ಶಿವಮೊಗ್ಗ, ಅಕ್ಟೋಬರ್ 20: ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಪರಿಚಯವಾಗಿದೆ. ಯುವತಿಯ ಶಿವಮೊಗ್ಗದ ಮತ್ತು ಯುವಕ ಬೆಂಗಳೂರಿನ ಯುವಕನ ಜೊತೆ ಲವ್ ಆಗಿದೆ. ಯುವಕನು ಪೊಲೀಸ್ ಕಾನ್ಸಟೇಬಲ್ (Police Constable) ಯುವತಿಯು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳು. ಈ ಇಬ್ಬರು ಲವ್ ಮಾಡಿ ಬಳಿಕ ಅರೇಂಜ್ ಮ್ಯಾರೇಜ್ ಆಗುತ್ತಾರೆ. ಶಿಕ್ಷಕಿ ಮತ್ತು ಪೊಲೀಸ್ ಇಬ್ಬರು ಲವ್ ಮ್ಯಾರೇಜ್ ಕೇವಲ 7 ತಿಂಗಳಿಗೆ ಮುರಿದು ಬಿದ್ದಿದೆ. ಪ್ರೀತಿಸಿದ ಯುವತಿಗೆ ಕೈಕೊಟ್ಟು ಪೊಲೀಸ್ ಈಗ ಮತ್ತೊಂದು ಮದುವೆಯಾಗಿದ್ದಾನೆ.
ಸಾಗರ ನಗರದ ವಿಜಯನಗರದಲ್ಲಿ ವಾಸವಿರುವ ರಂಜಿತಾ ಆರ್. (29) ಮತ್ತು ಬಳ್ಳಾರಿಯ ಹಗರಿಬೊಮ್ಮನಹಳ್ಳಿ ಗ್ರಾಮದ ಸಂತೋಷ್ ಎಚ್ (30) 2019ರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಇಬ್ಬರ ನಡುವೆ ಲವ್ ಶುರುವಾಗಿದೆ. 2020 ರಲ್ಲಿ ಹಿರಿಯ ಸಮ್ಮುಖದಲ್ಲಿ ಹಗರಿಬೊಮ್ಮನಹಳ್ಳಿಯಲ್ಲಿ ಅರೇಂಜ್ ಮ್ಯಾರೇಜ್ ಆಗಿದೆ. ಸಂತೋಷ ಬೆಂಗಳೂರಿನ ಸಶಸ್ತ್ರ ಮೀಸಲು ಪಡೆಯಲ್ಲಿ ಪೊಲೀಸ್ ಕಾನ್ಸಟೇಬಲ್ ಆಗಿದ್ದನು.
ಮದುವೆಯಾದ ಬಳಿಕ ಇಬ್ಬರು ಬೆಂಗಳೂರಿನಲ್ಲಿ ಆರು ತಿಂಗಳು ಸಂಸಾರ ಮಾಡುತ್ತಾರೆ. ಈ ನಡುವೆ ಪತಿಯು ಪದೇ ಪದೇ ಪತ್ನಿಗೆ ಹಣಕ್ಕಾಗಿ ಪೀಡಿಸುತ್ತಿದ್ದನಂತೆ. ಬೆಂಗಳೂರಿನಿಂದ ತುಮಕೂರಿಗೆ ಸಿವಿಲ್ ಪೊಲೀಸ್ ಆಗಿ ಸಂತೋಷ ವರ್ಗಾವಣೆಗೊಳ್ಳುತ್ತಾನೆ. ತುಮಕೂರಿಗೆ ಬಂದು ಕೇವಲ ಒಂದು ತಿಂಗಳು ಆಗಿತ್ತು. ಈ ನಡುವೆ ಸಂತೋಷ ಪೊಲೀಸ್ ಟ್ರೇನಿಂಗ್ ಇದೆ ಅಂತಾ ಪತ್ನಿಯನ್ನು ತವರು ಮನೆಗೆ ಕಳುಹಿಸುತ್ತಾನೆ. ಪ್ರೇಮಿಗಳಿಬ್ಬರು ಸಂಸಾರ ಮಾಡಿದ್ದು ಕೇವಲ 7 ತಿಂಗಳು. ಇದರ ಬಳಿಕ ಸಂತೋಷ ಪದೇ ಪದೇ ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಾನೆ. ಈಗಾಗಲೇ ಕುಟುಂಬಸ್ಥರು ಮದುವೆಯ ಸಮಯದಲ್ಲಿ 2 ಲಕ್ಷ ಮತ್ತು ಚಿನ್ನದ ಉಂಗುರು ಸೇರಿದಂತೆ ಪಾತ್ರೆ ಪಗಡೆ ಎಲ್ಲವನ್ನೂ ನೀಡಿದ್ದರು. ಈಗ ಮತ್ತ ಮೂರು ಲಕ್ಷ ಹಣಬೇಕೆಂದು ಒತ್ತಾಯ ಮಾಡುತ್ತಾನೆ.
