Ganja: ವೈದ್ಯಕೀಯ ಲೋಕಕ್ಕೆ ನಶೆ ಏರಿಸಿದ ಗಾಂಜಾ, ಐವರು ಎಂಬಿಬಿಎಸ್ ವಿದ್ಯಾರ್ಥಿಗಳು ಅರೆಸ್ಟ್

|

Updated on: Jun 25, 2023 | 7:51 AM

ಗಾಂಜಾ ಬೆಳೆಯುತ್ತಿದ್ದ ಹಾಗೂ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ವೈದ್ಯಕೀಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 42 ಸಾವಿರ ಮೌಲ್ಯದ ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

Ganja: ವೈದ್ಯಕೀಯ ಲೋಕಕ್ಕೆ ನಶೆ ಏರಿಸಿದ ಗಾಂಜಾ, ಐವರು ಎಂಬಿಬಿಎಸ್ ವಿದ್ಯಾರ್ಥಿಗಳು ಅರೆಸ್ಟ್
ಗಾಂಜಾ
Follow us on

ಶಿವಮೊಗ್ಗ: ರಾಜ್ಯದಲ್ಲಿ ವಿದ್ಯಾರ್ಥಿಗಳಲ್ಲಿ ಗಾಂಜಾ(Ganja) ಗುಂಗು ಹೆಚ್ಚಾಗಿದೆ. ಡಾಕ್ಟರ್ ಆಗಬೇಕು, ಲಾಯರ್ ಆಗಬೇಕು ಎಂದು ಎಲ್ಲೆಲ್ಲಿಂದಲೂ ಬಂದ ವಿದ್ಯಾರ್ಥಿಗಳು ಗಾಂಜಾ ನಶೆಯಲ್ಲಿ ತೇಲಾಡುತ್ತಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಮಂಗಳೂರು, ಉಡುಪಿಯಲ್ಲಿ ಮಣಿಪಾಲದಲ್ಲಿ ನಡೆದಿದ್ದ ಗಾಂಜಾ ದಂಧೆ ಬಯಲಾಗಿತ್ತು. ಸದ್ಯ ಈಗ ಗಾಂಜಾ ಬೆಳೆಯುತ್ತಿದ್ದ ಹಾಗೂ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ವೈದ್ಯಕೀಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ(Medical Students). ಬಂಧಿತರಿಂದ 42 ಸಾವಿರ ಮೌಲ್ಯದ ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ತಮಿಳುನಾಡಿನ ವಿಘ್ನರಾಜ್ (28), ಕೇರಳದ ಇಡುಕ್ಕಿ ಜಿಲ್ಲೆಯವರಾದ ವಿನೋದ್ ಕುಮಾರ್ (27), ತಮಿಳುನಾಡಿನ ಧರ್ಮಪುರಿಯ ಪಾಂಡಿದೊರೈ (27), ವಿಜಯಪುರ ಮೂಲದ ಅಬ್ದುಲ್ ಖಯ್ಯಂ ಮತ್ತು ವಿಜಯನಗರ ಜಿಲ್ಲೆಯ ಕೊಟ್ಟೂರಿನ ಅರ್ಪಿತಾ (24) ಬಂಧಿತ ಆರೋಪಿಗಳು. ಈ ಐವರೂ ನಗರದ ಖಾಸಗಿ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿ ಕೆ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಮಲೆನಾಡಿನಲ್ಲಿ ಗಾಂಜಾ ದಂಧೆ ಜೋರಾಗಿ ನಡೆಯುತ್ತಿದೆ. ಹೊರ ಜಿಲ್ಲೆ ಮತ್ತು ಹೊರ ರಾಜ್ಯದಿಂದ ಸಲೀಸಾಗಿ ಮಲೆನಾಡಿಗೆ ಗಾಂಜಾ ಪೂರೈಕೆ ಆಗುತ್ತಿದೆ. ಇದರ ಜೊತೆಗೆ ಮಲೆನಾಡಿನಲ್ಲೂ ಕದ್ದು ಮುಚ್ಚಿ ಗಾಂಜಾವನ್ನು ಬೆಳೆಯುತ್ತಾರೆ. ಸದ್ಯ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಭರ್ಜರಿಯಾಗಿ ಬೇಟೆಯಾಡಿದ್ದಾರೆ. ಆಪರೇಶನ್ ಗಾಂಜಾದಲ್ಲಿ ಮೊದಲು ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳನ್ನು ಲಾಕ್ ಮಾಡಿದ್ದು ಬಂಧಿತರಿಂದ ಸಿಕ್ಕ ಮಾಹಿತಿಯಿಂದ ಮತ್ತೆ ಮೂವರನ್ನು ಅರೆಸ್ಟ್ ಮಾಡಲಾಗಿದೆ.

