ಶಿವಮೊಗ್ಗ: ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚನೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಅನುಮೋದನೆ ನೀಡಿದ್ದಾರೆ. ಇದೇ ಬೆನ್ನಲ್ಲೇ ಈಗ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿ ಶಿವಮೊಗ್ಗದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ್ದಾರೆ. 4.7 ವರ್ಷಕ್ಕೆ ಅಂದ್ರೆ ಆರು ತಿಂಗಳ ಮೊದಲೇ 7 ನೇ ವೇತನ ಆಯೋಗಕ್ಕೆ ಸಮಿತಿ ಸರ್ಕಾರ ರಚನೆ ಮಾಡಿದೆ. ಇಷ್ಟು ಬೇಗನೆ 7ನೇ ವೇತನ ಆಯೋಗ ಸಮಿತಿ ರಚನೆ ಮಾಡಿರುವುದು ಇತಿಹಾಸ ಆಗಿದೆ ಎಂದರು.
ಸಂಘದ ಮನವಿಗೆ ಸ್ಪಂದಿಸಿ ನಿವೃತ್ತ ಐಎಎಸ್ ಅಧಿಕಾರಿ ಕೆ. ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ ಆಯೋಗ ರಚನೆಗೆ ಆದೇಶ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಂಘದ ಪರ ಅಭಿನಂದನೆ ಸಲ್ಲಿಸುತ್ತೇನೆ. ಈ ವೇತನ ಆಯೋಗ ರಚನೆ ಹಿಂದೆ ಮಾಜಿ ಸಿಎಂ ಅವರ ಪಾತ್ರ ಇದೆ. ಆರು ತಿಂಗಳ ಒಳಗೆ ವರದಿ ನೀಡಲು ಸರ್ಕಾರ ಕಾಲ ಮಿತಿ ನೀಡಿತ್ತು. ಮಾರ್ಚ್ ಒಳಗೆ ವೇತನ ಆಯೋಗ ವರದಿ ನೀಡುವ ವಿಶ್ವಾಸ ಇದೆ. 7ನೇ ವೇತನ ಆಯೋಗ ಜಾರಿ ಶೀಘ್ರದಲ್ಲೇ ಸರ್ಕಾರಿ ನೌಕರರಿಗೆ ಸಿಗಲಿದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುತ್ತೇವೆ ಎಂದು ಸಿಎಸ್ ಷಡಾಕ್ಷರಿ ಅವರು ಸುದ್ದಿಘೋಷ್ಠಿಯಲ್ಲಿ ತಿಳಿಸಿದರು.
7ನೇ ವೇತನ ಜಾರಿಯಿಂದ ಸರ್ಕಾರಕ್ಕೆ 12.5 ಸಾವಿರ ಕೋಟಿ ಹೊರೆ ಆಗದಿದೆ. ನಿವೃತ್ತ ನೌಕರರು ಸೇರಿ ಒಟ್ಟು 11 ಲಕ್ಷ ನೌಕರರಿಗೆ ಅನುಕೂಲ ಆಗಲಿದೆ. ಸರ್ಕಾರಿ ನೌಕರರು ಉತ್ತಮ ಸೇವೆ ಹಿನ್ನಲೆ ರಾಜ್ಯವು ಅಭಿವೃದ್ಧಿಯಲ್ಲಿ ಐದನೇ ಸ್ಥಾನದಲ್ಲಿದೆ. ಸಿಎಂ ಒಂದು ಘಂಟೆ ಹೆಚ್ಚು ಕೆಲಸ ಮಾಡಲು ಸೂಚನೆ ನೀಡಿದ್ದರು. ಆದರೆ ಈಗಾಗಲೇ ಸರ್ಕಾರಿ ನೌಕರರು ಮೂರು ಘಂಟೆ ಹೆಚ್ಚು ಕೆಲಸ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ: ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚನೆ
ಸಿಎಂ ಬಸವರಾಜ ಬೊಮ್ಮಾಯಿ ಅವರು, ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚನೆಗೆ ಅನುಮೋದನೆ ನೀಡಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಪಿ.ಬಿ. ರಾಮಮೂರ್ತಿ, ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ನಿವೃತ್ತ ಪ್ರಧಾನ ನಿರ್ದೇಶಕರಾದ ಶ್ರೀಕಾಂತ್ ಬಿ. ವನಹಳ್ಳಿ ಅವರನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿದ್ದು, ಮೂಲಸೌಕರ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
Published On - 1:34 pm, Sun, 20 November 22