Closing Bell: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 709 ಪಾಯಿಂಟ್ಸ್, ನಿಫ್ಟಿ 208 ಪಾಯಿಂಟ್ಸ್ ಕುಸಿತ
ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಮಾರ್ಚ್ 15ನೇ ತಾರೀಕಿನ ಮಂಗಳವಾರದಂದು ಭಾರೀ ಇಳಿಕೆ ಕಂಡಿದೆ. ನಿಫ್ಟಿಯಲ್ಲಿ ಪ್ರಮುಖವಾಗಿ ಏರಿಕೆ, ಇಳಿಕೆ ಕಂಡ ಷೇರುಗಳ ವಿವರ ಇಲ್ಲಿದೆ.
ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಮಾರ್ಚ್ 15ನೇ ತಾರೀಕಿನ ಮಂಗಳವಾರದಂದು ಭಾರೀ ಇಳಿಕೆ ಕಂಡಿದೆ. ಸತತ ಐದು ದಿನಗಳಿಂದ ಏರಿಕೆ ಕಾಣುತ್ತಾ ಸಾಗಿದ್ದ ಮಾರುಕಟ್ಟೆಯು ಇಂದು ಲಯ ಕಳೆದುಕೊಂಡಿತು. ಲೋಹ, ತೈಲ ಮತ್ತು ಅನಿಲ ಹಾಗೂ ಮಾಹಿತಿ ತಂತ್ರಜ್ಞಾನ ಷೇರುಗಳು ದಿನಾಂತ್ಯಕ್ಕೆ 16,700 ಪಾಯಿಂಟ್ಸ್ಗೂ ಕೆಳಗೆ ಎಳೆದಿದೆ. ದಿನಾಂತ್ಯಕ್ಕೆ ಸೆನ್ಸೆಕ್ಸ್ 709.17 ಪಾಯಿಂಟ್ಸ್ ಅಥವಾ ಶೇ 1.26ರಷ್ಟು ಇಳಿಕೆ ಕಂಡು, 55,776.85 ಪಾಯಿಂಟ್ಸ್ನೊಂದಿಗೆ ವಹಿವಾಟು ಮುಗಿಸಿದೆ. ಇನ್ನು ನಿಫ್ಟಿ 208.30 ಪಾಯಿಂಟ್ಸ್ ಅಥವಾ ಶೇ 1.23ರಷ್ಟು ಕುಸಿದು, 16,663 ಪಾಯಿಂಟ್ಸ್ನೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ.
ಇಂದಿನ ವಹಿವಾಟಿನಲ್ಲಿ 1296 ಕಂಪೆನಿಗಳ ಷೇರು ಏರಿಕೆಯನ್ನು ದಾಖಲಿಸಿದರೆ, 20214 ಕಂಪೆನಿ ಷೇರುಗಳು ಏರಿಕೆ ಕಂಡಿವೆ. 95 ಕಂಪೆನಿ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ವಲಯವಾರು ನೋಡುವುದಾದರೆ, ವಾಹನವೊಂದನ್ನು ಹೊರತುಪಡಿಸಿ, ಇತರ ಎಲ್ಲ ವಲಯಗಳು ಕುಸಿತ ದಾಖಲಿಸಿವೆ. ಮಾಹಿತಿ ತಂತ್ರಜ್ಞಾನ, ಲೋಹ, ವಿದ್ಯುತ್ ಮತ್ತು ತೈಲ ಹಾಗೂ ಅನಿಲ ಸೂಚ್ಯಂಕವು ಶೇ 1ರಿಂದ 4ರಷ್ಟು ಕುಸಿದಿವೆ. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ತಲಾ ಶೇ 0.5ರಷ್ಟು ಇಳಿಕೆ ಕಂಡಿವೆ.
ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಟಾಟಾ ಕನ್ಸ್ಯೂಮರ್ ಪಾಡಕ್ಟ್ಸ್ ಶೇ 3.65 ಮಹೀಂದ್ರಾ ಅಂಡ್ ಮಹೀಂದ್ರಾ ಶೇ 2.42 ಶ್ರೀ ಸಿಮೆಂಟ್ಸ್ ಶೇ 1.96 ಸಿಪ್ಲಾ ಶೇ 1.85 ಮಾರುತಿ ಸುಜುಕಿ ಶೇ 1.41
ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಹಿಂಡಾಲ್ಕೋ ಶೇ -5.26 ಟಾಟಾ ಸ್ಟೀಲ್ ಶೇ -4.88 ಒಎನ್ಜಿಸಿ ಶೇ -4.69 ಕೋಲ್ ಇಂಡಿಯಾ ಶೇ -4.13 ಜೆಡ್ಡಬ್ಲ್ಯು ಸ್ಟೀಲ್ ಶೇ -3.56
ಇದನ್ನೂ ಓದಿ: Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