ಮುರುಘಾಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣ: ಮುರಘಾಶ್ರೀಗಳ ಬಂಧನವಾಗಿಲ್ಲ – ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ

| Updated By: ವಿವೇಕ ಬಿರಾದಾರ

Updated on: Aug 29, 2022 | 3:20 PM

ಪ್ರಕರಣದಲ್ಲಿ ಮುರಘಾಶ್ರೀಗಳ ಬಂಧನವಾಗಿಲ್ಲ, ಶ್ರೀಗಳು ಕಾನೂನು ಸಲಹೆ ಪಡೆಯಲು ಹೋಗಿದ್ದರು ಎಂದು ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಮುರುಘಾಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣ: ಮುರಘಾಶ್ರೀಗಳ ಬಂಧನವಾಗಿಲ್ಲ - ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ
ಗೃಹ ಸಚಿವ ಆರಗ ಜ್ಞಾನೇಂದ್ರ
Follow us on

ಶಿವಮೊಗ್ಗ: ಪ್ರಕರಣದಲ್ಲಿ ಮುರಘಾಶ್ರೀಗಳ ಬಂಧನವಾಗಿಲ್ಲ, ಶ್ರೀಗಳು ಕಾನೂನು ಸಲಹೆ ಪಡೆಯಲು ಹೋಗಿದ್ದರು ಎಂದು ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ. ಚಿತ್ರದುರ್ಗ ಮುರುಘಾ ಮಠದ (Murugha Mutt) ಶ್ರೀ ಶಿವಮೂರ್ತಿ ಸ್ವಾಮೀಜಿ (Shivamurthy Swamiji) ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ ಚಿತ್ರದುರ್ಗದ ಮುರುಘಾಮಠಕ್ಕೆ ಶ್ರೀಗಳು ವಾಪಸ್ ಬಂದಿದ್ದಾರೆ. ಮುರುಘಾಮಠದ ಸ್ವಾಮೀಜಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದರು.

ನ್ಯಾಯಾಲಯ ವಿಚಾರವಾಗಿ ಚರ್ಚಿಸಲು ಸ್ವಾಮೀಜಿ ಬೆಳಗಾವಿಗೆ ಹೊರಟಿದ್ದರು: ಸಂಸದ ಬಿ ವೈ ರಾಘವೇಂದ್ರ

ಈ ವಿಚಾರವಾಗಿ ಶಿವಮೊಗ್ಗದಲ್ಲಿ ಸಂಸದ ಬಿ ವೈ ರಾಘವೇಂದ್ರ ಮತನಾಡಿ ನ್ಯಾಯಾಲಯ ವಿಚಾರವಾಗಿ ಚರ್ಚಿಸಲು ಸ್ವಾಮೀಜಿ ಬೆಳಗಾವಿಗೆ ಹೊರಟಿದ್ದರು. ಈಗ ಅವರು ವಾಪಸ್ ಅಲ್ಲಿಂದ ಬಂದಿದ್ದಾರೆ ಎಂದು ಹೇಳಿದರು. ಅವರ ಬಂಧನದ ಕುರಿತು ಮಾಧ್ಯಮಗಳಲ್ಲಿ ಕಪೋಕಲ್ಪಿತ ಸುದ್ದಿಗಳು ಬರುತ್ತಿವೆ.

ಗೃಹ ಸಚಿವರ ಜೊತೆ ಈಗ ತಾನೆ ಚರ್ಚೆ ಮಾಡಿ ಬಂದಿರುವೆ. ಮುರುಘಾಮಠದ ಶ್ರೀಗಳ ಬಂಧನವಾಗಿಲ್ಲ. ಅದು ನೂರಕ್ಕೆ ನೂರು ಸುಳ್ಳಾಗಿದೆ. ಕೋರ್ಟ್​ಗಳ ಪ್ರಕ್ರಿಯೆಗಳು ನಡೆಯುತ್ತವೆ. ಈ ಎಲ್ಲ ಬೆಳವಣಿಗೆಯಿಂದ ಮನಸ್ಸಿಗೆ ನೋವು ಆಗಿದೆ ಎಂದರು.

