ಹೆತ್ತವರಿಗೆ ಪಾದಪೂಜೆ: ನೂರಾರು ಶಾಲಾ ಮಕ್ಕಳಿಗೆ ಸಂಸ್ಕಾರದ ಪಾಠ, ಎಲ್ಲಿ?

| Updated By: ಸಾಧು ಶ್ರೀನಾಥ್​

Updated on: Jan 02, 2024 | 12:02 PM

ಹೆತ್ತವರಿಗೆ ಪಾದಪೂಜೆ ಎಂಬ ಸಂಸ್ಕಾರವು ಮಕ್ಕಳ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ತಂದೆ ತಾಯಿ ಅಂದ್ರೆ ಅಸಡ್ಡೆ ತೋರುವ ಮಕ್ಕಳಿಗೆ ಹೆತ್ತವರ ಪಾದಪೂಜೆ ಬಳಿಕ ಸಾಕಷ್ಟು ಮನಪರಿವರ್ತನೆ ಆಗಿದೆ. ನಾನಾ ಕಾಲಘಟ್ಟದಲ್ಲಿ ಪೋಷಕರಿಗೆ ತಲೆನೋವಾಗಿದ್ದ ಮಕ್ಕಳು ಈಗ ಬದಲಾಗಿದ್ದಾರೆ. ತಂದೆ ತಾಯಿ ಅಂದರೆ ಅವರೇ ನಮ್ಮ ದೇವರು ಎನ್ನುವ ಮಟ್ಟಿಗೆ ಅವರಲ್ಲಿ ಸಂಸ್ಕಾರ ಬಂದಿದೆ.

ಹೆತ್ತವರಿಗೆ ಪಾದಪೂಜೆ: ನೂರಾರು ಶಾಲಾ ಮಕ್ಕಳಿಗೆ ಸಂಸ್ಕಾರದ ಪಾಠ, ಎಲ್ಲಿ?
ಹೆತ್ತವರಿಗೆ ಪಾದಪೂಜೆ: ನೂರಾರು ಶಾಲಾ ಮಕ್ಕಳಿಗೆ ಸಂಸ್ಕಾರದ ಪಾಠ
Follow us on

ಇಂದಿನ ಹೈಟೆಕ್ ಕಾಲದಲ್ಲಿ ಸಂಬಂಧಗಳು ಕಡಿದು ಹೋಗುತ್ತಿವೆ. ತಂದೆ ತಾಯಿ ಬಗ್ಗೆ ಇರುವ ಗೌರವ ಪ್ರೀತಿ ವಿಶ್ವಾಸಗಳು ಮಕ್ಕಳಿಂದ ದೂರವಾಗುತ್ತಿವೆ. ಶಾಲಾ ದಿನಗಳಲ್ಲೇ ಮಕ್ಕಳಿಗೆ ತಂದೆ ತಾಯಿ ( parents) ಮಹತ್ವ ಮತ್ತು ಅವರಿಂದಲೇ ಮಕ್ಕಳ ಜಗತ್ತು ಎನ್ನುವ ಅರಿವು ಮೂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ 700ಕ್ಕೂ ಅಧಿಕ ಮಕ್ಕಳು ಏಕಕಾಲದಲ್ಲಿ ಜನ್ಮದಾತರಿಗೆ ಪಾದಪೂಜೆ (Pada Pooja) ಮಾಡಿದರು. ಮಾತೃ ದೇವೋ ಭವ.. ಪಿತೃ ದೇವೋ ಭವ ಎಂಬ ಮಕ್ಕಳ ಮಂತ್ರ ಕುರಿತು ಒಂದು ವರದಿ ಇಲ್ಲಿದೆ. ಶಿವಮೊಗ್ಗ ತಾಲೂಕಿನ ಅನುಪಿನಕಟ್ಟೆ ಗ್ರಾಮದಲ್ಲಿರುವ (Sri Ramakrishna Residential School in Anupinakatte village of Shivamogga taluk) ಶ್ರೀ ರಾಮಕೃಷ್ಣ ವಸತಿ ಶಾಲೆ. ಈ ಶಾಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಮಕ್ಕಳು (school children) ಹೆಚ್ಚು ವ್ಯಾಸಾಂಗ ಮಾಡುತ್ತಾರೆ. ಮನೆಯಲ್ಲಿ ತಂದೆ ತಾಯಿ ಜೊತೆ ಇದ್ದು ಮಕ್ಕಳು ವಿದ್ಯಾಭ್ಯಾಸ ಮತ್ತು ಸಂಸ್ಕಾರದಲ್ಲಿ ಹಿಂದೆ ಇದ್ದರು. ಈ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳನ್ನು ಶ್ರೀ ರಾಮಕೃಷ್ಣ ವಸತಿ ಶಾಲೆಗೆ ಸೇರಿಸಿದ್ದಾರೆ. ಈ ವಸತಿ ಶಾಲೆಯಲ್ಲಿ ಶಿಸ್ತು ಮತ್ತು ಶ್ರದ್ಧೆ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಬೇಕು. ಅದಕ್ಕೆ ವರ್ಷಪೂರ್ತಿ ಮಕ್ಕಳಿಗೆ ಗುರುಕುಲ ಮಾದರಿಯ ಶಿಕ್ಷಣ ನೀಡುತ್ತಾರೆ.

