖಡಕ್​ ಲುಕ್​ ಮೂಲಕ ಹುಟ್ಟುಹಬ್ಬದ ಗಿಫ್ಟ್​

Nikhil Kumaraswamy Birthday: ‘ಯದುವೀರ’ ಚಿತ್ರದ ಪೋಸ್ಟರ್​ ಮೂಲಕ ನಿಖಿಲ್​ ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಲಾಗಿದೆ. ಅವರ ಹೊಸ ಗೆಟಪ್​ ಕಂಡು ಫ್ಯಾನ್ಸ್​ ಖುಷಿ ಆಗಿದ್ದಾರೆ.

ನಿಖಿಲ್​ ಹೊಸ ಸಿನಿಮಾ ಹೆಸರು ‘ಯದುವೀರ’; ಖಡಕ್​ ಲುಕ್​ ಮೂಲಕ ಹುಟ್ಟುಹಬ್ಬದ ಗಿಫ್ಟ್​
ನಿಖಿಲ್ ಕುಮಾರಸ್ವಾಮಿ
TV9 Web
| Edited By: |

Updated on: Jan 22, 2022 | 12:57 PM

Share

ನಟ, ರಾಜಕಾರಣಿ ನಿಖಿಲ್​ ಕುಮಾರಸ್ವಾಮಿ (Nikhil Kumaraswamy) ಅವರಿಗೆ ಇಂದು (ಜ.22) ಹುಟ್ಟುಹಬ್ಬದ ಸಂಭ್ರಮ. ಈ ಖುಷಿಯ ದಿನದಂದು ಅವರ ಹೊಸ ಸಿನಿಮಾದ ಟೈಟಲ್​ ಮತ್ತು ಫಸ್ಟ್​ಲುಕ್​ ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಕೊಟ್ಟ ಮಾತಿನಂತೆಯೇ ಚಿತ್ರತಂಡದಿಂದ ಫಸ್ಟ್​ಲುಕ್​ ಪೋಸ್ಟರ್​ ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ‘ಯದುವೀರ’ (Yaduveera Kannada Movie) ಎಂದು ಶೀರ್ಷಿಕೆ ಇಡಲಾಗಿದೆ. ನಿಖಿಲ್​ ಕುಮಾರ್​ ಅವರು ಖಡಕ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಮಂಜು ಅಥರ್ವ ನಿರ್ದೇಶನ ಮಾಡುತ್ತಿದ್ದು, ಕೆವಿಎನ್​ ಪ್ರೊಡಕ್ಷನ್ಸ್​ ಬ್ಯಾನರ್​ ಮೂಲಕ ನಿಶಾ ವೆಂಕಟ್​ ಕೊನಂಕಿ ಮತ್ತು ಸುಪ್ರಿತ್​ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇದು ನಿಖಿಲ್​ ಕುಮಾರಸ್ವಾಮಿ (Nikhil Kumar) ನಟನೆಯ 5ನೇ ಸಿನಿಮಾ. ಇದೊಂದು ಪಕ್ಕಾ​ ಫ್ಯಾಮಿಲಿ ಎಂಟರ್​ಟೇನ್​ಮೆಂಟ್​​ ಸಿನಿಮಾ ಆಗಲಿರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಜೊತೆಗೆ ಆ್ಯಕ್ಷನ್​ ಕೂಡ ಭರ್ಜರಿಯಾಗಿ ಇರಲಿದೆ.

ಖ್ಯಾತ ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ ಅವರು ‘ಯದುವೀರ’ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ನವೀನ್​ ಕುಮಾರ್​ ಛಾಯಾಗ್ರಹಣ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ನಿಖಿಲ್​ ಜೊತೆ ಬೇರೆ ಯಾವೆಲ್ಲ ಕಲಾವಿದರು ನಟಿಸಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಶೂಟಿಂಗ್​ ಆರಂಭ ಆಗಿದೆ.

