ಪ್ರಧಾನಿ ಮೋದಿ ಭಾಷಣ ಮಾಡುವ ಕೆಂಪುಕೋಟೆ ಶಹಾಜಹಾನ್ ಕಟ್ಟಿಸಿದ್ದು, ಪ್ರತಾಪ್ ಸಿಂಹ ಅದನ್ನೂ ಒಡೆದುಹಾಕಲಿ: ಸಿಎಮ್ ಇಬ್ರಾಹಿಂ
. ಹಿಂದೆ ಪತ್ರಕರ್ತನಾಗಿ ಕೆಲಸ ಮಾಡಿದ್ದ ಪ್ರತಾಪ ಸಿಂಹ ಜ್ಞಾನವನ್ನು ಹಂಚಬೇಕೇ ಹೊರತು ಅಜ್ಞಾನವನ್ನಲ್ಲ ಎಂದು ಇಬ್ರಾಹಿಂ ಕುಟುಕಿದರು.
ಮೈಸೂರು: ಜೆಡಿ(ಎಸ್) ರಾಜ್ಯಾಧ್ಯಕ್ಷ ಸಿ ಎಮ್ ಇಬ್ರಾಹಿಂ (CM Ibrahim) ಮೈಸೂರಲ್ಲಿ ಇಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ವಿರುದ್ಧ ಬೆಂಕಿಯುಗುಳಿದರು. ನಗರದಲ್ಲಿ ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡಿದ ಅವರು, ಸಂಸದರು ಮುಸಲ್ಮಾನರ ವಿರುದ್ಧ ವಿಷಕಾರುವ ಮಾತುಗಳನ್ನು ಮಾತ್ರ ಆಡುತ್ತಾರೆ, ನಂಜುಂಡನಿಗೆ ವಜ್ರ ಕೊಟ್ಟಿದ್ದು ಟಿಪ್ಪು ಸುಲ್ತಾನ್ (Tipu Sultan ) ಅದನ್ನವರು ವಾಪಸ್ಸು ಪಡೆದು ಟಿಪ್ಪು ಕುಟುಂಬಸ್ಥರಿಗೆ ನೀಡುತ್ತಾರಾ? ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭಾಷಣ ಮಾಡುವ ಕೆಂಪುಕೋಟೆ ಮುಸಲ್ಮಾನ ದೊರೆ ಶಹಜಹಾನ್ ಕಟ್ಟಿಸಿದ್ದು ಸಂಸದರ ಚಿಕ್ಕಪ್ಪ ಅಲ್ಲ. ತಾಜ್ ಮಹಲ್ ಕೂಡ ಅದೇ ದೊರೆ ಕಟ್ಟಿಸಿದ್ದು. ಪ್ರತಾಪ್ ಸಿಂಹ ಅವುಗಳನ್ನೂ ಒಡೆಸಿಬಿಡಲಿ ಎಂದು ಇಬ್ರಾಹಿಂ ಹೇಳಿದರು. ಹಿಂದೆ ಪತ್ರಕರ್ತನಾಗಿ ಕೆಲಸ ಮಾಡಿದ್ದ ಪ್ರತಾಪ ಸಿಂಹ ಜ್ಞಾನವನ್ನು ಹಂಚಬೇಕೇ ಹೊರತು ಅಜ್ಞಾನವನ್ನಲ್ಲ ಎಂದು ಇಬ್ರಾಹಿಂ ಕುಟುಕಿದರು.
Latest Videos