ಶಿವಮೊಗ್ಗ: ಜಿಲ್ಲೆಯ ಆಗುಂಬೆ ಗಾಟಿಯ ಮೊದಲನೇ ತಿರುವಿನಲ್ಲಿ ನಿನ್ನೆ( ಸೆಪ್ಟೆಂಬರ್, 19) ಚಲಿಸುತ್ತಿದ್ದ ಎಸ್ಯುವಿಕೆ ಕಾರಿನಲ್ಲಿ ದಿಡೀರನೆ ಬೆಂಕಿಯೊಂದು ಕಾಣಿಸಿಕೊಂಡಿದ್ದು, ಇಡೀ ಕಾರು ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ.
ಕಾರ್ಕಳದಲ್ಲಿ ನಿಸಾನ್ ಎಸ್ಯುವಿಕೆ ವಾಹನವನ್ನು ಖರೀದಿಸಿ ಶಿವಮೊಗ್ಗಕ್ಕೆ ಬರುತ್ತಿದ್ದ ವೇಳೆ ಬ್ಯಾನೆಟ್ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಕಾರಿನಿಂದ ಇಳಿದು ತಪಾಸಣೆ ಮಾಡುವಾಗ ಬೆಂಕಿ ನಿಧಾನವಾಗಿ ವಾಹನವನ್ನು ಆವರಿಸಿಕೊಂಡಿದೆ.
ಶಿವಮೊಗ್ಗದ ಅರವಿಂದ್ ಈ ವಾಹನ ಖರೀದಿಸಿ ವಾಪಾಸಾಗುವಾಗ ಆಗುಂಬೆ ಮೊದಲನೇ ತಿರುವಿನ ಬಳಿ (14ನೇ ಸುತ್ತು) ಈ ಘಟನೆ ನಡೆದಿದೆ. ಸೆಕೆಂಡ್ ಹ್ಯಾಂಡ್ ಕಾರ್ ಆಗಿದ್ದು, ಕಾರಿನಲ್ಲಿ ಅರವಿಂದ್ ಸೇರಿದಂತೆ ಇಬ್ಬರೂ ಪ್ರಯಾಣ ನಡೆಸುತ್ತಿದ್ದರು. ಘಟನೆಯಿಂದಾಗಿ ಗಾಟಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೆ ಕೆಲ ಕಾಲ ಸಂಚಾರ ಬಂದ್ ಆಗಿತ್ತು. ಬಳಿಕ ಆಗುಂಬೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿಯು ಬೆಂಕಿ ನಂದಿಸಿದ್ದಾರೆ.
ಹಾವೇರಿ: ದರ್ಗಾ ಮಾರುಕಟ್ಟೆಯಲ್ಲಿ ಬೆಂಕಿ; 200ಕ್ಕೂ ಹೆಚ್ಚು ಅಂಗಡಿ ಭಸ್ಮ
ಬೆಳ್ಳಂಬೆಳಗ್ಗೆ ಹಾವೇರಿಯಲ್ಲಿ ಬೆಂಕಿ ಅವಘಡವೊಂದು ಸಂಭವಿಸಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ದರ್ಗಾ ಮಾರುಕಟ್ಟೆಯಲ್ಲಿ ಬೆಂಕಿ ಬಿದ್ದು 200ಕ್ಕೂ ಹೆಚ್ಚು ಅಂಗಡಿಗಳು ಭಸ್ಮಗೊಂಡಿವೆ. ಬಹುತೇಕ ತರಕಾರಿ, ಹಣ್ಣು, ದಿನಸಿ ಅಂಗಡಿಗಳಲ್ಲಿನ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ದುಷ್ಕರ್ಮಿಗಳು ಮಾರ್ಕೆಟ್‌ಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ರಾಣೆಬೆನ್ನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ರಾಣೆಬೆನ್ನೂರಿನ ದರ್ಗಾ ಮಾರುಕಟ್ಟೆಯಲ್ಲಿ ಬೆಂಕಿ; 200ಕ್ಕೂ ಹೆಚ್ಚು ಅಂಗಡಿ ಭಸ್ಮ
ಬೆಂಗಳೂರಲ್ಲಿ ಬೆಂಕಿ ಅವಘಡ: ಸೊಳ್ಳೆ ಪರದೆ ತಯಾರಿಕೆ ಕಾರ್ಖಾನೆಯಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳಿಗೆ ಹಾನಿ
Published On - 3:01 pm, Mon, 20 September 21