ಮೆದುಳು ಜ್ವರ: ಖೋ ಖೋ ಆಟದಲ್ಲಿ ಭಾರತಕ್ಕೆ ಆಡಿದ್ದ ಕರ್ನಾಟಕ ರತ್ನ ಆಟಗಾರ, ತೀರ್ಥಹಳ್ಳಿಯ ವಿನಯ್ ಇನ್ನಿಲ್ಲ

| Updated By: ವಿವೇಕ ಬಿರಾದಾರ

Updated on: Aug 08, 2022 | 10:57 PM

ತೀರ್ಥಹಳ್ಳಿಯ ಕ್ರೀಡಾ ಸಾಧಕ ಖೋ ಖೋ ಆಟಗಾರ ವಿನಯ್ (33)  ಸಾವನ್ನಪ್ಪಿದ್ದಾರೆ.

ಮೆದುಳು ಜ್ವರ: ಖೋ ಖೋ ಆಟದಲ್ಲಿ ಭಾರತಕ್ಕೆ ಆಡಿದ್ದ ಕರ್ನಾಟಕ ರತ್ನ ಆಟಗಾರ, ತೀರ್ಥಹಳ್ಳಿಯ ವಿನಯ್  ಇನ್ನಿಲ್ಲ
ಕರ್ನಾಟಕ ರತ್ನ ಖೋ ಖೋ ಆಟಗಾರ ವಿನಯ
Follow us on

ಶಿವಮೊಗ್ಗ: ತೀರ್ಥಹಳ್ಳಿಯ ಕ್ರೀಡಾ ಸಾಧಕ ಖೋ ಖೋ (Kho Kho) ಆಟಗಾರ ವಿನಯ್ (Vinay) (33)  ಸಾವನ್ನಪ್ಪಿದ್ದಾರೆ. ಮೆದುಳು ಜ್ವರದಿಂದ ಬಳಲುತ್ತಿದ್ದ ವಿನಯ್ ಮಣಿಪಾಲದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮರಣಹೊಂದಿದ್ದಾರೆ. ಇವರು ಖೋ ಖೋ ಆಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ವಿನಯ್ ಕಳೆದ 7 ದಿನದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು.  ಚಿಕಿತ್ಸೆಗೆಂದು ಉಡುಪಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು (ಆಗಸ್ಟ್ 8) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ವಿದ್ಯಾರ್ಥಿಯಾಗಿದ್ದಾಗಲೇ ಖೋ ಖೋ ಕ್ರೀಡಾಪಟುವಾಗಿದ್ದ ವಿನಯ್, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟವನ್ನು ಖೋ ಖೋ ಕ್ರೀಡೆಯಲ್ಲಿ ಪ್ರತಿನಿಧಿಸಿ ತೀರ್ಥಹಳ್ಳಿಗೆ ಕೀರ್ತಿ ತಂದಿದ್ದರು. ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ವಿನಯ್ ಕರೋನಾ ಬಳಿಕ ತೀರ್ಥಹಳ್ಳಿಗೆ ವಾಪಸ್ ಆಗಿದ್ದರು. ತೀರ್ಥಹಳ್ಳಿಯ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಹಾಗೂ ಕರ್ನಾಟಕ ಪ್ರತಿನಿಧಿಸಿ ಎರಡು ಬಾರಿ ರನ್ನರ್​ಅಪ್​ ಆಗಿದ್ದರು.

ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು. ತೀರ್ಥಹಳ್ಳಿ ತಾಲೂಕಲ್ಲಿ ನೀರವ ಮೌನ ಆವರಿಸಿದೆ

Published On - 10:34 pm, Mon, 8 August 22