ಈ ಗುರುಕುಲ ಶಿಕ್ಷಣದಲ್ಲಿ ಪ್ರಮುಖ ಭಾಗ ಅಂದ್ರೆ ಸಂಸ್ಕಾರ. ತಂದೆ ತಾಯಿ ಅಂದ್ರೆ ಇತ್ತೀಚಿನ ಮಕ್ಕಳಿಗೆ ಗೌರವ ಪ್ರೀತಿ ವಿಶ್ವಾಸ ಕಡಿಮೆ ಆಗಿದೆ. ಈ ಹಿನ್ನೆಲೆಯಲ್ಲಿ ಕಳೆದ 17 ವರ್ಷಗಳಿಂದ ಈ ಶಾಲೆಯಲ್ಲಿ ಹೊಸ ವರ್ಷದ ಮೊದಲ ದಿನದಂದು ತಂದೆ ತಾಯಿಗಳಿಗೆ ಮಕ್ಕಳಿಂದ ಪಾದಪೂಜೆ. ಹಾಗಾಗಿ ನಿನ್ನೆ ಸೋಮವಾರ ಬೆಳಗ್ಗೆ ಗುರುಕುಲ ಶಾಲೆಯಲ್ಲಿ ಹಬ್ಬದ ವಾತಾವರಣವಿತ್ತು. ವೇದಿಕೆ ಮೇಲೆ ಮಠಾಧೀಶರು ಮತ್ತು ಶಿಕ್ಷಕರು ಹಾಜರಿದ್ದರು.

ಪುರೋಹಿತರು ಮಕ್ಕಳಿಗೆ ಹೆತ್ತವರ ಪಾದಪೂಜೆ ವಿಧಾನವನ್ನು ಮೈಕ್ ನಲ್ಲಿ ಹೇಳುತ್ತಿದ್ದರು. ಪುರೋಹಿತರ ಸೂಚನೆಯಂತೆ ಹೆತ್ತವರ ಪಾದಗಳ ತೊಳೆದು ಬಳಿಕ ವಿಭೂತಿ, ಕುಂಕುಮ, ಅರಿಶಿನ, ಹೂವು ಇಟ್ಟು ಮಕ್ಕಳು ಪೂಜೆ ಸಲ್ಲಿಸಿದರು. ಊದಿನ ಕಡ್ಡಿಯಿಂದ ಪಾದಕ್ಕೆ ಪೂಜೆ. ಬಾಳೆಹಣ್ಣಿನಿಂದ ನೈವೇದ್ಯ ಮಾಡಿದರು. ಹೀಗೆ ಪಾದ ಪೂಜೆ ಮಾಡಿದ ಮಕ್ಕಳಿಗೆ ಅಕ್ಷತೆ ಹಾಕಿ ಪೋಷಕರು ಆಶೀರ್ವಾದ ಮಾಡಿದರು. ಎಲ್ಲ ಮಕ್ಕಳು ಹೆತ್ತವರ ಕಾಲಿಗೆ ಬಿದ್ದು ನಮಸ್ಕರಿಸಿದರು. ಬಳಿಕ ಎಲ್ಲ ಮಕ್ಕಳು ಸಾಮೂಹಿಕವಾಗಿ ಪ್ರಾರ್ಥನೆ ಮಾಡಿದರು. ಪಾದಪೂಜೆಗೆ ಸಾಕ್ಷಿಯಾಗಿದ್ದ ತಂದೆ-ತಾಯಿ ಮತ್ತು ಮಕ್ಕಳು ಪಾದಪೂಜೆಯ ವಿಶೇಷತೆ ಕುರಿತು ಸಂತಸ ವ್ಯಕ್ತಪಡಿಸಿದರು.