ತುಂಬಾ ಒಳ್ಳೆಯವರಿಗೆ ಈ ರೀತಿ ಆಗುವುದು ಸ್ವಾಭಾವಿಕ : ಸಚಿವ ವಿ ಸೋಮಣ್ಣ

ಬೆಂಗಳೂರು: ತುಂಬಾ ಒಳ್ಳೆಯವರಿಗೆ ಈ ರೀತಿ ಆಗುವುದು ಸ್ವಾಭಾವಿಕ. ಮಠಕ್ಕೆ ಉತ್ತರಾಧಿಕಾರಿಯಾಗುವ ಮೊದಲೇ ಅವರು ನನಗೆ ಗೊತ್ತಿದೆ ಎಂದು ಮುರುಘಾಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್ ವಿಚಾರವಾಗಿ ವಿಧಾನಸೌಧದಲ್ಲಿ ವಸತಿ ಸಚಿವ ವಿ ಸೋಮಣ್ಣ ಮಾತನಾಡಿದ್ದಾರೆ.

ಎಲ್ಲವೂ ನನಗೆ ಗೊತ್ತಿದೆ. ಪೊಲೀಸರು ಜಾಗರೂಕತೆಯಿಂದ ತನಿಖೆ ಮಾಡುತ್ತಿದ್ದಾರೆ. ನಾವು ಈಗ ಮಧ್ಯಪ್ರವೇಶ ಮಾಡುವುದು ಒಳ್ಳೆಯದಲ್ಲ. ಯಾವುದು ಏನು ಅನ್ನೋದು ಸತ್ಯ ಹೊರಗೆ ಬರುತ್ತದೆ. ನನಗೆ ತಿಳಿದಂತೆ ಸ್ವಾಮೀಜಿ ಇದರಿಂದ ಹೊರಗೆ ಬರುತ್ತಾರೆ ಎಂದರು.

ಈ ರೀತಿ ಆಗಬಾರದಿತ್ತು. ಸತ್ಯ ಹೊರಗೆ ಬರಲು ನಾವೆಲ್ಲಾ ಜವಾಬ್ದಾರಿ ಸ್ಥಾನದಲ್ಲಿರುವವರು ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಬೇಕಾಗಿದೆ. 800 ವರ್ಷಕ್ಕೂ ಮೇಲ್ಪಟ್ಟು ಮಠಕ್ಕೆ ಇತಿಹಾಸ ಇದೆ. ಚುನಾವಣೆಗೂ ಇದಕ್ಕೂ ಸಂಬಂಧ ಇಲ್ಲ. ಕಾನೂನು ಎಲ್ಲರಿಗೂ ಒಂದೇ. ಯಾರ್ಯಾರು ಎಷ್ಟೆಷ್ಟು ಷಡ್ಯಂತ್ರ ಕೆಲವೇ ದಿನಗಳಲ್ಲಿ ತಿಳಿಯುತ್ತದೆ ಎಂದು ಹೇಳಿದರು.

ಪಠ್ಯ ಪುಸ್ತಕದಲ್ಲಿ ಸಾವರ್ಕರ್ ಬುಲ್ ಬುಲ್ ಪಕ್ಷಿ ಉಲ್ಲೇಖ ವಿಚಾರವಾಗಿ ಮಾತನಾಡಿದ ಅವರು ಆ ಬಗ್ಗೆ ಇನ್ನೂ ನನಗೆ ಏನೂ ಗೊತ್ತಿಲ್ಲ. ಗೊತ್ತಾದ ಮೇಲೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಪ್ರಕರಣದಲ್ಲಿ ಮುರಘಾಶ್ರೀಗಳ ಬಂಧನವಾಗಿಲ್ಲ, ಶ್ರೀಗಳು ಕಾನೂನು ಸಲಹೆ ಪಡೆಯಲು ಹೋಗಿದ್ದರು ಎಂದು ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