ಶಿವಮೊಗ್ಗ-ತಾಳಗುಪ್ಪ ಪ್ಯಾಸೆಂಜರ್‌ ರೈಲು ಸೇರಿದಂತೆ ವಿವಿಧ ರೈಲುಗಳ ಸಂಚಾರ ರದ್ದು; ಕಾರಣ ಇಲ್ಲಿದೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 06, 2023 | 9:24 AM

ಈ ಕೆಳಗಿನ ದಿನಾಂಕದಂದು ಶಿವಮೊಗ್ಗ ಟೌನ್‌-ತಾಳಗುಪ್ಪ ಪ್ಯಾಸೆಂಜರ್‌ ರೈಲು ಸೇರಿದಂತೆ ವಿವಿಧ ರೈಲುಗಳ ಸಂಚಾರ ರದ್ದಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಶಿವಮೊಗ್ಗ-ತಾಳಗುಪ್ಪ ಪ್ಯಾಸೆಂಜರ್‌ ರೈಲು ಸೇರಿದಂತೆ ವಿವಿಧ ರೈಲುಗಳ ಸಂಚಾರ ರದ್ದು; ಕಾರಣ ಇಲ್ಲಿದೆ
ಪ್ರಾತಿನಿಧಿಕ
Follow us on

ಶಿವಮೊಗ್ಗ: ಕುಂಸಿ ರೈಲ್ವೆ(Railway)ವಿಭಾಗದಲ್ಲಿ ವಿವಿಧ ತಾಂತ್ರಿಕ ನಿರ್ವಹಣೆ ಮತ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆ ಜುಲೈ 7ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 3.30ರವರೆಗೆ ಕುಂಸಿ ಮಾರ್ಗದಲ್ಲಿ ಸಂಚರಿಸುವ ರೈಲು ಸಂಖ್ಯೆ 07349 / 07350 ಶಿವಮೊಗ್ಗ ಟೌನ್‌-ತಾಳಗುಪ್ಪಾ-ಶಿವಮೊಗ್ಗ ಟೌನ್‌ ಪ್ಯಾಸೆಂಜರ್‌ ರೈಲುಗಳ ಓಡಾಟ ರದ್ದು ಮಾಡಲಾಗಿದ್ದು, ಇನ್ನುಳಿದಂತೆ ಇತರೆ ದಿನಗಳಲ್ಲಿ ರೈಲುಗಳು ಎಂದಿನಂತೆ ಓಡಾಟ ನಡೆಸಲಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ತಿಳಿಸಿದೆ. ಇದರ ಜೊತೆಗೆ ವಿವಿಧ ರೈಲುಗಳ ಸಂಚಾರ ಭಾಗಶಃ ರದ್ದಾಗಿದ್ದು, ಇಲ್ಲಿದೆ ಮಾಹಿತಿ.

ಯಾವ ಯಾವ ಮಾರ್ಗದ ರೈಲುಗಳು ಭಾಗಶಃ ರದ್ದು?

ಇನ್ನುಳಿದಂತೆ ಮಿಲವಿಟ್ಟನ್-ಟುಟಿಕೋರಿನ್ ವಿಭಾಗದ ನಡುವಿನ ಮಾರ್ಗದಲ್ಲಿ ಕಾಮಗಾರಿ ಕೈಗೊಂಡಿರುವುದರಿಂದ ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲು ದಕ್ಷಿಣ ರೈಲ್ವೆಯು ಸೂಚನೆ ನೀಡಿದ್ದು, ಈ ಕೆಳಗಿನಂತಿದೆ.

ಮಣಿಯಾಚಿ-ಟುಟಿಕೋರಿನ್ ನಡುವೆ ಸಂಚರಿಸುವ ರೈಲು ಭಾಗಶಃ ರದ್ದು

ಜುಲೈ 10 ರಂದು ಮೈಸೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16236 ಮೈಸೂರು – ಟುಟಿಕೋರಿನ್ ಎಕ್ಸ್‌ಪ್ರೆಸ್ ರೈಲನ್ನು ವಂಚಿ ಮಣಿಯಾಚಿ- ಟುಟಿಕೋರಿನ್ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಜುಲೈ 11 ರಂದು ಟುಟಿಕೋರಿನ್‌ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16235 ಟುಟಿಕೋರಿನ್ – ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ಟುಟಿಕೋರಿನ್ – ವಂಚಿ ಮಣಿಯಾಚಿ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.

