AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ: ಡ್ರಗ್ಸ್ ಜಾಲದಲ್ಲಿ ಸಿಲುಕಿದ್ದ 42 ವಿದ್ಯಾರ್ಥಿಗಳು ಅಮಾನತು, ಮಣಿಪಾಲ್ ಹಾಸ್ಟೆಲ್​ ರೂಂನಲ್ಲಿ ರಾಶಿ ರಾಶಿ ಕಾಂಡೋಮ್ ಪತ್ತೆ

ಜುಮೋಟೋದಲ್ಲಿ ಊಟ ಆರ್ಡರ್ ಮಾಡಿದ್ರೆ ಊಟದ ಜೊತೆ ಡ್ರಗ್ಸ್ ಕೂಡ ಸಪ್ಲೈ ಆಗುತ್ತಿದೆ. ಈ ಬಗ್ಗೆ ಮಾಹಿತಿ ಬಯಲಾಗಿದ್ದು ಪೊಲೀಸರು ಓರ್ವ ಜುಮೋಟೋ ಡಿಲಿವರಿ ಬಾಯ್​ನನ್ನು ಬಂಧಿಸಿದ್ದಾರೆ.

ಉಡುಪಿ: ಡ್ರಗ್ಸ್ ಜಾಲದಲ್ಲಿ ಸಿಲುಕಿದ್ದ 42 ವಿದ್ಯಾರ್ಥಿಗಳು ಅಮಾನತು, ಮಣಿಪಾಲ್ ಹಾಸ್ಟೆಲ್​ ರೂಂನಲ್ಲಿ ರಾಶಿ ರಾಶಿ ಕಾಂಡೋಮ್ ಪತ್ತೆ
LSD
ಆಯೇಷಾ ಬಾನು
|

Updated on:Feb 24, 2023 | 9:02 AM

Share

ಉಡುಪಿ: ಶಿಕ್ಷಣ ಮತ್ತು ವೈದ್ಯಕೀಯ ವಿಚಾರದ ಹಬ್‌ ಆಗಿ ದೇಶ ವಿದೇಶದಲ್ಲಿ ಗುರುತಿಸಿಕೊಂಡಿರುವ ಮಣಿಪಾಲ್​ನಲ್ಲಿ ಸದ್ಯ ಪೊಲೀಸ್ ಇಲಾಖೆ ಡ್ರಗ್ಸ್ ವಿರುದ್ದ ಸಮರ ಸಾರಿದೆ. ಕಳೆದ ಬಾರಿ ಡ್ರಗ್ಸ್ ವಿಚಾರದಲ್ಲಿ ಸುದ್ದಿಯಾಗಿದ್ದ ಮಣಿಪಾಲದ ಪ್ರತಿಷ್ಠಿತ ಕಾಲೇಜು ಈ ಬಾರಿ ಮತ್ತೆ ಡ್ರಗ್ಸ್ ವಿಚಾರದಲ್ಲಿ 42 ವಿದ್ಯಾರ್ಥಿಗಳನ್ನು ಒಂದು ತಿಂಗಳ ಅವಧಿಗೆ ಅಮಾನತು ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದೆ. ಅಲ್ಲದೆ ಯೂನಿವರ್ಸಿಟಿಗೆ ಡ್ರಗ್ಸ್ ಬರುತ್ತಿದ್ದ ಬಗ್ಗೆ ಹಾಘೂ ಅನೇಕ ಸಂಗತಿಗಳ ಬಗ್ಗೆ ಭಯಾನಕ ಮಾಹಿತಿ ಹೊರ ಬಿದ್ದಿದೆ.

