ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ: ‘ಮಠದಲ್ಲಿ ಇದ್ದವರೇ ತೊಂದರೆ ಮಾಡಿದಂಗೆ ಕಾಣುತ್ತೆ’ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ

ಮಠದಲ್ಲಿ ಇದ್ದವರೇ ತೊಂದರೆ ಮಾಡಿರುವ ಹಾಗೇ ಕಾಣುತ್ತೆ. ಈ ಬಗ್ಗೆ ದೂರು ಕೊಟ್ಟಿದ್ದಾರೆ ತನಿಖೆ ನಡೆಯುತ್ತಿದೆ. ಮುರುಘಾಮಠದಲ್ಲಿನ ಓರ್ವ ಉದ್ಯೋಗಿ ಸರಿಯಿರಲಿಲ್ಲ. ಅವರೇ ಏನೋ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ: ‘ಮಠದಲ್ಲಿ ಇದ್ದವರೇ ತೊಂದರೆ ಮಾಡಿದಂಗೆ ಕಾಣುತ್ತೆ’ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ
ಸಚಿವ ಆರಗ ಜ್ಞಾನೇಂದ್ರ
Updated By: ಆಯೇಷಾ ಬಾನು

Updated on: Aug 27, 2022 | 6:00 PM

ಶಿವಮೊಗ್ಗ: ಚಿತ್ರದುರ್ಗದ ಮುರುಘಾಶ್ರೀಗಳ ವಿರುದ್ಧ ಫೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ, ಮಠದಲ್ಲಿ ಇದ್ದವರೇ ತೊಂದರೆ ಮಾಡಿದಂಗೆ ಕಾಣುತ್ತೆ. ದೂರು ಕೊಟ್ಟಿದ್ದಾರೆ ತನಿಖೆ ನಡೆಯುತ್ತಿದೆ ಎಂದು ಶಿವಮೊಗ್ಗದಲ್ಲಿ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ(Araga Jnanendra) ಪ್ರತಿಕ್ರಿಯೆ ನೀಡಿದ್ದಾರೆ.

ಮಠದಲ್ಲಿ ಇದ್ದವರೇ ತೊಂದರೆ ಮಾಡಿರುವ ಹಾಗೇ ಕಾಣುತ್ತೆ. ಈ ಬಗ್ಗೆ ದೂರು ಕೊಟ್ಟಿದ್ದಾರೆ ತನಿಖೆ ನಡೆಯುತ್ತಿದೆ. ಮುರುಘಾಮಠದಲ್ಲಿನ ಓರ್ವ ಉದ್ಯೋಗಿ ಸರಿಯಿರಲಿಲ್ಲ. ಅವರೇ ಏನೋ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದರು.

ರಾಜಕೀಯ ಕುತಂತ್ರದಿಂದ ಶ್ರೀಗಳ ವಿರುದ್ಧ ಷಡ್ಯಂತ್ರ ಮಾಡಲಾಯ್ತಾ?

ಮುರುಘಾ ಶ್ರೀಗಳ ಮೇಲಿನ ಆರೋಪಕ್ಕೆ ಜಿಲ್ಲೆಯ ಕೆಲ ದಲಿತ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ. ಶ್ರೀಗಳ ವಿಚಾರದಲ್ಲಿ ದಲಿತರನ್ನ ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯ ಕುತಂತ್ರದಿಂದ, ಅಧಿಕಾರದ ದಾಹಕ್ಕಾಗಿಯೇ ಕೆಲವರು ಹೀಗೆ ಮಾಡಿದ್ದಾರೆ ಅಂತ ಹೇಳಿದ್ದಾರೆ. ಅಂದಹಾಗೆ ಈ ಹಿಂದೆ ಮಠದ ಆಡಳಿತಾಧಿಕಾರಿ ಆಗಿದ್ದ ಎಸ್​. ಕೆ ಬಸವರಾಜನ್ 2007ರಲ್ಲಿ ಮುರುಘಾಶ್ರೀಗಳ ಜೊತೆಗಿನ ಭಿನ್ನಾಭಿಪ್ರಾಯದಿಂದ ಮಠದಿಂದ ಹೊರಬಿದ್ದಿದ್ರು. ಬಳಿಕ ಇಬ್ಬರ ನಡುವೆ ನಿರಂತರ ಸಮರ ನಡೆಯುತ್ತಲೇ ಇತ್ತು. ಕಳೆದ ಮಾರ್ಚ್ 7ರಂದು ಬಸವರಾಜನ್ ಮತ್ತೆ​ ಎಂಟ್ರಿ ಕೊಟ್ಟಿದ್ರು. ಮುರುಘಾ ಶ್ರೀಗಳೇ ಮತ್ತೆ ಬಸವರಾಜನ್ ಮಠದ ಆಡಳಿತಾಧಿಕಾರಿ ಎಂದು ಘೋಷಿಸಿದ್ರು. ಆದ್ರೆ, ಸೆಕೆಂಡ್ ಇನ್ನಿಂಗ್ಸ್ ಬಹು ದಿನಗಳ ಕಾಲ ಉಳಿಲಿಲ್ಲ. ಕಳೆದ ಒಂದು ತಿಂಗಳಿಂದ ಮತ್ತೆ ಮಠದಲ್ಲಿ ಕದನ ಶುರುವಾಗಿತ್ತು. ಈ ಮೊದಲಿನಂತೆ ಆಡಳಿತಾಧಿಕಾರಿಗೆ ಅಧಿಕಾರ ನೀಡಿಲ್ಲ. ನಾಮಕಾವಾಸ್ತೆ ಆಡಳಿತಾಧಿಕಾರಿ ಎಂಬಂತಾಗಿದೆ ಎಂಬ ಮಾತು ಕೇಳಿ ಮತ್ತೆ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಇದೇ ಬೆಳವಣಿಗೆ ಬೆನ್ನಲ್ಲೇ ಶ್ರೀಗಳ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಫೋಕ್ಸೋ ಪ್ರಕರಣ: ನಾನು ಸಮರಕ್ಕೂ ಸಿದ್ಧ, ಸಂಧಾನಕ್ಕೂ ಸಿದ್ಧ ಎಂದ ಮುರುಘಾಶ್ರೀ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:54 pm, Sat, 27 August 22