‘ಯದುವೀರ’ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವ ಮಂಜು ಅಥರ್ವ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ಹಲವು ಚಿತ್ರಗಳಿಗೆ ಅವರು ಸಹ-ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ‘ಯದುವೀರ’ ಚಿತ್ರದ ಮೂಲಕ ಅವರು ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್​ ಮೂಲಕ ನಿಖಿಲ್​ ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭ ಕೋರಲಾಗಿದೆ. ಅವರ ಹೊಸ ಗೆಟಪ್​ ಕಂಡು ಫ್ಯಾನ್ಸ್​ ಖುಷಿ ಆಗಿದ್ದಾರೆ. ರಗಡ್​ ಲುಕ್​ನಲ್ಲಿ ನಿಖಿಲ್​ ಕಾಣಿಸಿಕೊಂಡಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ.

ಪರಿಸ್ಥಿತಿ ಚೆನ್ನಾಗಿ ಇದ್ದಿದ್ದರೆ ಇಂದು ಅದ್ದೂರಿಯಾಗಿ ನಿಖಿಲ್​ ಕುಮಾರ್​ ಬರ್ತ್​ಡೇ ಆಚರಣೆ ಮಾಡಿಕೊಳ್ಳಬೇಕಿತ್ತು. ಆದರೆ ಕೊರೊನಾ ವೈರಸ್​ ಹಾವಳಿಯಿಂದಾಗಿ ಅವರು ದೊಡ್ಡ ಮಟ್ಟದಲ್ಲಿ ಸೆಲೆಬ್ರೇಟ್​ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೇವಲ ಸೋಶಿಯಲ್​ ಮೀಡಿಯಾ ಮೂಲಕವೇ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ನಿಖಿಲ್​ಗೆ ಶುಭ ಕೋರುತ್ತಿದ್ದಾರೆ.

ಈ ವರ್ಷ ಅಭಿಮಾನಿಗಳ ಜೊತೆ ಸೇರಿ ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತಿಲ್ಲ ಎಂಬ ಬಗ್ಗೆ ನಿಖಿಲ್​ ಕುಮಾರಸ್ವಾಮಿ ಅವರಿಗೆ ಬೇಸರ ಇದೆ. ಜ.21ರಂದು ನಿಖಿಲ್​ ಕುಮಾರಸ್ವಾಮಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್​ ಮಾಡಿದ್ದಾರೆ. ‘ಕೊವಿಡ್ ಸಂಕಷ್ಟದ ಸಮಯದಲ್ಲಿ ಅದ್ದೂರಿ ಹುಟ್ಟುಹಬ್ಬದ ಆಚರಣೆಗೆ ನನ್ನ ಮನಸ್ಸು ಒಪ್ಪುತ್ತಿಲ್ಲ. ಹಾಗಾಗಿ ಈ ವರ್ಷ ನಾನು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ. ಕೊವಿಡ್ ಸಂಕಷ್ಟದಲ್ಲಿ ಇರುವವರಿಗೆ ಅಭಿಮಾನಿಗಳು, ಕಾರ್ಯಕರ್ತರು ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ತಾವಿದ್ದಲ್ಲಿಂದಲೇ ನನಗೆ ಹರಸಿ. ಒಂದು ಅರ್ಥಪೂರ್ಣ ಆಚರಣೆಗೆ ಕೈಜೋಡಿಸಿ’ ಎಂದು ನಿಖಿಲ್​ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:

‘ಪೈರಸಿ ಮೂಲಕ ‘ರೈಡರ್​’ ನೋಡ್ಬೇಡಿ’; ಕೈ ಮುಗಿದು ಮನವಿ ಮಾಡಿದ ನಿಖಿಲ್​ ಕುಮಾರ್​

‘ರೈಡರ್​’ ಚಿತ್ರ ನೋಡಿ ಜನ ಹೇಗೆ ಕಮೆಂಟ್​ ಮಾಡಿದಾರೆ? ಅಸಲಿ ವಿಚಾರ ತೆರೆದಿಟ್ಟ ನಿಖಿಲ್​

Follow Us
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು