ಟಿಕೆಟ್ ನೀಡದಿದ್ದರೆ ಏನಂತೆ, ಒಬ್ಬ ಕಾರ್ಯಕರ್ತನಾಗಿ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡುತ್ತೇನೆ: ಕೆಎಸ್ ಈಶ್ವರಪ್ಪ
ವಯಸ್ಸು 75 ದಾಟಿದೆ ನಿಜ ಆದರೆ ಈಗಲೂ 25ರ ಯುವಕನಂತೆ ಕೆಲಸ ಮಾಡುತ್ತೇನೆ ಎಂದು ಈಶ್ವರಪ್ಪ ಎದೆಯುಬ್ಬಿಸಿ ಹೇಳಿದರು.
ಶಿವಮೊಗ್ಗ: ಬಿಜೆಪಿ ಶಾಸಕ ಕೆ ಎಸ್ ಈಶ್ವರಪ್ಪ (KS Eshwarappa) ಅವರ ಕಾಲಿಗೆ ಪೆಟ್ಟಾಗಿದೆ, 12 ವರ್ಷಗಳ ಹಿಂದೆ ಆಗಿದ್ದ ಗಾಯ ಈಗ ಮರುಕಳಿಸಿದೆ ಅಂತ ಅವರು ಶಿವಮೊಗ್ಗದಲ್ಲಿ ಸುದ್ದಿಗಾರರಿಗೆ ಬುಧವಾರ ಹೇಳಿದರು. ಅವರಿಗೆ ಈ ಬಾರಿ ಟಿಕೆಟ್ (ticket) ಸಿಗಲ್ಲ ಎಂದು ಹರಡಿರುವ ವದಂತಿಗೆ ಪ್ರತಿಕ್ರಿಯಿಸದ ಈಶ್ವರಪ್ಪ, ಟಿಕೆಟ್ ನೀಡದಿದ್ದರೂ ಯಾವುದೇ ಸಮಸ್ಯೆಯಿಲ್ಲ, ಪಕ್ಷದ ಕಾರ್ಯಕರ್ತನಾಗಿ (worker) ದುಡಿಯುತ್ತೇನೆ, ಬಿಜೆಪಿ ಕಾರ್ಯಕರ್ತರ ವೈಶಿಷ್ಟ್ಯತೆಯೇ ಅದು, ಅವರು ಯಾವತ್ತೂ ಟಿಕೆಟ್ ಗಾಗಿ, ಕುರ್ಚಿಗಾಗಿ ಆಸೆ ಇಟ್ಟುಕೊಳ್ಳುವುದಿಲ್ಲ ಎಂದು ಅವರು ಹೇಳಿದರು. ವಯಸ್ಸು 75 ದಾಟಿದೆ ನಿಜ ಆದರೆ ಈಗಲೂ 25ರ ಯುವಕನಂತೆ ಕೆಲಸ ಮಾಡುತ್ತೇನೆ ಎಂದು ಈಶ್ವರಪ್ಪ ಎದೆಯುಬ್ಬಿಸಿ ಹೇಳಿದರು.