ಉಡುಪಿ ಜಿಲ್ಲೆ ರಾಜ್ಯದಲ್ಲಿ ಶೈಕ್ಷಣಿಕವಾಗಿ ಸಾಕಷ್ಟು ಮುಂದುವರಿದ ಜಿಲ್ಲೆಯಾಗಿ ರಾಜ್ಯದಲ್ಲಿಯೇ ಗುರುತಿಸಿಕೊಂಡಿರುವ ಜಿಲ್ಲೆ. ಆದರೆ ಇತ್ತೀಚೆಗೆ ವಿವಾದಗಳಿಂದ ಮತ್ತು ಡ್ರಗ್ಸ್ ವಿಚಾರದಲ್ಲಿ ಪದೇ ಪದೇ ಸುದ್ದಿಯಾಗುತ್ತಲೇ ಬಂದಿದೆ. ಅದರಲ್ಲೂ ಉಡುಪಿಯ ಮಣಿಪಾಲದ ಡ್ರಗ್ಸ್ ವಿಚಾರದಲ್ಲಿ ಶಾಕಿಂಗ್ ಸಂಗತಿಗಳು ಬಯಲಾಗುತ್ತಿವೆ. ಮಣಿಪಾಲಕ್ಕೆ ರಾಜ್ಯ, ಅಂತರಾಜ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈದ್ಯಕೀಯ ಶಿಕ್ಷಣದ ವಿಚಾರದಲ್ಲಿ ಸಾಕಷ್ಟು ಹೆಸರಿದೆ ಹಾಗಾಗಿ, ಹೊರರಾಜ್ಯ, ಹೊರ ದೇಶದಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಸದ್ಯ ಈ ಬೆಳವಣಿಗೆಯಿಂದಾಗಿ ಬಹುತೇಕ ಹೊರಗಡೆಯಿಂದ ಬಂದಂತ ವಿದ್ಯಾರ್ಥಿಗಳು ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿತ್ತಿರುವುದು ಗಮನಕ್ಕೆ ಬಂದಿದೆ. ಕಳೆದ ಬಾರಿ ಇದೇ ರೀತಿಯ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾದ ಮಣಿಪಾಲದ ಪ್ರತಿಷ್ಠಿತ ಮಾಹೆ ವಿದ್ಯಾ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿತ್ತು. ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು ಎನ್ನುವ ಇಲಾಖೆಯ ಬೇಡಿಕೆ ಹಿನ್ನಲೆಯಲ್ಲಿ ಇದೇ ರೀತಿ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾದ 42 ವಿದ್ಯಾರ್ಥಿಗಳಿಗೆ ಒಂದು ತಿಂಗಳ ಕಾಲ ಅಮಾನತು ಶಿಕ್ಷೆ ನೀಡಿದೆ.

ಯೂನಿವರ್ಸಿಟಿ ಒಳಗಿದೆ ಮಾದಕಲೋಕ

ಇನ್ನು ಇಲ್ಲಿ ಡ್ರಗ್ ಪೆಡ್ಲಿಂಗ್ ಮಾಡ್ತಾ ಇದ್ದ ಅನೇಕ ವಿದ್ಯಾರ್ಥಿಗಳನ್ನು ಅರೆಸ್ಟ್ ಮಾಡಲಾಗಿದೆ. ಹಾಘೂ MDMA, LSD, ಗಾಂಜಾ ಸೇವಿಸುತ್ತಿದ್ದ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಮೆಡಿಕಲ್, ಮ್ಯಾನೇಜ್ಮೆಂಟ್, ಹೋಟೆಲ್ ಮ್ಯಾನೆಜ್‌ಮೆಂಟ್‌, ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ತಮ್ಮ ಹಾಸ್ಟೆಲ್​ಗಳಿಗೆ ಡ್ರಗ್ಸ್ ಸಪ್ಲೇ ಮಾಡುತ್ತಿದ್ದರು.

ಇದನ್ನೂ ಓದಿ: ಉಡುಪಿ: ಮಾದಕ ಲೋಕದ ನಂಟು ಹೊಂದಿರುವ ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಮಾಹೆ ವಿವಿಗೆ ತಾಕೀತು ಮಾಡಿದ ಪೊಲೀಸ್ ಇಲಾಖೆ