ಇದನ್ನೂ ಓದಿ: ಶಿವಮೊಗ್ಗ ಏರ್ಪೋರ್ಟ್ನಿಂದ ಹೈದರಾಬಾದ್, ತಿರುಪತಿ, ಗೋವಾಕ್ಕೂ ವಿಮಾನ ಹಾರಾಟ: ಎಂದಿನಿಂದ? ಇಲ್ಲಿದೆ ವೇಳಾಪಟ್ಟಿ
ಪತ್ನಿಯನ್ನು ತವರು ಮನೆಯಿಂದ ಕರೆದುಕೊಂಡು ಬರುವುದಿಲ್ಲ. ಈ ನಡುವೆ ಯುವತಿಯ ತಂದೆಯು ಈ ವರದಕ್ಷಿಣೆ ವಿಚಾರದಿಂದ ಬೇಸರಗೊಂಡು ಅನಾರೋಗ್ಯದಿಂದ ಮೃತಪಡುತ್ತಾರೆ. ಪೊಲೀಸ್ ಆತನ ತಾಯಿ ದುರ್ಗಮ್ಮ ಸಹೋದರ ಆನಂದ ಮತ್ತು ಸಂಬಂಧಿ ಪರಶುರಾಮ 2021 ಏಪ್ರೀಲ್ 19 ರಂದು ಸಾಗರದ ಯುವತಿಯ ನಿವಾಸಕ್ಕೆ ರಾಜೀ ಪಂಚಾಯಿತಿಗೆ ಬಂದಿದ್ದರು. ಮತ್ತೆ ಹಣಕ್ಕಾಗಿ ಬೇಡಿಕೆ ಇಡುತ್ತಾರೆ.
ಈ ನಡುವೆ ಪತ್ನಿಗೆ ಜೊತೆ ಪೊಲೀಸ್ ಗಲಾಟೆ ಮಾಡುತ್ತಾನೆ. ರಾಜೀ ಪಂಚಾಯಿತಿಯು ಮುರಿದು ಬೀಳುತ್ತದೆ. ಪೊಲೀಸಪ್ಪನು ನಿರಂತರವಾಗಿ ಪ್ರೀತಿಸಿದ ಮದುವೆಯಾದ ರಂಜಿತಾಗೆ ಮಾನಸಿಕ ಕಿರುಕುಳ. ಮೇಸೇಜ್, ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಾನೆ. ಈ ನಡುವೆ ಪೊಲೀಸ್ಪ್ಪನ ಕಿರುಕುಳದಿಂದ ಬೇಸತ್ತು ರಂಜಿತಾ ಸಾಗರ ಕೋರ್ಟ್ನಲ್ಲಿ ಜೀವನಾಂಶಕ್ಕಾಗಿ ಪತಿ ವಿರುದ್ದ ಕೇಸ್ ಹಾಕಿದ್ದಾರೆ.
