ಶಿವಮೊಗ್ಗ: ನಗರದಲ್ಲಿ ಬಜರಂಗದಳ ಕಾರ್ಯಕರ್ತ (Bajarangdal Hindu Activist) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರಿಹಾನ್ ಷರೀಫ್, ಆಸಿಫ್ ಉಲ್ಲಾ ಖಾನ್, ನಿಹಾನ್, ಅಬ್ದುಲ್ ಅಫ್ನಾನ್ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಮಧ್ಯೆ, ಬಜರಂಗದಳ ಕಾರ್ಯಕರ್ತ, ಮೃತಪಟ್ಟಿರುವ ಹರ್ಷನ ಮೊಬೈಲ್ ಪತ್ತೆಯಾಗಿದೆ. ವಿಶೇಷ ತಂಡ ಹರ್ಷನ ಮೊಬೈಲ್ ಪತ್ತೆಹಚ್ಚಿದೆ. ಈ ಕುರಿತು ಶಿವಮೊಗ್ಗ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಹರ್ಷ ಕೊನೇ ಕ್ಷಣದಲ್ಲಿ ಮಾಡಿದ್ದ ಕರೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಹರ್ಷ ಹತ್ಯೆ (Harsha Death) ಪ್ರಕರಣದಲ್ಲಿ ಈವರೆಗೆ 8 ಆರೋಪಿಗಳ ಬಂಧನ ಮಾಡಲಾಗಿದೆ. ಮೊದಲು 6 ಆರೋಪಿಗಳು, ಈಗ ಇಬ್ಬರು ಆರೋಪಿಗಳು ಸೆರೆಯಾಗಿದ್ದಾರೆ. ಫರಾಜ್ ಪಾಷಾ (24), ಅಬ್ದುಲ್ ಖಾದರ್ ಜಿಲಾನ್ (25) ಸೆರೆ ಆಗಿದ್ದಾರೆ. ಈಗಾಗಲೇ 6 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಂದು ಬಂಧಿಸಿದ ಫರಾಜ್ ಮತ್ತು ಜಿಲಾನ್ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ನಾಳೆಯೊಳಗೆ ಆರೋಪಿಗಳನ್ನು ಪೊಲೀಸರು ಜಡ್ಜ್ ಮುಂದೆ ಹಾಜರುಪಡಿಸಲಿದ್ದಾರೆ. ಇಡೀ ದಿನ ಹರ್ಷ ಚಟುವಟಿಕೆ ಮೇಲೆ ನಿಗಾ ಇಟ್ಟಿದ್ದ ಫರಾಜ್, ಹತ್ಯೆ ನಡೆಸಲು ಸೆಕೆಂಡ್ ಹ್ಯಾಂಡ್ ಕಾರು ತಂದಿದ್ದ ಜಿಲಾನ್ ಎಂಬಾತನನ್ನು ಬಂಧಿಸಲಾಗಿದೆ.
ಹರ್ಷ ಕೊಲೆ ನಡೆಯುವ ಕೆಲ ಗಂಟೆ ಮೊದಲು ಹತ್ಯೆಗೆ ಸ್ಕೆಚ್
ನಗರದಲ್ಲಿ ಬಜರಂಗದಳ ಕಾರ್ಯಕರ್ತನ (Bajarangdal Hindu Activist) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ವಿಚಾರಗಳು ಬುಧವಾರ (ಫೆಬ್ರವರಿ 23) ಲಭ್ಯವಾಗಿದೆ. ಹರ್ಷ ಕೊಲೆ (Harsha Death) ನಡೆಯುವ ಕೆಲ ಗಂಟೆ ಮೊದಲು, ಹತ್ಯೆಗೆ ಸ್ಕೆಚ್ ಹಾಕಿದ್ದರು. ಸೆಕೆಂಡ್ ಹ್ಯಾಂಡ್ ಸ್ವಿಫ್ಟ್ ಕಾರ್ನಲ್ಲಿ ಬಂದಿದ್ದ ಹಂತಕರು ಕೊಲೆಗೆ ಸ್ಕೆಚ್ ಹಾಕಿದ್ರು ಎಂದು ಮಾಹಿತಿ ಲಭ್ಯವಾಗಿದೆ. ಕಾರಿನಲ್ಲಿದ್ದ 6 ಜನ ಒಟ್ಟಿಗೆ ಭಾರತಿ ಕಾಲೋನಿಗೆ ಎಂಟ್ರಿ ಕೊಟ್ಟಿದ್ದರು. ಕಾರು ಡೀಲರ್ ಬದ್ರುದ್ದೀನ್ ಮಗ ಜಿಲಾನ್ ಸಹ ಬಂದಿದ್ದ. ಪ್ರಮುಖ ಆರೋಪಿ ರಿಯಾನ್ ಬಾಲ್ಯ ಸ್ನೇಹಿತ ಜಿಲಾನ್ ಬಂದಿದ್ದ. ಹರ್ಷಗೂ ಜಿಲಾನ್ಗೂ ಯಾವುದೇ ರೀತಿ ವೈರತ್ವ ಇರಲಿಲ್ಲ. ಆದರೆ ರಿಯಾನ್ ಸಹಾಯಕ್ಕೆಂದು ಜಿಲಾನ್ ಬಂದಿದ್ದ ಎಂದು ತಿಳಿದುಬಂದಿದೆ.
ಹಿಂದೂ ಕಾರ್ಯಕರ್ತ ಹರ್ಷ ಕೊಲೆ ನಂತರ ಎಲ್ಲರ ಮೊಬೈಲ್ ಆಫ್ ಆಗಿತ್ತು. ಕಮ್ಯೂನಿಕೇಷನ್ಗಾಗಿ ಹಂತಕರ ಒರ್ವನ ಮೊಬೈಲ್ ಮಾತ್ರ ಆನ್ ಇತ್ತು. ಭದ್ರಾವತಿ ಮೂಲಕ ರೈಲಿನ ಮೂಲಕ ಹಂತಕರು ಪರಾರಿಯಾಗಿದ್ದರು. ರಾತ್ರಿ 10.30 ಗಂಟೆಯ ಶಿವಮೊಗ್ಗ ಟು ಬೆಂಗಳೂರು, ಶಿವಮೊಗ್ಗ ಟು ಮೈಸೂರುಗೆ ಹೊರಡುವ ರೈಲಿನ ಮೂಲಕ ಪರಾರಿ ಆಗಿದ್ದರು. ಭದ್ರಾವತಿ ರೈಲ್ವೆ ಸ್ಟೆಷನ್ವರೆಗೂ ಕಾರಿನಲ್ಲಿಯೇ ಬಂದಿದ್ದ ಹಂತಕರು ಬಳಿಕ, ಮೊದಲನೇ ಫ್ಲ್ಯಾನ್ನಂತೆ ಎಲ್ಲರೂ ಒಂದೊಂದು ಕಡೆ ಪಾರಾರಿ ಆಗಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಶಿವಮೊಗ್ಗ ಗಲಭೆ: ಮೃತ ಹರ್ಷನ ಕುಟುಂಬಕ್ಕೆ 10 ಲಕ್ಷ ರೂ ನೆರವು ಘೋಷಿಸಿದ ಸಚಿವ ಅಶ್ವತ್ಥನಾರಾಯಣ
ಇದನ್ನೂ ಓದಿ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ: ಬಂಧಿತ ಆರೋಪಿಗಳಿಗೆ ಇದೆ ಕ್ರಿಮಿನಲ್ ಹಿನ್ನೆಲೆ!
Published On - 7:37 pm, Wed, 23 February 22