ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ಆರೋಪಿಗೆ ಜಾಮೀನು ನೀಡಿದ ಎನ್ಐಎ ವಿಶೇಷ ಕೋರ್ಟ್

| Updated By: ರಮೇಶ್ ಬಿ. ಜವಳಗೇರಾ

Updated on: Nov 23, 2022 | 4:45 PM

ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ವಿಶೇಷ ಕೋರ್ಟ್ 9ನೇ ಆರೋಪಿಗೆ ಜಾಮೀನು ನೀಡಿದೆ.

ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ಆರೋಪಿಗೆ ಜಾಮೀನು ನೀಡಿದ ಎನ್ಐಎ ವಿಶೇಷ ಕೋರ್ಟ್
ಬಜರಂಗದಳದ ಕಾರ್ಯಕರ್ತ ಹರ್ಷ
Follow us on

ಬೆಂಗಳೂರು: ಶಿವಮೊಗ್ಗ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ (Harsha Murder) ಆರೋಪಿಗೆ ಜಾಮೀನು ಸಿಕ್ಕಿದೆ. 9ನೇ ಆರೋಪಿ ಸೈಯದ್ ನದೀಮ್​ಗೆ ಎನ್ಐಎ ವಿಶೇಷ ಕೋರ್ಟ್(NIA Special Court) ಷರತ್ತುಬದ್ಧ ಜಾಮೀನು ನೀಡಿ ಇಂದು(ನವೆಂಬರ್ 23) ಆದೇಶ ಹೊರಡಿಸಿದೆ.

ಹರ್ಷ ಕೊಲೆ ನಡೆಯುವ ಕೆಲ ಗಂಟೆ ಮೊದಲು ಹತ್ಯೆಗೆ ಸ್ಕೆಚ್; ಮಹತ್ವದ ವಿಚಾರಗಳು ಬಹಿರಂಗ

ಕೊಲೆ ಮಾಡಿದ ಆರೋಪಿಗೆ ಆಶ್ರಯ ನೀಡಿದ ಆರೋಪದಡಿಯಲ್ಲಿ ಸೈಯದ್ ನದೀಮ್​ನನ್ನು ಬಂಧಿಸಲಾಗಿತ್ತು. ಆದ್ರೆ, ಮಂಡಿಸಿದರು. ಇದನ್ನು ಆಲಿಸಿದ ಎನ್ಐಎ ವಿಶೇಷ ಕೋರ್ಟ್ ನ್ಯಾ.ಸಿ.ಎಂ.ಗಂಗಾಧರ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದರು.

ಫೆಬ್ರವರಿ 20ರಂದು ರಾತ್ರಿ 9 ಗಂಟೆ ಸಮಯದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿತ್ತು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಎನ್​ಐಎಗೆ ವಹಿಸಿದ್ದು, ತನಿಖೆ ಮುಂದುವರಿದಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