ಶಿವಮೊಗ್ಗದ ಗುಡಿಸಲಿನಲ್ಲಿ ಸಿಲಿಂಡರ್ ಸ್ಫೋಟಗೊಂಡು ಬೀರುವಿನಲ್ಲಿದ್ದ 4 ಲಕ್ಷ ನಗದು ಭಸ್ಮ, ಬೀದಿಗೆ ಬಿದ್ದ ಮಹಿಳೆ

| Updated By: ಆಯೇಷಾ ಬಾನು

Updated on: Mar 15, 2022 | 5:16 PM

ಸಿಲಿಂಡರ್ ಸ್ಫೋಟದಿಂದ ಗುಡಿಸಲು ಸುಟ್ಟು ಹೋಗಿದ್ದು ಬೀರು ನಲ್ಲಿಟ್ಟಿದ್ದ ನಾಲ್ಕು ಲಕ್ಷ ಹಣ ಸುಟ್ಟು ಭಸ್ಮವಾಗಿದೆ. ಮಕ್ಕಳ ಭವಿಷ್ಯಕ್ಕೆಂದು ಮಹಿಳೆ ಹಣ ಕೂಡಿಟ್ಟಿದ್ದರಂತೆ. ಆದ್ರೆ ಅಗ್ನಿ ದುರಂತದಿಂದ ಮಹಿಳೆ ಬದುಕು ಬೀದಿಗೆ ಬಂದಿದೆ.

ಶಿವಮೊಗ್ಗದ ಗುಡಿಸಲಿನಲ್ಲಿ ಸಿಲಿಂಡರ್ ಸ್ಫೋಟಗೊಂಡು ಬೀರುವಿನಲ್ಲಿದ್ದ 4 ಲಕ್ಷ ನಗದು ಭಸ್ಮ, ಬೀದಿಗೆ ಬಿದ್ದ ಮಹಿಳೆ
ಶಿವಮೊಗ್ಗದ ಗುಡಿಸಲಿನಲ್ಲಿ ಸಿಲಿಂಡರ್ ಸ್ಫೋಟಗೊಂಡು ಬೀರುವಿನಲ್ಲಿದ್ದ 4 ಲಕ್ಷ ನಗದು ಭಸ್ಮ, ಬೀದಿಗೆ ಬಿದ್ದ ಮಹಿಳೆ
Follow us on

ಶಿವಮೊಗ್ಗ: ಭದ್ರಾವತಿ ತಾಲೂಕಿನ ರಂಗನಾಥ ಗ್ರಾಮದ ಗುಡಿಸಲಿನಲ್ಲಿ ಸಿಲಿಂಡರ್ ಸ್ಫೋಟಗೊಂಡು 4 ಲಕ್ಷ ನಗದು ಸುಟ್ಟು ಭಸ್ಮವಾಗಿದೆ. ಒಂಟಿ ಮಹಿಳೆ ವಲರಮಡಿ ಎಂಬುವವರು ವಾಸವಿದ್ದ ಗುಡಿಸಲು ಇದಾಗಿದ್ದು ಗೃಹೋಪಯೋಗಿ ವಸ್ತುಗಳು ಸಹ ಬೆಂಕಿಗಾಹುತಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಲಿಂಡರ್ ಸ್ಫೋಟದಿಂದ ಗುಡಿಸಲು ಸುಟ್ಟು ಹೋಗಿದ್ದು ಬೀರು ನಲ್ಲಿಟ್ಟಿದ್ದ ನಾಲ್ಕು ಲಕ್ಷ ಹಣ ಸುಟ್ಟು ಭಸ್ಮವಾಗಿದೆ. ಮಕ್ಕಳ ಭವಿಷ್ಯಕ್ಕೆಂದು ಮಹಿಳೆ ಹಣ ಕೂಡಿಟ್ಟಿದ್ದರಂತೆ. ಆದ್ರೆ ಅಗ್ನಿ ದುರಂತದಿಂದ ಮಹಿಳೆ ಬದುಕು ಬೀದಿಗೆ ಬಂದಿದೆ.

ನಿಂತಿದ್ದ ಟ್ರ್ಯಾಕ್ಟರ್​​ಗೆ ಕೆಎಸ್ಆರ್​ಟಿಸಿ ಬಸ್ ಡಿಕ್ಕಿ ಮಹಿಳೆ ಸಾವು
ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 75ರ ಯಂಟಗಾನಹಳ್ಳಿ ಬಳಿ ನಿಂತಿದ್ದ ಟ್ರ್ಯಾಕ್ಟರ್​​ಗೆ ಕೆಎಸ್ಆರ್​ಟಿಸಿ ಬಸ್ ಡಿಕ್ಕಿ ಹೊಡೆದಿದ್ದು ಬಸ್​ನಲ್ಲಿದ್ದ ಐವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸುನೀಲ್, ಜೈಲವುದೀನ್, ಹುಸೇನ್‌ಬೀ, ಕಮಲ್ ಉದ್ದೀನ್, ಹನುಮಂತರಾಜು ಗಾಯಗೊಂಡವರು. ಹೆದ್ದಾರಿ ಬದಿಯ ಗಿಡಕ್ಕೆ ನೀರು ಹಾಕುವ ವೇಳೆ ನಿಂತಿದ್ದ ಟ್ರ್ಯಾಕ್ಟರ್ ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿದೆ. ಟ್ಯಾಂಕರ್ ನಿಂದ ಗಿಡಕ್ಕೆ ನೀರು ಹಾಕುತ್ತಿದ್ದ ಮಹಿಳೆ ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಹಾಡಹಗಲೇ ಗನ್‌ ತೋರಿಸಿ ದರೋಡೆಗೆ ಯತ್ನ
ಬೆಂಗಳೂರಿನಲ್ಲಿ ಹಾಡಹಗಲೇ ಗನ್‌ ತೋರಿಸಿ ದರೋಡೆಗೆ ಯತ್ನಿಸಿರುವ ಘಟನೆ ನಡೆದಿದೆ. ಮತ್ತಿಕೆರೆಯ ಬಾಂಬೆ ಡೈಯಿಂಗ್ ರಸ್ತೆಯಲ್ಲಿ ಗನ್‌ ತೋರಿಸಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಗೆ ಯತ್ನಿಸಲಾಗಿದೆ. ಇಬ್ಬರು ವೃದ್ಧೆಯರು, ಓರ್ವ ಯುವತಿ ಇರುವುದನ್ನ ಗಮನಿಸಿ ಬಂದ ಕಳ್ಳರು ಮೂರು ಚಿನ್ನಾಭರಣ ಬಾಕ್ಸ್ ಕದ್ದು ಪರಾರಿಯಾಗಲು ಯತ್ನಿಸಿದ್ದಾರೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನಾವೆಲ್ಲ ಮೊದಲಿನ ಹಾಗೆಯೇ ಪ್ರೀತಿ-ವಿಶ್ವಾಸದಿಂದ ಒಟ್ಟಾಗಿ ಜೀವಿಸೋಣ ಎಂದರು ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್

Closing Bell: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 709 ಪಾಯಿಂಟ್ಸ್, ನಿಫ್ಟಿ 208 ಪಾಯಿಂಟ್ಸ್ ಕುಸಿತ

Published On - 5:07 pm, Tue, 15 March 22