ಕ್ಯಾಂಪಸ್​ಗೆ ಮಧ್ಯರಾತ್ರಿ ಬರ್ತಾ ಇತ್ತು ಡ್ರಗ್ಸ್

ಜುಮೋಟೋದಲ್ಲಿ ಊಟ ಆರ್ಡರ್ ಮಾಡಿದ್ರೆ ಊಟದ ಜೊತೆ ಡ್ರಗ್ಸ್ ಕೂಡ ಸಪ್ಲೈ ಆಗುತ್ತಿದೆ. ಈ ಬಗ್ಗೆ ಮಾಹಿತಿ ಬಯಲಾಗಿದ್ದು ಪೊಲೀಸರು ಓರ್ವ ಜುಮೋಟೋ ಡಿಲಿವರಿ ಬಾಯ್​ನನ್ನು ಬಂಧಿಸಿದ್ದಾರೆ. ರಾತ್ರಿ ವೇಳೆ 11.30 ರ ನಂತರ ಬರುವ ಊಟದ ಪಾಕೇಟ್​ನಲ್ಲಿ ಡ್ರಗ್ಸ್ ತರಿಸಲಾಗುತ್ತಿತ್ತು. ಸ್ಮಾರ್ಟ್ ವಾಚ್ ಪೌಚ್ ಬಾಕ್ಸ್ ಒಳಗೆ LSD ಪೇಪರ್, ಡ್ರಗ್ಸ್ ಸಾಗಾಟ ಮಾಡಲಾಗುತ್ತಿತ್ತು. ವಾಚ್ ಡಿಸ್ಕ್ರಿಪ್ಷನ್ ಕಟ್ ಮಾಡಿ LSD ನ್ನು ಫಿಕ್ಸ್ ಮಾಡಿ ಕಳುಹಿಸುತ್ತಿದ್ದರು ಎಂದು ಟಿವಿ9ಗೆ ಪೊಲೀಸ್ ಉನ್ನತ ಮೂಲಗಳ ಮೂಲಕ ಮಾಹಿತಿ ಸಿಕ್ಕಿದೆ.

ಮಣಿಪಾಲ್ ಹಾಸ್ಟೆಲ್​ ರೂಂನಲ್ಲಿ ರಾಶಿ ರಾಶಿ ಕಾಂಡೋಮ್

ಡ್ರಗ್ ರೈಡ್ ಮಾಡಲು ಹೋದ ಉಡುಪಿ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಏಕೆಂದರೆ ಮಣಿಪಾಲ್ ಹಾಸ್ಟೆಲ್​ನ ರೂಂಗಳಲ್ಲಿ ರಾಶಿ ರಾಶಿ ಕಾಂಡೋಮ್​ಗಳು ಪತ್ತೆಯಾಗಿವೆ. ಮತ್ತಿನ ನಶೆಯಲ್ಲಿ ವಿದ್ಯಾರ್ಥಿನಿಯರ ಜೊತೆ ಕಾಮದಾಟ ನಡೆಯುತ್ತಿದ್ದದ್ದು ಬಯಲಾಗಿದೆ. ಯುವಕ-ಯುವತಿಯರು ಒಟ್ಟಿಗೆ ಗಾಂಜಾ ಸೇದುತ್ತಿದ್ದರು. ಯುವಕರು ತಮ್ಮ ಗರ್ಲ್ ಫ್ರೆಂಡ್ಸ್​ಗಳಿಗೆ ಡ್ರಗ್ಸ್​ ತಂದುಕೊಟ್ಟು ಬಳಿಕ ಸೆಕ್ಸ್ ಗೆ ತಳ್ಳಿ ಅದನ್ನೆ ರೂಢಿಯಾಗಿಸಿಕೊಂಡಿದ್ದರು ಎಂಬ ಭಯಾನಕ ಸತ್ಯ ಬಯಲಾಗಿದೆ.

ಇನ್ನು ಮಣಿಪಾಲ್​ಗೆ ಮಂಗಳೂರು, ಕೇರಳ, ಗೋವಾದಿಂದ ಡ್ರಗ್ಸ್ ಬರ್ತಾಯಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ದಂದೆಕೋರರು ಪೆಡ್ಲರ್ ವಿದ್ಯಾರ್ಥಿಗಳಿಗೆ ಡ್ರಗ್ಸ್ ಸಪ್ಲೆ ಮಾಡುತ್ತಿದ್ದರು. ಅಲ್ಲದೆ ಕೆಲ ವಿದ್ಯಾರ್ಥಿಗಳು ಗೋವಾಕ್ಕೆ ಪ್ರತಿ ವೀಕೆಂಡ್ ಹೋಗಿ ಡ್ರಗ್ಸ್ ತರುತ್ತಿದ್ದರು.

ಸದ್ಯ ಈ ಮಾದಕ ಜಾಲದ ಸಂಬಂಧ ಮಾತನಾಡಿರುವ ಎಸ್ಪಿ ಅಕ್ಷಯ್, ಮಣಿಪಾಲದಲ್ಲಿ ಡ್ರಗ್ ಜಾಲ ಸಾಕಷ್ಟು ವ್ಯಾಪಿಸಿತ್ತು. ಡ್ರಗ್ ಮುಕ್ತ ಮಣಿಪಾಲ ಮಾಡಲು ಮಾಹೆ ಯೂನಿವರ್ಸಿಟಿ ಕೂಡ ಸಹಕಾರ ನೀಡಿದೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

Published On - 9:02 am, Fri, 24 February 23