ಇದನ್ನೂ ಓದಿ: ಹದಿಹರೆಯದವರಲ್ಲಿ ಗಾಂಜಾ ಸೇವನೆ ಖಿನ್ನತೆಗೆ ಕಾರಣವಾಗುತ್ತದೆಯೇ? ತಜ್ಞರ ಸಲಹೆ ಇಲ್ಲಿದೆ

ಗ್ರಾಮಾಂತರ ಪೊಲೀಸರ ದಾಳಿ ವೇಳೆ ಬಿಜಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಅಬ್ದುಲ್ ಖಯ್ಯಂ (25) ಮತ್ತು ಬಳ್ಳಾರಿ ಮೂಲದ ವೈದ್ಯಕೀಯ ವಿದ್ಯಾರ್ಥಿ ಅರ್ಪಿತಾ (23) ಇಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರಿಂದ 466 ಗ್ರಾಂ ಒಣ ಗಾಂಜಾ ಸಿಕ್ಕಿದ್ದು ಇದರ ಮೌಲ್ಯ 20 ಸಾವಿರ ರೂಪಾಯಿ ಆಗಿದೆ. ಇದರ ಜೊತೆಗೆ ಟೋಕ್ರಮ್ ಅಗ್ರೋ, ಟೋಕ್ರಮ್ ಮೈಕ್ರೋ, ಟೋಕ್ರಮ್ ಕಾಲ್ ಮಾರ್ಗ್ ಮುಂತಾದ ಮಾದಕ ವಸ್ತುಗಳು ಪತ್ತೆಯಾಗಿವೆ. ಈ ಇಬ್ಬರು ವಿದ್ಯಾರ್ಥಿಗಳು ಶಿವಮೊಗ್ಗದ ಹಳೆ ಗುರುಪುರ ಬಡಾವಣೆಯ ಮೂರನೇ ಅಂತಸ್ತಿನ ಮನೆಯಲ್ಲಿ ವಾಸವಾಗಿದ್ದರು.

ಮೈಸೂರಿನಿಂದ ಒಂದು ಕೆ.ಜಿ. ಗಾಂಜಾ ಬಂದಿತ್ತು. ಆ ಗಾಂಜಾವನ್ನು ಈ ಇಬ್ಬರು ಸೇರಿ ಮೆಡಿಕಲ್ ಕಾಲೇಜ್ ನ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಗ್ರಾಮಾಂತರ ಪೊಲೀಸರು ಮೆಡಿಕಲ್ ವಿದ್ಯಾರ್ಥಿಗಳು ಪುರಲೆಯಲ್ಲಿರುವ ತಮ್ಮದೇ ಖಾಸಗಿ ಮೆಡಿಕಲ್ ಕಾಲೇಜ್ ನ ಮುಂಭಾಗದಲ್ಲಿ ವಿದ್ಯಾರ್ಥಿಗಳು ಗಾಂಜಾ ಬೆಳೆದಿರುವುದು ತನಿಖೆ ವೇಳೆಯಲ್ಲಿ ಬಹಿರಂಗವಾಗಿದೆ. ವಿದ್ಯಾರ್ತಿಗಳು ಬೆಳೆದ ಗಾಂಜಾವನ್ನು ಕೂಡಾ ಪೊಲೀಸರು ಸೀಜ್ ಮಾಡಿಕೊಂಡಿದ್ದಾರೆ. ಮಲೆನಾಡಿನಲ್ಲಿ ಗಾಂಜಾ ಮತ್ತು ಮಾದಕ ವಸ್ತುಗಳ ವ್ಯಸನಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಅದರಲ್ಲೂ ಮೆಡಿಕಲ್ ಕಾಲೇಜ್, ಎಂಜನಿಯರಿಂಗ್ ಕಾಲೇಜ್ ಸೇರಿದಂತೆ ಪದವಿ ವಿದ್ಯಾರ್ಥಿಗಳು ಗಾಂಜಾ ಮತ್ತು ಮಾದಕ ವಸ್ತುಗಳನ್ನು ಬಳಕೆ ಮಾಡುತ್ತಿದ್ದಾರೆ. ಅದರಲ್ಲೂ ಗಾಂಜಾ ಹೆಚ್ಚು ಮಲೆನಾಡಿನಲ್ಲಿ ಮಾರಾಟ ಆಗುತ್ತಿದೆ. ಗ್ರಾಮಾಂತರ ಪೊಲೀಸರು ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಗಾಂಜಾ ಮತ್ತು ಮಾದಕ ವಸ್ತುಗಳನ್ನು ಸೀಜ್ ಮಾಡಿದ್ದಾರೆ.

