ಶಿವಮೊಗ್ಗ, ಆ.13: ಪಿಕಪ್ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ(Thirthahalli)ಯ ಅಗಸರಕೋಣೆ ಬಳಿ ನಡೆದಿದೆ. ಬೈಕ್ನಲ್ಲಿದ್ದ ಓರ್ವ ಹಾಗೂ ಪಿಕಪ್ ವಾಹನದಲ್ಲಿದ್ದ ಸೇರಿ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಗಸರಕೋಣೆ ನಿವಾಸಿ ಶರತ್ ಹಾಗೂ ಕೇರಳದ ಮೂಲದ ವ್ಯಕ್ತಿ ಮೃತ ರ್ದುದೈವಿಗಳು. ಈ ಕುರಿತು ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಸಿಂಗಾನಲ್ಲೂರಿನಲ್ಲಿ ಮಳೆಯಿಂದ ಮನೆ ಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿದ ಘಟನೆ ನಡೆದಿದೆ. ರಂಗಮ್ಮ(85) ಮೃತ ರ್ದುದೈವಿ. ಪುತ್ರಿ ಲಕ್ಷ್ಮಮ್ಮ ಹಾಗೂ ಪುತ್ರ ಪುಟ್ಟರಂಗಯ್ಯ ಅಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಮಾಜಿ ಶಾಸಕ ಆರ್.ನರೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿರಂತರ ಮಳೆಯಿಂದ ನೆನೆದಿದ್ದ ಮನೆ ಗೋಡೆ ಇದ್ದಕ್ಕಿದ್ದಂತೆ ಕುಸಿದಿದೆ.
ಇದನ್ನೂ ಓದಿ:ಹಾಲಿನ ಟ್ಯಾಂಕರ್ಗೆ ಲಾರಿ ಡಿಕ್ಕಿ, ಮಾನವೀಯತೆ ಮರೆತು ಹಾಲಿಗಾಗಿ ಸ್ವಾರ್ಥಿಯಾದ ಜನ
ಹುಬ್ಬಳ್ಳಿ: ಗಾಂಜಾ ಮಾರಾಟ ಮಾಡುತ್ತಿದ್ದ 9 ಆರೋಪಿಗಳನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಮೀರಜ್ನ ಆಶ್ಪಾಕ್, ಶಿವಕುಮಾರ್, ಇಕ್ಬಾಲ್ ಅಹ್ಮದ್, ಆರೀಫ್, ಅಭಿಷೇಕ್, ಅಮೃತ್, ಮೊಹೈದರ್ ಗೋಕಾಕ್, ಸಾದಿಕ್, ಮೆಹಬೂಬ್ ಮಕಾಂದರ್ ಬಂಧಿತರು. ಬಂಧಿತರ ಬಳಿ ಇದ್ದ 1 ಲಕ್ಷ 25 ಸಾವಿರ ಮೌಲ್ಯದ ಗಾಂಜಾ, ಮೊಬೈಲ್ ಹಾಗೂ ನಗದನ್ನು ಜಪ್ತಿ ಮಾಡಲಾಗಿದೆ. ಈ ಆರೋಪಿಗಳು ಮೀರಜ್ನಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:18 pm, Tue, 13 August 24