ಈ ನಡುವೆ ಪೊಲೀಸ್ನನ್ನು ತನ್ನ ಚಾಣಾಕ್ಷತನ ತೋರಿದ್ದಾನೆ. ಪತ್ನಿ ಬೇಕೆಂದು ಹಗರಿಬೊಮ್ಮನಹಳ್ಳಿಯಲ್ಲಿ ಪತ್ನಿಯ ವಿರುದ್ದ ಕೋರ್ಟ್ನಲ್ಲಿ ಕೇಸ್ ಹಾಕಿದ್ದನು. 2022 ಜುಲೈನಲ್ಲಿ ಕೋರ್ಟ್ ಇಬ್ಬರು ಒಟ್ಟಿಗೆ ಸಂಸಾರ ಮಾಡಿ ಎನ್ನುವ ಆದೇಶ ಕೊಟ್ಟಿತ್ತು. ಪತ್ನಿ ಸಂಸಾರಕ್ಕೆ ರೆಡಿ ಇದ್ದರೂ ಪತಿ ಮಾತ್ರ ಮುಂದೆ ಬರುವುದಿಲ್ಲ. ಈ ನಡುವೆ ಪತ್ನಿಯು ಪತಿಯನ್ನು ಹುಡುಕಿಕೊಂಡು ತುಮಕೂರಿಗೆ ಹೋದ್ರೆ ಅಲ್ಲಿದ್ದ ಮನೆ ಪೊಲೀಸ್ನನ್ನು ಖಾಲಿ ಮಾಡಿದ್ದನು.
ಇದನ್ನೂ ಓದಿ: ಉಡುಪಿ ಕೃಷ್ಣ ಮಠ, ಬಿಜೆಪಿ ಕಚೇರಿ ಬ್ಲಾಸ್ಟ್ಗೆ ಪ್ಲಾನ್: ಎನ್ಐಎ ತನಿಖೆಯಲ್ಲಿ ಸ್ಪೋಟಕ ರಹಸ್ಯ ಬಯಲು
ರಾಜೀ ಪಂಚಾಯಿತಿ ಒಟ್ಟಿಗೆ ಸಂಸಾರದ ಆದೇಶ ಪೊಲೀಸ್ ಪಾಲಿಸುವುದಿಲ್ಲ. ಸುಮಾರು ಎರಡೂವರೆ ವರ್ಷ ಕೋರ್ಟ್ಗೆ ಆತ ಹಾಜರು ಆಗದೇ ನೂರೆಂಟು ಕಾರಣ ಕೊಟ್ಟು ಬಚಾವ್ ಆಗಿದ್ದನು. ಈ ನಡುವೆ ಮತ್ತೆ ಬುದ್ದಿವಂತಿಕೆಯಿಂದ ಪತ್ನಿಯು ಸಂಸಾರ ಮಾಡಲು ಬರಲಿಲ್ಲ. ತನಗೆ ವಿಚ್ಛೇದನ ಬೇಕೆಂದು ಕೋರ್ಟ್ ನಲ್ಲಿ ಪತ್ನಿ ವಿರುದ್ಧ ಕೇಸ್ ಹಾಕಿದ್ದಾನೆ. ಈ ವಿಚ್ಚೇಧನ ಕೇಸ್ ಹಾಕುವ ಮೊದಲೇ ಪೊಲೀಸ್ ಪ್ಪನು ಹೊಸಪೇಟೆಯ ಸೀತಾ ಯಾನೆ ಶಿಲ್ಪಾ ಎನ್ನುವ ಯುವತಿಯ ಜೊತೆ ಹಂಪಿಯಲ್ಲಿ 2022 ಡಿಸೆಂಬರ್ ನಲ್ಲಿ ಮ್ಯಾರೇಜ್ ಆಗಿದ್ದಾನೆ. ಈ ನಡುವೆ ಎರಡನೇ ಪತ್ನಿಯು ಈಗ ಗರ್ಭಣಿ ಆಗಿದ್ದಾಳೆ. ಎರಡನೇ ಪತ್ನಿಯ ಜೊತೆ ಪೊಲೀಸ್ ಪ್ಪನು ಈಗ ತುಮಕೂರಿನಲ್ಲಿ ಸಂಸಾರ ಮಾಡುತ್ತಿದ್ದಾನೆ.
