ಶಿವಮೊಗ್ಗ, ಆ.02: ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿರುವ ತುಂಗಾ ಡ್ಯಾಂ(Tunga Dam) ಭರ್ತಿಯಾದ ಹಿನ್ನೆಲೆ ಜಲಾಶಯದ 500 ಮೀಟರ್ ವ್ಯಾಪ್ತಿಯಲ್ಲಿ ಆಗಸ್ಟ್ 3 ರಿಂದ ಸೆಪ್ಟೆಂಬರ್ 2 ರವರೆಗೆ ಒಂದು ತಿಂಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. ಜಲಾಶಯ ಭರ್ತಿಯಾಗಿರುವ ಹಿನ್ನೆಲೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಗೆ ಆಗಮಿಸುತ್ತಿರುವ ಹಿನ್ನೆಲೆ ಪ್ರವಾಸಿಗರು ಹಾಗೂ ಜಲಾಶಯದ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಇತ್ತ ಭದ್ರಾ ಡ್ಯಾಂ ನಿಂದ ನಿನ್ನೆ(ಆ.01) 65 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡುಗಡೆ ಮಾಡಿದ್ದಾರೆ. ಡ್ಯಾಂನಿಂದ ದೊಡ್ಡ ಪ್ರಮಾಣದಲ್ಲಿ ಬಿಟ್ಟ ನೀರಿನಿಂದ ದೊಡ್ಡ ಅವಾಂತರವೇ ಭದ್ರಾವತಿ ನಗರ ಮತ್ತು ತಾಲೂಕಿನಲ್ಲಿ ಸೃಷ್ಟಿಯಾಗಿದೆ. ಭದ್ರಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಹೊಸ ಸೇತುವೆ ಸಂಪೂರ್ಣವಾಗಿ ಮುಳುಗಿ ಹೋಗಿದೆ. ಹೊಸ ಸೇತುವೆ ಸಂಚಾರ ಕಡಿತಗೊಂಡಿದೆ. ಹೊಸ ಸೇತುವೆ ಅಕ್ಕಪಕ್ಕದ ಬಡಾವಣೆಗಳಿಗೂ ನೀರು ನುಗ್ಗಿ ದೊಡ್ಡ ಅವಾಂತರ ಸೃಷ್ಟಿ ಮಾಡಿದೆ. ನೂರಾರು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥವಾಗಿದೆ. ಮನೆಯಲ್ಲಿರುವ ಅಗತ್ಯದ ವಸ್ತುಗಳು ನೀರುಪಾಲಾಗಿವೆ.
ಇದನ್ನೂ ಓದಿ:ವಿಜಯನಗರ; ತುಂಗಾಭದ್ರ ಜಲಾಶಯದ ಹಿನ್ನೀರಿನಲ್ಲಿ ಪ್ರವಾಸಿಗರ ಹುಚ್ಚಾಟ, ವಿಡಿಯೋ ನೋಡಿ
ಭದ್ರಾವತಿಯಲ್ಲಿ ಮೂರು ಕಾಳಜಿ ಕೇಂದ್ರ ಓಪನ್ ಮಾಡಲಾಗಿದೆ. ಭದ್ರಾವತಿ ನಗರಕ್ಕೆ ಭದ್ರಾ ನದಿಯ ನೆರೆ ಬಂದಿದ್ದು, ಜನರನ್ನು ಬೆಚ್ಚಿಬಿಳಿಸಿದೆ. ಸದ್ಯ ಡ್ಯಾಂ ನಿಂದ ಇದೇ ರೀತಿ ನೀರು ಬಿಟ್ಟರೇ ಭದ್ರಾ ತೀರಿದ ಮತ್ತಿಷ್ಟು ಬಡಾವಣೆಗಳಿಗೆ ನೀರು ನುಗ್ಗಿ ಸಮಸ್ಯೆಗಳನ್ನು ಮಾಡುವುದು ಗ್ಯಾರಂಟಿ. ಇದಕ್ಕೆಲ್ಲ ಶಾಶ್ವತ ಪರಿಹಾರ ಬೇಕಿದೆ. ಭದ್ರಾವತಿ ನಗರದ ತುಂಗಾ ನದಿ ತೀರಿದ ತಗ್ಗು ಪ್ರದೇಶಗಳಿಗೆ ತಡೆಗೋಡೆ ನಿರ್ಮಾಣ ಮಾಡಬೇಕಿದೆ. ಅಂದರೆ ಮಾತ್ರ ಭದ್ರೆ ನೆರೆಯಿಂದ ಸಂತ್ರಸ್ತರಿಗೆ ಮುಕ್ತಿ ಸಿಗಲು ಸಾಧ್ಯ. ಭದ್ರಾ ನದಿ ಹೊಡೆತಕ್ಕೆ ಭದ್ರಾವತಿಯ ಜನರು ನಲುಗಿ ಹೋಗಿದ್ದಾರೆ. ಇದೇ ರೀತಿ ಡ್ಯಾಂನಿಂದ ಇನ್ನೂ ಹೆಚ್ಚು ನೀರು ಬಿಟ್ಟರೆ ಭದ್ರಾದ ನದಿ ಪಾತ್ರದ ಜನರಿಗೆ ಮತ್ತಷ್ಟ ಸಂಕಷ್ಟಗಳು ಎದುರಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