- Kannada News Photo gallery Here are the latest photos of Jog Falls which has increased in monsoon rains
ಮತ್ತೆ ಕಳೆಕಟ್ಟಿದ ಜೋಗದ ವೈಯ್ಯಾರ: ಮೈದುಂಬಿ ಬೋರ್ಗರೆಯುತ್ತಿರುವ ಜೋಗ್ ಫಾಲ್ಸ್ನ ಲೆಟೆಸ್ಟ್ ಫೋಟೋಸ್ ನೋಡಿ
ಮಳೆಗಾಲ ಶುರುವಾಗುತ್ತಿದ್ದಂತೆ ವಿಶ್ವ ವಿಖ್ಯಾತ ಜೋಗ್ ಫಾಲ್ಸ್(Jog Falls)ನ ಸೌಂದರ್ಯ ಇಮ್ಮಡಿಯಾಗುತ್ತಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅದರ ಅಂದ ಮತ್ತಷ್ಟು ಹೆಚ್ಚಿದ್ದು, ಫೋಟೋಸ್ ಇಲ್ಲಿದೆ ನೋಡಿ.
Updated on:Jul 06, 2023 | 12:56 PM

ಮಳೆಗಾಲ ಶುರುವಾಗುತ್ತಿದ್ದಂತೆ ವಿಶ್ವ ವಿಖ್ಯಾತ ಜೋಗ್ ಫಾಲ್ಸ್(Jog Falls)ನ ಸೌಂದರ್ಯ ಇಮ್ಮಡಿಯಾಗುತ್ತಿದೆ.

ಹೌದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಜೋಗ ಜಲಪಾತವು ಮಾನ್ಸೂನ್ ಮಳೆಯಿಂದ ವೈಭವೀಕರಿಸುತ್ತಿದೆ.

ಮುಂಗಾರು ಮಳೆ ಆರಂಭವಾಗಿದ್ದರೂ, ಮಳೆಯ ಅಭಾವ ಕಡಿಮೆ ಇತ್ತು. ಇದೀಗ ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅದರ ಅಂದ ಮತ್ತಷ್ಟು ಹೆಚ್ಚಿದೆ.

ಮಲೆನಾಡಿನ ದಟ್ಟ ಕಾಡಡವಿಗಳ ಮಧ್ಯೆ ಹರಿದು ಬಂದು ರೂಪಗೊಂಡಿರುವ ಈ ವಿಶ್ವ ವಿಖ್ಯಾತ ಜೋಗ ಜಲಪಾತ ನೋಡುಗರ ಮನ ತಣಿಯುವಂತೆ ಮಾಡುತ್ತಿದೆ.

ಮೋಡದ ನಡುವೆ ಧುಮುಕುತ್ತಿರುವ ಜಲಪಾತವನ್ನ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೆ ಜೋಗ ಫಾಲ್ಸ್ಗೆ ಬರುತ್ತಿದೆ.

ಇನ್ನು ಮಳೆಗಾಲದಲ್ಲಿ ಮಲೆನಾಡಿನ ಜೋಗ ಜಲಪಾತವನ್ನ ನೋಡಲು ದೇಶ ಹೊರತುಪಡಿಸಿ ವಿದೇಶದಿಂದಲೂ ಪ್ರವಾಸಿಗರು ಹರಿದು ಬರುತ್ತಾರೆ.

ದಟ್ಟ ಮಂಜಿನ ನಡುವೆ ಧೋ ಎಂದು ಬೀಳುತ್ತಿರುವ ಜಲಪಾತವನ್ನ ನೋಡುತ್ತಾ, ಪ್ರಕೃತಿಯೊಡನೆ ಪ್ರವಾಸಿಗರು ಕಳೆದು ಹೋಗುತ್ತಿದ್ದಾರೆ
Published On - 12:55 pm, Thu, 6 July 23



