ರಾಮಕೃಷ್ಣ ಗುರುಕುಲ ವಸತಿ ಶಾಲೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಉತ್ತಮ ಶಿಕ್ಷಣಕ್ಕಾಗಿ ಈ ವಸತಿ ಶಾಲೆಗೆ ಸೇರಿಸಿದ್ದಾರೆ. ಈ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಕ್ಕಳು ಈಗ ದೊಡ್ಡ ದೊಡ್ಡ ಸ್ಥಾನಮಾನದಲ್ಲಿದ್ದಾರೆ. ವೈದ್ಯರು, ಎಂಜಿನಿಯರ್, ಉದ್ಯಮಿಗಳು, ಶಿಕ್ಷಕರು, ಸರಕಾರಿ ಅಧಿಕಾರಿಗಳು ಹೀಗೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಪಾದಪೂಜೆ ಎಂಬ ಸಂಸ್ಕಾರವು ಮಕ್ಕಳ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ತಂದೆ ತಾಯಿ ಅಂದ್ರೆ ಅಸಡ್ಡೆ ತೋರುವ ಮಕ್ಕಳಿಗೆ ಹೆತ್ತವರ ಪಾದಪೂಜೆ ಬಳಿಕ ಸಾಕಷ್ಟು ಮನಪರಿವರ್ತನೆ ಆಗಿದೆ. ನಾನಾ ಕಾಲಘಟ್ಟದಲ್ಲಿ ಪೋಷಕರಿಗೆ ತಲೆನೋವು ಆಗಿದ್ದ ಮಕ್ಕಳು ಈಗ ಬದಲಾಗಿದ್ದಾರೆ. ತಂದೆ ತಾಯಿ ಅಂದರೆ ಅವರೇ ನಮ್ಮ ದೇವರು ಎನ್ನುವ ಮಟ್ಟಿಗೆ ಅವರಲ್ಲಿ ಸಂಸ್ಕಾರ ಬಂದಿದೆ. ಗುರುಕುಲದಲ್ಲಿ ನಿತ್ಯ ವಿದ್ಯಾಭ್ಯಾಸಕ್ಕಾಗಿ ಕಠಿಣ ಪರಿಶ್ರಮ. ಇದರ ಜೊತೆಗೆ ಸಂಸ್ಕಾರದ ನೀತಿ ಪಾಠಗಳಿರುತ್ತವೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಪೋಷಕರಿಗೆ ಖುಷಿಯಾಗುತ್ತಿದೆ.

Also Read: ನಮ್ಮದು ಜಕಣಾಚಾರಿ ನಾಡು, ಆದರೆ ಇಲ್ಲಿನ ನೂರಾರು ಜಕಣಾಚಾರಿಗಳು ಹೊಟ್ಟೆಗೆ ಬಟ್ಟೆಗೆ ಪರದಾಡುತ್ತಿದ್ದಾರೆ! ಸರ್ಕಾರ ಇತ್ತ ಗಮನ ಹರಿಸಬೇಕಿದೆ

ಆರಂಭದಲ್ಲೇ ಮಕ್ಕಳಲ್ಲಿ ಒಂದಿಷ್ಟು ಸಂಸ್ಕಾರಗಳನ್ನು ನೀಡಬೇಕು. ಇಲ್ಲದಿದ್ದರೇ ಮಕ್ಕಳು ಹೆತ್ತವರು ಎಂಬ ಮಮಕಾರವನ್ನು ಮರೆತು ಅವರಿಗೆ ಗೌರವ ನೀಡುವುದಿಲ್ಲ. ಇದರಿಂದ ಹೆತ್ತವರಿಗೆ ಕಣ್ಣಿನಲ್ಲಿ ನಿತ್ಯ ಕಣ್ಣೀರು ಮತ್ತು ನೋವು ತುಂಬಿಕೊಂಡಿರುತ್ತದೆ. ಈ ಎಲ್ಲ ಸಮಸ್ಯೆಗಳಿಗೆ ಗುರುಕುಲ ಮಾದರಿ ಶಿಕ್ಷಣದಲ್ಲಿ ಪೋಷಕರಿಗೆ ಪರಿಹಾರ ಸಿಕ್ಕಿದೆ. ಯಾವುದೇ ದುಂದು ವೆಚ್ಚವಿಲ್ಲದೇ ಸರಳ ಮತ್ತು ಸುಲಭ ಶಿಕ್ಷಣವನ್ನು ಗುರುಕುಲ ವಿದ್ಯಾಸಂಸ್ಥೆಯು ನೀಡುತ್ತಿದೆ ಎನ್ನುತ್ತಾರೆ ಶೋಭಾ ವೆಂಕಟರಮಣ, ಶಾಲಾ ಮುಖ್ಯಸ್ಥರು.

ಹೈಟೆಕ್ ಯುಗದಲ್ಲಿ ಮಕ್ಕಳು ದೊಡ್ಡವರಾಗುತ್ತಿದ್ದಂತೆ ತಮ್ಮದೇ ಲೋಕ. ಹೆತ್ತವರ ಮತ್ತು ಶಿಕ್ಷಣದ ಬಗ್ಗೆ ಅಗೌರವ. ಇಂತಹ ಮಕ್ಕಳಿಗೆ ತಿದ್ದಿ ಬುದ್ದಿ ಹೇಳಿ ಸರಿ ದಾರಿಗೆ ತರುವುದಕ್ಕೆ ಮಕ್ಕಳಿಂದ ಹೆತ್ತವರ ಪಾದಪೂಜೆ ಮಾಡಿಸಲಾಗುತ್ತಿದೆ. ಈ ಪಾದಪೂಜೆಯು ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಿದ ಸಾವಿರಾರು ಮಕ್ಕಳಲ್ಲಿ ಪರಿಣಾಮ ಬೀರಿರುವುದು ವಿಶೇಷವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