ಇದನ್ನೂ ಓದಿ:Ganesh Chaturthi: ಗಣೇಶ ಚತುರ್ಥಿ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ನಿವಾರಿಸಲು ಕೇಂದ್ರ ರೈಲ್ವೆಯಿಂದ 156 ವಿಶೇಷ ರೈಲುಗಳ ವ್ಯವಸ್ಥೆ

ಪ್ರಾಯೋಗಿಕ ನಿಲುಗಡೆಗೆ ಅವಕಾಶ

ಇನ್ನು ಪ್ರಾಯೋಗಿಕ ಆಧಾರದ ಮೇಲೆ ರೈಲು ನಿಲ್ದಾಣಗಳಿಗೆ ನಿಲುಗಡೆ ಮಾಡಲು ದಕ್ಷಿಣ ಮಧ್ಯ ರೈಲ್ವೆಯು ಈ ಕೆಳಗಿನಂತೆ ಸೂಚನೆ ನೀಡಿದೆ.

1) ಜುಲೈ 5 ರಂದು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12295 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ – ದಾನಪುರ ಸಂಘಮಿತ್ರ ಎಕ್ಸ್‌ಪ್ರೆಸ್‌ ರೈಲು ರಾಮಗುಂಡಂ ನಿಲ್ದಾಣಕ್ಕೆ 02:09 AM ಗೆ ಆಗಮಿಸಿ, 02:10 AM ಗೆ ನಿರ್ಗಮಿಸಲಿದೆ.

2) ಜುಲೈ 5 ರಂದು ಯಶವಂತಪುರದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17604 ಯಶವಂತಪುರ – ಕಾಚಿಗುಡಾ ಎಕ್ಸ್‌ಪ್ರೆಸ್‌ ರೈಲು ಶಾದ್‌ನಗರ ನಿಲ್ದಾಣಕ್ಕೆ 03:25AM ಗೆ ಆಗಮಿಸಿ 03:26AM ಗೆ ನಿರ್ಗಮಿಸಲಿದೆ.

3) ಜುಲೈ 6 ರಂದು ಯಶವಂತಪುರದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17212 ಯಶವಂತಪುರ – ಮಚಿಲಿಪಟ್ಟಣಂ ಎಕ್ಸ್‌ಪ್ರೆಸ್‌ ರೈಲು ಕುಂಬಮ್ ನಿಲ್ದಾಣಕ್ಕೆ 00:04 AM ಗೆ ಆಗಮಿಸಿ, 00:05 AM ನಿರ್ಗಮಿಸಲಿದೆ.

4) ಜುಲೈ 7 ರಂದು ಮೈಸೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12578 ಮೈಸೂರು – ದರ್ಭಾಂಗ ಭಾಗಮತ್ ಎಕ್ಸ್‌ಪ್ರೆಸ್ ರೈಲು ರಾಮಗುಂಡಂ ನಿಲ್ದಾಣಕ್ಕೆ 06:44 AM ಗೆ ಆಗಮಿಸಿ, 06:45 AMಗೆ ನಿರ್ಗಮಿಸಲಿದೆ.

5) ಜುಲೈ 7 ರಂದು ಯಶವಂತಪುರದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16569 ಯಶವಂತಪುರ-ಕಾಚಿಗುಡಾ ಎಕ್ಸ್‌ಪ್ರೆಸ್‌ ರೈಲು ಶ್ರೀರಾಮನಗರ, ಜಡ್ಚರ್ಲಾ ಮತ್ತು ಶಾದ್‌ನಗರ ನಿಲ್ದಾಣಗಳಿಗೆ ಕ್ರಮವಾಗಿ 11:44/11:46PM ಗೆ, 01:17/01:18AM ಆಗಮಿಸಿ ಮತ್ತು 01:43/01:44AM ಗೆ ನಿರ್ಗಮಿಸಲಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