ಪ್ರೀತಿಸಿ ಮದುವೆಯಾದ ತಪ್ಪಿಗಾಗಿ ಮೊದಲ ಪತ್ನಿಯು ಪರದಾಡುತ್ತಿದ್ದಾಳೆ. ಕೇವಲ 7 ತಿಂಗಳು ಸಂಸಾರ ಮಾಡಿ ಪತಿಯು ಕೈಕೊಟ್ಟಿದ್ದಾನೆ. ಈಗಾಗಲೇ ಸಾಗರ ನಗರದ ಪೊಳೀಸ್ ಠಾಣೆಯಲ್ಲಿ ಡೈವರ್ಸ್ ಇಲ್ಲದೇ ಎರಡನೇ ಮದುವೆ ಮತ್ತು ವರದಕ್ಷಿಣೆ ಕಿರುಕುಳ ಪತಿ ಮತ್ತು ಅತ್ತೆ ವಿರುದ್ಧ ಮೊದಲ ಪತ್ನಿ ರಂಜಿತಾ ದೂರು ನೀಡಿದ್ದಾಳೆ. ಆದರೆ ವಂಚನೆ ಮಾಡಿರುವ ಪತಿಯು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಹಿನ್ನಲೆಯಲ್ಲಿ ಸಾಗರ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲವೆನ್ನುವುದು ಸಂತ್ರಸ್ತೆ ವಂಚನೆಗೊಳಗಾದ ಪೊಲೀಸ್ ಪ್ಪನ ಮೊದಲ ಪತ್ನಿ ಆರೋಪವಾಗಿದೆ. ತಮಗೆ ನ್ಯಾಯಬೇಕು. ಪತಿ ವಿರುದ್ಧ ಕ್ರಮ ತೆಗೆದುಕೊಂಡು ತನ್ನ ಸಂಸಾರ ಸರಿ ಮಾಡಬೇಕೆಂದು ರಂಜಿತಾ ಮತ್ತು ಆಕೆಯ ಕುಟುಂಬಸ್ಥರು ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.
ಬಿಎಸ್ಸಿ, ಬಿ.ಎಡ್ ಮಾಡಿಕೊಂಡ ಪದವಿಧರೆ ರಂಜಿತಾ ಸಾಗರದಲ್ಲಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳು. ಪ್ರೀತಿಸಿ ಪೊಲೀಸ್ ಪ್ಪನ ಜೊತೆ ಮದುವೆಯಾದ ಬಳಿಕ ಅವಳ ಬದುಕು ಮೂರಾಬಟ್ಟೆಯಾಗಿದೆ. ಶಿಕ್ಷಕಿ ಕೆಲಸ ಬಿಟ್ಟು ಪೊಲೀಸಪ್ಪನ ಜೊತೆ ಮದುವೆಯಾಗಿದ ತಪ್ಪಿಗೆ ರಂಜಿತಾ ವನವಾಸ ಅನುಭವಿಸುತ್ತಿದ್ದಾಳೆ. ಪೊಲೀಸ್ ಪ್ಪನು ಪ್ರೀತಿಸಿ ಮದುವೆಯಾದ ರಂಜಿತಾಗೆ ಕೈಕೊಟ್ಟು ಈಗ ಎರಡನೇ ಮದುವೆಯಾಗಿದ್ದಾನೆ. ಪೊಲೀಸ್ ಇಲಾಖೆಗೆ ಕಳಂಕವಾಗಿರುವ ಸಂತೋಷ ವಿರುದ್ದ ಸಾಗರ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗುವ ಮೂಲಕ ಮೋಸದ ಹೋದ ರಂಜಿತಾಗೆ ನ್ಯಾಯಕೊಡಿಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.