ಇನ್ನು ವಿಚಾರಣೆ ವೇಳೆ ಅರ್ಪಿತಾ ಮತ್ತು ಖಯ್ಯಂ ತಮ್ಮ ಸ್ನೇಹಿತರ ಹೆಸರುಗಳನ್ನು ಬಹಿರಂಗಪಡಿಸಿದ್ದು ಪೊಲೀಸರ ತಂಡವು ಶಿವಗಂಗಾ ಲೇಔಟ್ ಮನೆಯಲ್ಲಿ ಉಳಿದ ಮೂವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಉಡುಪಿ: ಡ್ರಗ್ಸ್ ಜಾಲದಲ್ಲಿ ಸಿಲುಕಿದ್ದ 42 ವಿದ್ಯಾರ್ಥಿಗಳು ಅಮಾನತು, ಮಣಿಪಾಲ್ ಹಾಸ್ಟೆಲ್​ ರೂಂನಲ್ಲಿ ರಾಶಿ ರಾಶಿ ಕಾಂಡೋಮ್ ಪತ್ತೆ

ಬಂಧಿತ ಆರೋಪಿ ವಿಘ್ನರಾಜ್ ತನ್ನ ಮನೆಯ ಕೋಣೆಯಲ್ಲಿ ವಿಶೇಷ ಬಲ್ಪ್​ಗಳನ್ನು ಬಳಸಿ ಕೃತಕ ಸೂರ್ಯನ ಬೆಳಕನ್ನು ಸೃಷ್ಟಿಸಿ ಗಾಂಜಾ ಬೆಳೆಯುತ್ತಿದ್ದ. ಅಂತರ್ಜಾಲದ ಮೂಲಕ ಗಾಂಜಾ ಕೃಷಿಯ ವಿವರಗಳನ್ನು ಸಂಗ್ರಹಿಸಿ ಆನ್‌ಲೈನ್‌ನಲ್ಲಿ ಬೀಜಗಳನ್ನು ಖರೀದಿಸಿದ್ದ. ಮತ್ತಿಬ್ಬರು ಆರೋಪಿಗಳಾದ ವಿನೋದ್ ಮತ್ತು ಪಾಂಡಿದೊರೈ ಅವರಿಂದ ಗಾಂಜಾ ಖರೀದಿಸುತ್ತಿದ್ದ ಎಂದು ಎಸ್ಪಿ ತಿಳಿಸಿದ್ದಾರೆ.

5,800 ಮೌಲ್ಯದ ಒಣ ಗಾಂಜಾ, 30,000 ಮೌಲ್ಯದ 1.53 ಕೆಜಿ ತೇವ ಗಾಂಜಾ, 10 ಗ್ರಾಂ ಚರಸ್, ಗಾಂಜಾ ಬೀಜಗಳು, ಗಾಂಜಾ ಎಣ್ಣೆ, ಗಾಂಜಾ ಪುಡಿ, ಎಲೆಕ್ಟ್ರಾನಿಕ್ ತೂಕದ ಯಂತ್ರ, ಎಕ್ಸಾಸ್ಟ್ ಫ್ಯಾನ್, ಆರು ಟೇಬಲ್ ಫ್ಯಾನ್‌ಗಳು, ರೋಲಿಂಗ್ ಪೇಪರ್‌ಗಳು, ಎರಡು ಸ್ಟೆಬಿಲೈಸರ್‌ಗಳು, ಎಲ್‌ಇಡಿ ಲೈಟ್‌ಗಳು ಮತ್ತು 19,000 ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್, 1985 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಿಥುನ್ ಕುಮಾರ್ ವಿವರಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