ಎಲೆಕ್ಟ್ರಿಕ್ ಬೈಕ್ ಡೆಲಿವರಿ ಮಾಡುವುದಾಗಿ ನಂಬಿಸಿ ಮೋಸ; ಅಪರಿಚಿತನಿಂದ ಖಾಸಗಿ ಏಜೆನ್ಸಿಗೆ 7.17 ಲಕ್ಷ ರೂ. ವಂಚನೆ

| Updated By: preethi shettigar

Updated on: Dec 12, 2021 | 11:13 AM

ಶಿವಮೊಗ್ಗದ ಖಾಸಗಿ ಏಜೆನ್ಸಿ ವ್ಯವಸ್ಥಾಪಕರಿಗೆ ಎಲೆಕ್ಟ್ರಿಕ್ ಬೈಕ್ ಡೆಲಿವರಿ ಮಾಡುವುದಾಗಿ ನಂಬಿಸಿದ್ದು, ಅಪರಿಚಿತನ ಬ್ಯಾಂಕ್ ಖಾತೆಗೆ ಆರ್​ಟಿಜಿಎಸ್​ ಮೂಲಕ 7.17 ಲಕ್ಷ ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಹಣ ಪಡೆದು ಎಲೆಕ್ಟ್ರಿಕ್ ಬೈಕ್‌ ಡೆಲಿವರಿ ಮಾಡದ ಹಿನ್ನೆಲೆ ಖಾಸಗಿ ಏಜೆನ್ಸಿ ವ್ಯವಸ್ಥಾಪಕರು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಎಲೆಕ್ಟ್ರಿಕ್ ಬೈಕ್ ಡೆಲಿವರಿ ಮಾಡುವುದಾಗಿ ನಂಬಿಸಿ ಮೋಸ; ಅಪರಿಚಿತನಿಂದ ಖಾಸಗಿ ಏಜೆನ್ಸಿಗೆ 7.17 ಲಕ್ಷ ರೂ. ವಂಚನೆ
ಎಲೆಕ್ಟ್ರಿಕ್ ಬೈಕ್ (ಸಂಗ್ರಹ ಚಿತ್ರ)
Follow us on

ಶಿವಮೊಗ್ಗ: ಎಲೆಕ್ಟ್ರಿಕ್ ಬೈಕ್ ಡೆಲಿವರಿ ಮಾಡುವುದಾಗಿ ನಂಬಿಸಿ, ಖಾಸಗಿ ಏಜೆನ್ಸಿಗೆ 7.17 ಲಕ್ಷ ರೂಪಾಯಿ ವಂಚನೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ರೆನಾಲ್ಡ್ ಸಂಸ್ಥೆಯವನೆಂದು ದೂರವಾಣಿ ಕರೆ ಮಾಡಿ ಅಪರಿಚಿತ ವ್ಯಕ್ತಿಯೊರ್ವ ವಂಚನೆ ಮಾಡಿದ್ದಾನೆ. ಶಿವಮೊಗ್ಗದ ಖಾಸಗಿ ಏಜೆನ್ಸಿ ವ್ಯವಸ್ಥಾಪಕರಿಗೆ ಎಲೆಕ್ಟ್ರಿಕ್ ಬೈಕ್ ಡೆಲಿವರಿ ಮಾಡುವುದಾಗಿ ನಂಬಿಸಿದ್ದು, ಅಪರಿಚಿತನ ಬ್ಯಾಂಕ್ ಖಾತೆಗೆ ಆರ್​ಟಿಜಿಎಸ್​ ಮೂಲಕ 7.17 ಲಕ್ಷ ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಹಣ ಪಡೆದು ಎಲೆಕ್ಟ್ರಿಕ್ ಬೈಕ್‌ ಡೆಲಿವರಿ ಮಾಡದ ಹಿನ್ನೆಲೆ ಖಾಸಗಿ ಏಜೆನ್ಸಿ ವ್ಯವಸ್ಥಾಪಕರು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯಪುರ: ಮನೆ ವಿದ್ಯುತ್ ಸಂಪರ್ಕ ಕಟ್ ಮಾಡಿದ್ದಕ್ಕೆ ಸಿಬ್ಬಂದಿ ಮೇಲೆ ಹಲ್ಲೆ
ವಿದ್ಯುತ್ ಬಿಲ್​ ಪಾವತಿಸದ ಕಾರಣ ಮನೆಯ ವಿದ್ಯುತ್ ಸಂಪರ್ಕ ಕಟ್ ಮಾಡಿದ್ದಕ್ಕೆ ಕೊಡಲಿಯಿಂದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಘಟನೆ ವಿಜಯಪುರ ನಗರದ ಗ್ಯಾಂಗ್ ಬಾವಡಿ ಪ್ರದೇಶದಲ್ಲಿ ನಡೆದಿದೆ. ಹೆಸ್ಕಾಂ ಸಿಬ್ಬಂದಿ ಬಾಳಪ್ಪ ಮಲ್ಲಪ್ಪ ಬೊಮ್ಮಣಗಿ ಮೇಲೆ ಹಲ್ಲೆ ಮಾಡಲಾಗಿದೆ. ಮೊಹಮ್ಮದ್ ರಫೀಕ್ ಬಡೇಕಾರ (31) ವಿರುದ್ಧ ಹಲ್ಲೆಗೈದ ಆರೋಪ ಮಾಡಲಾಗಿದ್ದು, ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಆಟೋ ಚಾಲಕನಿಗೆ ಚಾಕುವಿನಿಂದ ಇರಿದಿದ್ದ ನಾಲ್ವರ ಸೆರೆ
ನವೆಂಬರ್​ 17 ರಂದು ಆಟೋ ಚಾಲಕ ಶಿವಕುಮಾರ್​ಗೆ ಚಾಕು ಇರಿದಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಲಗ್ಗೆರೆಗೆ ಹೋಗಬೇಕು ಎಂದು ನಾಲ್ವರು ಆಟೋ ಹತ್ತಿದ್ದರು. ಬಳಿಕ ಚಾಲಕನಿಗೆ ಚಾಕು ಇರಿದು 2 ಮೊಬೈಲ್ ಮತ್ತು ಹಣ ದರೋಡೆ ಮಾಡಿ ಪರಾರಿಯಾಗಿದ್ದರು. ಕಿರುಚಾಡಿದ್ದ ಚಾಲಕನನ್ನು ಹೊರತಳ್ಳಿ ಆಟೋ ಸಮೇತ ಪರಾರಿಯಾಗಿದ್ದರು. ಸದ್ಯ ಆರೋಪಿಗಳಾದ ನಾಗೇಂದ್ರ, ದೊಡ್ಡವೀರೇಗೌಡ, ದರ್ಶನ್, ಶಿವಕುಮಾರನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ:
ಉದ್ಯಮಿ ಗಾಂಧಿಗೆ ವಂಚನೆ: 100 ಕೋಟಿ ಸಾಲದ ಆಸೆ ತೋರಿಸಿ 1.80 ಕೋಟಿ ರೂ ಎಗರಿಸಿ, ಪರಾರಿ!

ಹಣ ದ್ವಿಗುಣಗೊಳಿಸಿ ಕೊಡುವುದಾಗಿ ವಂಚನೆ! ಚಿತ್ರದುರ್ಗ ನಗರಸಭೆ ಸದಸ್ಯನ ವಿರುದ್ಧ ಎಫ್ಐಆರ್ ದಾಖಲು

Published On - 10:58 am, Sun, 12 December 21